ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಕಡಬದ ನಾಲ್ವರು ರಾಷ್ಟ್ರಮಟ್ಟಕ್ಕೆ

0

ಪುತ್ತೂರು: ಕರ್ನಾಟಕ ಮಾಸ್ಟರ್ ಅಥ್ಲೆಟಿಕ್ಸ್ ವತಿಯಿಂದ ಕೋಲಾರ ಪೊಲೀಸ್ ಕವಾಯತು ಕ್ರೀಡಾಂಗಣದಲ್ಲಿ ಫೆ.11 ಮತ್ತು 12ರಂದು ನಡೆದ ರಾಜ್ಯಮಟ್ಟದ 41ನೇ ಮಾಸ್ಟರ್ ಅಥ್ಲೆಟಿಕ್ಸ್‌ನಲ್ಲಿ ಕಡಬದ ನಾಲ್ವರು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.

ಕಡಬ ಕೊಣಾಜೆಯ ಅಲಾಡಿ ನಿವಾಸಿ ಯುವರಾಜ್‌ರವರ ಪತ್ನಿ ರೇಖಾಯುವರಾಜ್‌ರವರು 30 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವಿಭಾಗದಲ್ಲಿ 5000 ಮೀ. ಓಟ ಪ್ರಥಮ, 400 ಮೀ. ಓಟ ಪ್ರಥಮ, 800 ಮೀ. ಓಟ ಪ್ರಥಮ ಹಾಗೂ 200 ಮೀ.ರಿಲೇ ಪ್ರಥಮ ಸ್ಥಾನ ಗಳಿಸಿದ್ದಾರೆ.

ಕೊಣಾಜೆ ಕಡ್ಯ ಬೆಂಗತ್ತಡ್ಕ ನಿವಾಸಿ ದಯಾನಂದರವರ ಪತ್ನಿ ಆಶಾಲತಾ ದಯಾನಂದರವರು 35 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವಿಭಾಗದಲ್ಲಿ 400 ಮೀ. ಓಟ ಪ್ರಥಮ, 500 ಮೀ. ಓಟ ಪ್ರಥಮ, 500 ಮೀ. ನಡಿಗೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಕೊಣಾಜೆ ಕಡ್ಯ ಮಾಳ ನಿವಾಸಿ ಶೀನಪ್ಪ ಗೌಡರ ಪುತ್ರ ಭಾಸ್ಕರ ಗೌಡರವರು 35 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವಿಭಾಗದ 1500 ಮೀ. ಓಟ ಪ್ರಥಮ, 200 ಮೀ. ಓಟ ದ್ವಿತೀಯ, 400 ಮೀ. ಓಟ ದ್ವಿತೀಯ, 200 ಮೀ. ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಡಬದ ಪಂಜ ಬೆಳ್ಳಕೋಡಿ ನಿವಾಸಿ ಕುಶಾಲಪ್ಪ ಗೌಡರ ಪುತ್ರ ರವಿಕುಮಾರ್‌ರವರು 40 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ವಿಭಾಗದ ಡಿಸ್ಕಸ್ ಎಸೆತ ದ್ವಿತೀಯ, ಗುಂಡೆಸೆತ ದ್ವಿತೀಯ, ಈಟಿ ಎಸೆತ ದ್ವಿತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here