ನರಿಮೊಗರು ಕೂಡುರಸ್ತೆಯಲ್ಲಿ ನಮ ತೆರಿಯೊನುಗ' ಇಚ್ಲಂಪಾಡಿಯಲ್ಲಿ
ಏತ್ ಪಂಡಲಾ ಆತೆ’
ಪುತ್ತೂರು: ‘ಗಯಾಪದ ಕಲಾವಿದರು ಉಬಾರ್’ ರಂಗಭೂಮಿ ತಂಡದ ನಾಟಕಗಳು ಯಶಸ್ವೀ ಪ್ರದರ್ಶನಗೊಳ್ಳುತ್ತಿದ್ದು, ಈ ತಂಡದ ಎರಡು ಕಲಾ ಕಾಣಿಕೆಗಳಾದ ‘ನಮ ತೆರಿಯೊನುಗ’ ನಾಟಕದ ಎರಡನೇ ಪ್ರದರ್ಶನ ಹಾಗೂ ‘ಏತ್ ಪಂಡಲಾ ಆತೆ’ ನಾಟಕದ ಯಶಸ್ವೀ 15 ನೇ ಪ್ರಯೋಗ ಫೆ. 18 ರಂದು ಪ್ರದರ್ಶನಗೊಳ್ಳಲಿದೆ.
ನರಿಮೊಗರು ಕೂಡುರಸ್ತೆ ನೇತಾಜಿ ಯುವಕ ಮಂಡಲದ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಸಲುವಾಗಿ ರಾತ್ರಿ 9.30 ರಿಂದ ಈ ತಂಡದ ‘ನಮ ತೆರಿಯೊನುಗ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕದ ಕಥೆ ರಚನೆ, ಸಂಭಾಷಣೆ ಹಾಗೂ ನಿರ್ದೇಶನವನ್ನು ರವಿಶಂಕರ ಶಾಸ್ತ್ರಿ ಮಣಿಲ ಮಾಡಿದ್ದಾರೆ.
ರಾತ್ರಿ 1 ಗಂಟೆಗೆ ಕಡಬ ತಾಲೂಕಿನ ಇಚ್ಲಂಪಾಡಿ ಶ್ರೀ ಗಂಗಾಧರೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಈ ವರ್ಷದ ಭರ್ಜರಿ ಪ್ರಯೋಗ ಕಂಡ ‘ಏತ್ ಪಂಡಲಾ ಆತೆ’ ನಾಟಕ ಪ್ರದರ್ಶನಗೊಳ್ಳಲಿದೆ. ಈ ನಾಟಕಕ್ಕೆ ಶಶಿಕುಮಾರ್ ಕೂಳೂರು ಕಥೆ ರಚನೆ, ಸಂಭಾಷಣೆ ಹಾಗು ನಿರ್ದೇಶನ ನೀಡಿದ್ದಾರೆ.
ಬಾಲಕೃಷ್ಣ ಪೂಜಾರಿ ಪೆರುವಾಯಿಯವರ ಸಾರಥ್ಯದ ‘ಗಯಾಪದ ಕಲಾವಿದರು’ ತಂಡದ ಕಲಾಕಾಣಿಕೆಗಳು ಜನಮೆಚ್ಚುಗೆ ಗಳಿಸುತ್ತಿದ್ದು, ಪ್ರದರ್ಶನಕ್ಕಾಗಿ ಅನೇಕ ಬುಕಿಂಗ್ ಗಳು ನಡೆಯುತ್ತಿವೆ. ಕಿಶೋರ್ ಜೋಗಿ ಉಬಾರ್ ಸಂಚಾಲಕತ್ವದಲ್ಲಿ, ರಾಜೇಶ್ ಶಾಂತಿನಗರರವರ ಸಲಹೆ ಸಹಕಾರದಲ್ಲಿ, ಕಲಾವಿದರಾಗಿ ಅಶೋಕ್ ಬನ್ನೂರು, ರಾಜಶೇಖರ್ ಶಾಂತಿನಗರ, ರಂಗಯ್ಯ ಬಲ್ಲಾಳ್ ಕೆದಂಬಾಡಿಬೀಡು, ದಿವಾಕರ ಸುರ್ಯ, ಕಿಶನ್ ಸುರ್ಯ, ಅನಿಲ್ ಇರ್ದೆ, ಸತೀಶ್ ಶೆಟ್ಟಿ ಹೆನ್ನಾಳ, ಕಿರಣ್ ಶಾಂತಿ ನಗರ, ಪ್ರೀತಂ ಶಾಂತಿನಗರ, ಚೇತನ್, , ಅನುಷಾ ಜೋಗಿ ಪುರುಷರಕಟ್ಟೆ, ಸಂಧ್ಯಾಶ್ರಿ ಹಿರೆಬಂಡಾಡಿ, ವೈಶಾಲಿ ಎಂ. ಕುಂದರ್ , ಶರಣ್ಯ ರಾಜಾಶೇಖರ್ ಹಾಗೂ ಗಂಗಾಧರ ಟೈಲರ್, ದೀಪಕ್ ಪೈ ರಾಮನಗರ, ರಾಜೇಶ್ ಕೆಮ್ಮಾಯಿ ಭೂಮಿಕೆಯಲ್ಲಿದ್ದಾರೆ.
ಸಿದ್ದು ಬೆದ್ರ ರಂಗಾಲಂಕಾರ, ವೇದಸ್ಯ ಕುಲಾಲ್ ವರ್ಣಾಲಂಕಾರ, ಕಾರ್ತಿಕ ಶಾಸ್ತ್ರಿ ಮಣಿಲ ಸಂಗೀತ, ಕೃಷ್ಣ ಮುಂಡ್ಯರವರ ಧ್ವನಿ ಮತ್ತು ಬೆಳಕಿನಲ್ಲಿ, ಗುಣಕರ ಅಗ್ನಾಡಿಯವರ ಸಹಕಾರದಲ್ಲಿ ನಾಟಕ ಮೂಡಿಬರುತ್ತಿದೆ.