ಪುತ್ತೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕುಂಬ್ರ ವಲಯದ ಕುಂಬ್ರ ಒಕ್ಕೂಟದ ನವಚೇತನ ಸಂಘದ ಸದಸ್ಯೆ ವಿಂದ್ಯರವರ ಪತಿ ಜಗದೀಶ್ ಗೌಡ ಪರ್ಪುಂಜರವರು ಇತ್ತೀಚೆಗೆ ಕೆದಂಬಾಡಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ವಿದ್ಯುತ್ ಶಾಕ್ ತಗುಲಿ ಬಿದ್ದು ಗಾಯಗೊಂಡಿದ್ದು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೇಗೆ ಚಿಕಿತ್ಸೆಗೆ ಸುಮಾರು 8 ಲಕ್ಷ ರೂ. ಖರ್ಚಾಗಿದ್ದು ಆರ್ಥಿಕವಾಗಿ ತೀರಾ ಹಿಂದುಳಿದ ಕುಟುಂಬವಾಗಿರುವುದರಿಂದ ಕುಂಬ್ರ ಒಕ್ಕೂಟ ದ ವತಿಯಿಂದ 20,100 ರೂಪಾಯಿಗಳನ್ನು ಜಗದೀಶ್ರವರ ಪತ್ನಿ ವಿಂದ್ಯಾರವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಆನಂದ ಕೆ, ಒಕ್ಕೂಟದ ವಲಯ ಅಧ್ಯಕ್ಷ ಎಸ್ ಮಾಧವ ರೈ ಕುಂಬ್ರ, ಶ್ರೀ ರಾಮ ಭಜನಾ ಮಂದಿರದ ಅಧ್ಯಕ್ಷ ರಾಜೇಶ್ ರೈ ಪರ್ಪುಂಜ, ಮೇಲ್ವಿಚಾರಕರಾದ ಸುನಿತಾ ಶೆಟ್ಟಿ ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಅಶ್ವಿನಿ, ಸೇವಾಪ್ರತಿನಿಧಿ ಶಶಿಕಲಾ ರೈ ಹಾಗೂ ಒಕ್ಕೂಟದ ಪದಾಧಿಕಾರಿಗಳಾದ ರಾಮಕೃಷ್ಣ ನಾಯ್ಕ್ ಮುಡಾಲ, ರಾಜೀವಿ ಕುಂಬ್ರ, ರೇವತಿ ರೈ ಕುಂಬ್ರ, ಬದ್ರುನ್ನಿಸ ಪರ್ಪುಂಜ, ಸಂಗೀತ ರಾಜ್ ಪರ್ಪುಂಜ, ಸುಶೀಲ ಪರ್ಪುಂಜ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಧನ ಸಹಾಯಕ್ಕೆ ಮನವಿ
ಆರ್ಯಾಪು ಗ್ರಾಮದ ಗುಳಿಗಜರಿ ನಿವಾಸಿಯಾಗಿರುವ ಜಗದೀಶ ಗೌಡರವರು ವಿದ್ಯುತ್ ವಯರಿಂಗ್ ಕೆಲಸ ಮಾಡುತ್ತಿದ್ದು ಇತ್ತೀಚೆಗೆ ಕೆದಂಬಾಡಿ ಸರಕಾರಿ ಶಾಲೆಯಲ್ಲಿ ವಯರಿಂಗ್ ಕೆಲಸ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ತಗುಲಿ ಬಿದ್ದು ಗಂಭೀರ ಗಾಯಗೊಂಡಿದ್ದರು. ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿ ಚಕಿತ್ಸೆ ಪಡೆಯುತ್ತಿದ್ದರು. ಅಲ್ಲಿ ಸುಮಾರು 8 ಲಕ್ಷ ರೂ.ಖರ್ಚಾಗಿದ್ದು ಬಳಿಕ ಇದೀಗ ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಳೆದ ಎರಡು ತಿಂಗಳಿನಿಂದ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ರವರ ಕುಟುಂಬ ತೀರಾ ಬಡತನದಲ್ಲಿದ್ದು ಆರ್ಥಿಕವಾಗಿ ಬಹಳ ಕಷ್ಟದಲ್ಲಿದ್ದಾರೆ. ಇಬ್ಬರು ಪುಟ್ಟ ಮಕ್ಕಳನ್ನು ಹೊಂದಿದ್ದಾರೆ. ಕೋಮಸ್ಥಿತಿಯಲ್ಲಿರುವ ಜಗದೀಶ್ ಗೌಡರವರ ಚಿಕಿತ್ಸೆಗೆ ಇನ್ನೂ ಕೂಡ ಹಣದ ಅವಶ್ಯಕತೆ ಇರುವುದರಿಂದ ದಾನಿಗಳ ನೆರವನ್ನು ಕುಟುಂಬ ಯಾಚಿಸಿದೆ. ಧನ ಸಹಾಯ ಮಾಡುವವರು ವಿಂದ್ಯಾರವರ ಮೊಬೈಲ್ ನಂಬರ್ 9449332572 ಗೆ ಕರೆ ಮಾಡಬಹುದು ಅಥವಾ ಅವರ ಅಕೌಂಟ್ ನಂಬರ್ 09452200006242 , ಐಎಫ್ಸಿಕೋಡ್ ಸಿಎನ್ಆರ್ಬಿ0010945 ಗೆ ಧನ ಸಹಾಯ ಮಾಡಬಹುದು ಎಂದು ಜಗದೀಶ್ ಗೌಡರವರ ಪತ್ನಿ ವಿಂದ್ಯಾರವರು ಮನವಿ ಮಾಡಿಕೊಂಡಿದ್ದಾರೆ.