ಈಶ್ವರಮಂಗಲದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಈಶ್ವರಮಂಗಲ: ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವಾಗ ಅನೇಕ ಜನಪರ ಕೆಲಸಗಳನ್ನು ಮಾಡಿದೆ. ಈ ಬಾರಿ ಚುನಾವಣೆಯಲ್ಲಿ ಗೆದ್ದರೆ ಮಹಿಳೆಯರಿಗೆ ಮಾಸಿಕ ರೂ 2,000 ಮತ್ತು ಪ್ರತೀ ಮನೆಗೆ 250 ಯೂನಿಟ್ ವಿದ್ಯುತ್ತನ್ನು ಉಚಿತವಾಗಿ ನೀಡುವ ಭರವಸೆಯನ್ನು ಪಕ್ಷ ನೀಡಿದೆ. ಪಕ್ಷದ ಭರವಸೆ ಮತ್ತು ಅಭಿವೃದ್ಧಿ ಕೆಲಸವನ್ನು ಪ್ರತಿ ಮನೆಗಳಿಗೆ ತಲುಪಿಸಿದರೆ ಮುಂದಿನ ಪುತ್ತೂರು ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ, ರಾಜ್ಯದಲ್ಲಿಯೂ ಕಾಂಗ್ರೆಸ್ ಆಡಳಿತ ನಡೆಸಲಿದೆ ಎಂದು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ ಹೇಳಿದರು.

ಈಶ್ವರಮಂಗಲ ಅನುಗ್ರಹ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ್ ಅಧ್ಯಕ್ಷತೆ ವಹಿಸಿದರು.

ಕಾಂಗ್ರೆಸ್ ನಾಯಕ ಅಶೋಕ್ ರೈ ಕೋಡಿಂಬಾಡಿ ಮಾತನಾಡಿ ಕೆಲವು ಮಂದಿ ಮತದಾರರ ಚೀಟಿಯನ್ನು ಹೊಂದಿಲ್ಲ ಇವರಿಗೆ ಗುರುತಿನ ಚೀಟಿ ಮಾಡಬೇಕಾಗಿದೆ. ತಾಲೂಕಿನಲ್ಲಿ ವ್ಯಾಪಕವಾಗಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಶಾಸಕರು ಮೌನವಾಗಿದ್ದಾರೆ. ಯಾರಿಗೆ ಕಾಂಗ್ರೆಸ್ ಟಿಕೆಟ್ ಸಿಕ್ಕಿದರೂ ಒಗ್ಗಟ್ಟಿನಲ್ಲಿ ಚುನಾವಣೆಯನ್ನು ಎದುರಿಸಿ ಕಾಂಗ್ರೆಸ್ ಪಕ್ಷ ಜಯಭೇರಿ ಗಳಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ನಾಯಕಿ ದಿವ್ಯಪ್ರಭಾ ಗೌಡ ಮಾತನಾಡಿ ಮಹಿಳೆಯರು ಮತ್ತು ಯುವಕರು ಪ್ರಚಾರಕ್ಕೆ ಹೋದರೆ ಕಾಂಗ್ರೆಸ್ಸಿನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಮುಖಂಡ ಶ್ರೀರಾಮ್ ಪಕ್ಕಳ ಮಾತನಾಡಿ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಹಲವಾರು ಜನಪರ ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ ಕಾಂಗ್ರೆಸ್‌ನ ಯೋಜನೆಗಳನ್ನು ಜನತೆಗೆ ತಲುಪಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಾಗಿದೆ ಎಂದು ಹೇಳಿದರು. ಅಶೋಕ್ ರೈ ಅವರು ಕಮಲ ರೈ ಅವರಿಗೆ ಗಾಲಿ ಕುರ್ಚಿ ವಿತರಿಸಿದ್ದರು.

ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ ಭಟ್, ಗ್ರಾ.ಪಂ ಸದಸ್ಯರಾದ ರಾಮ ಮೇನಾಲ, ರವಿರಾಜ ರೈ, ಕಲಾವತಿ, ಸತೀಶ್ ಕೆಡೆಂಜಿ, ಗೋಪಾಲಕೃಷ್ಣ ಬಿ, ಮೂಸಾನ್ ಹಾಜಿ, ಸುರೇಶ್ ನಾಯ್ಕ ಮೇನಾಲ, ವಿಕ್ರಂ ರೈ ಸಾಂತ್ಯ, ರಾಕೇಶ ರೈ ಕುದ್ಕಾಡಿ, ಗುರುಪ್ರಸಾದ್ ರೈ, ಪ್ರಕಾಶ್ ರೈ ಅಬ್ದುಲ್ ರಹಿಮಾನ್ ಹಾಜಿ ಮೇನಾಲ, ಇಸುಬು, ಗಿರೀಶ್ ಕುಮಾರ್ ಸರ್ವತೋಡಿ, ಸೂಫಿ ಬಿ ಎಚ್, ಜುನೈದ್ ಬಡಗನೂರು, ಎಂ ಬಿ ಇಬ್ರಾಹಿಂ ಅಬ್ದುಲ್ ರಹೀಮ್ ರಾಗಾಳಿ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here