ಫೆ.19: ಯಕ್ಷಗಾನ ದಿಗ್ಗಜ ಡಾ|| ಶ್ರೀಧರ ಭಂಡಾರಿ “ಯಕ್ಷದೇಗುಲ’ ಪ್ರಶಸ್ತಿ ಪ್ರದಾನ

0

ಯಕ್ಷಗಾನದ ಸಿಡಿಲಮರಿ, ರಂಗಸ್ಥಳದ ರಾಜ, ಯಕ್ಷನಾಟ್ಯ ಚತುರ, ಶತ ಧಿಗಿಣಗಳ ಸರದಾರ, ಯಕ್ಷಗಾನ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಯಕ್ಷರಂಗದ ದಿಗ್ಗಜ ಪುತ್ತೂರು ಡಾ|| ಶ್ರೀಧರ ಭಂಡಾರಿ ನಮ್ಮನ್ನಗಲಿ 2 ವರ್ಷ. ಆದರೆ ತೆಂಕುತಿಟ್ಟು ಯಕ್ಷಗಾನ ಕ್ಷೇತ್ರದಲ್ಲಿನ ಅವರ ಸಾಧನೆ ಇಂದಿಗೂ ಜೀವಂತ, ಶ್ರೀಧರ ಭಂಡಾರಿ ಕುಟುಂಬದವರು ಈಗ ಅನುಸ್ಮರಣಾ ಕಾರ್ಯಕ್ರಮವೊಂದನ್ನು ಆಯೋಜಿಸುವ ಮೂಲಕ ಯಕ್ಷಗಾನದ ಹಿರಿಯ ದಿಗ್ಗಜನ ಸಂಸ್ಮರಣೆಗೆ ಮುಂದಾಗಿದ್ದು ಫೆಬ್ರವರಿ 19ನೇ ರವಿವಾರದಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರುಗದ್ದೆಯಲ್ಲಿ ಡಾ|| ಶ್ರೀಧರ ಭಂಡಾರಿ ಯಕ್ಷದೇಗುಲ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಈ ಸಮಾರಂಭದಲ್ಲಿ ನಾಡಿನ ಪ್ರಶಸ್ತಿ ಪುರಸ್ಕೃತ ಹಿರಿಯ ಭಾಗವತರಾದ ಕುರಿಯ ಗಣಪತಿ ಶಾಸ್ತ್ರೀಯವರಿಗೆ ಡಾ|| ಶ್ರೀಧರ ಭಂಡಾರಿ ಯಕ್ಷ ದೇಗುಲ ಪ್ರಶಸ್ತಿ ನೀಡಿ ಗೌರವಿಸಲಾಗುವುದು.

ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಡಾ.ಡಿ. ಶ್ಯಾಮಭಟ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ, ಯಕ್ಷಗಾನ ಭಾಗವತ ಸತೀಶ್ ಪಟ್ಲ ಭಾಗವಹಿಸಲಿದ್ದು ವೇಣೂರು ಶ್ರೀಮತಿ ಆಶಾ ವಾಮನ್ ಕುಮಾರ್ ಯಕ್ಷರಕ್ಷ ನಿಧಿಯನ್ನು ಸಮರ್ಪಿಸಲಿದ್ದಾರೆ.

ಸಂಜೆ 5 ರಿಂದ ಆರಂಭಗೊಳ್ಳುವ ಈ ಕಾರ್ಯಕ್ರಮದ ಕೊನೆಯಲ್ಲಿ ಹನುಮಗಿರಿಯ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲಾವಿದರಿಂದ ಶ್ರೀದೇವಿ ಮಹಾತ್ಮೆ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here