ಪುತ್ತೂರು: ಅಲ್ ರಬೀಹ್ ಹೆಲ್ಪಿಂಗ್ ಹ್ಯಾಂಡ್ಸ್ ಇದರ 2024-25 ನೇ ಸಾಲಿನ ವಾರ್ಷಿಕ ಮಹಾಸಭೆ ಪುತ್ತೂರಿನ ಕಮ್ಯೂನಿಟಿ ಸೆಂಟರ್ ನಲ್ಲಿ ನಡೆಯಿತು. ಮಹಾಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಆಸೀಫ್ ಪಾಪೆತಡ್ಕ ವಹಿಸಿದ್ದರು.
ಅಬ್ದುಲ್ ರಝಾಕ್ ಸಾಲ್ಮರ ಕಿರಾಅತ್ ಮೂಲಕ ಸಭೆಗೆ ಚಾಲನೆ ನೀಡಿದರು. 2024-25 ರ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರವನ್ನು ಸಂಸ್ಥೆಯ ಪ್ರ.ಕಾರ್ಯದರ್ಶಿ ರಿಯಾಝ್ ಶಾಂತಿಗೋಡು ಮಂಡಿಸಿದರು. ನಂತರ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಸಿದ್ದೀಕ್ ಗಡಿಪ್ಪಿಲ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಝಾಕ್ ಸಾಲ್ಮರ ಆಯ್ಕೆಯಾದರು. ಉಪಾಧ್ಯಕ್ಷರಾಗಿ ನಾಸಿರ್ ಪರ್ಪುಂಜ, ಕೋಶಾಧಿಕಾರಿಯಾಗಿ ರಿಯಾಝ್ ಶಾಂತಿಗೋಡು ಆಯ್ಕೆಗೊಂಡರು. ಕಾರ್ಯಕಾರಿಣಿ ಸಮಿತಿಯ ಸದಸ್ಯರುಗಳಾಗಿ ಅಜೀರ್ ಕಲ್ಲಡ್ಕ, ಆಸೀಫ್ ಪಾಪೆತ್ತಡ್ಕ, ಹಾರಿಸ್ ಸವಣೂರು, ನೌಶಾದ್ ಕಟ್ಟತ್ತಾರ್, ಉಸ್ಮಾನ್ ಎ ಕೆ, ಸಮದ್ ಮಾಂತೂರು, ಸಾದಿಕ್ ಅರಿಯಡ್ಕ, ಇರ್ಷಾದ್ ಕಾವು ಹಾಗೂ ಫಿರೋಝ್ ಪಾಲ್ತಾಡ್ ಆಯ್ಕೆಗೊಂಡರು.
ಸಮದ್ ಮಾಂತೂರು ಸ್ವಾಗತಿಸಿದರು. ನಾಸಿರ್ ಪರ್ಪುಂಜ ವಂದಿಸಿದರು.