ಪುತ್ತೂರು: ನೆಲ್ಯಾಡಿಯ ಮುಳಿಯ ಸಿಲ್ವರಿಯಾ ಪ್ರಸ್ತುತಪಡಿಸುವ ಗೋಲ್ಡ್ ಚೈನ್ ಅಂಡ್ ಬ್ಯಾಂಗಲ್ ಫೆಸ್ಟ್ ಫೆ.18ರಿಂದ 25ರವರೆಗೆ ನೆಲ್ಯಾಡಿಯ ಮುಳಿಯದಲ್ಲಿ ನಡೆಯಲಿದೆ. ರಾಮನಗರದ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಆಶಾ ಜೋಗಿತ್ತಾಯ ದೀಪೋಜ್ವಲನೆ ಮೂಲಕ ಮುಳಿಯ ಸಿಲ್ವರಿಯಾದ ಗೋಲ್ಡ್ ಚೈನ್ ಅಂಡ್ ಬ್ಯಾಂಗಲ್ ಫೆಸ್ಟ್‌ನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ನೆಲ್ಯಾಡಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹಾಗೂ ಜೇಸಿಐ ನೆಲ್ಯಾಡಿಯ ಅಧ್ಯಕ್ಷರಾದ ದಯಾಕರ್ ರೈ ಕೆ.ಎಂ ಭಾಗವಹಿಸಲಿದ್ದಾರೆ.
ಈ ಉತ್ಸವದಲ್ಲಿ ಗ್ರಾಹಕರು ವಿನಿಮಯ ಮಾಡಿಕೊಳ್ಳುವ ಆಭರಣಗಳಿಗೆ ಅತ್ಯುತ್ತಮ ಬೆಲೆ ನೀಡಲಾಗುತ್ತದೆ. ಬಳೆಗಳ ಮೇಲೆ ವಾ.ಶೇ 8ರಿಂದ ಹಾಗೂ ಚೈನ್‌ಗಳ ಮೇಲೆ ವಾ.ಶೇ 6ರಿಂದ ಪ್ರಾರಂಭವಾಗುತ್ತದೆ. ವೆರೈಟಿ ವಿನ್ಯಾಸದ ಆಕರ್ಷಕ ಚೈನ್‌ಗಳು ಮತ್ತು ನಿತ್ಯ ಬಳಕೆಯ 18 ಕ್ಯಾರೆಟ್ ಬಳೆಗಳ ಅತ್ಯುತ್ತಮ ಸಂಗ್ರಹ ಮುಳಿಯ ಜ್ಯುವೆಲ್ಸ್‌ನ ನೆಲ್ಯಾಡಿಯ ಸಿಲ್ವರಿಯಾ ಮಳಿಗೆಯಲ್ಲಿ ಲಭ್ಯವಿದೆ.
ಗ್ರಾಹಕರ ನೆಚ್ಚಿನ ನಿತ್ಯ ಬಳಕೆಯ ಆಭರಣಗಳನ್ನು ಕೇವಲ 48 ಗಂಟೆಗಳಲ್ಲಿ ತಯಾರಿಸಿ ಕೊಡಲಾಗುವುದು. ಹೆಚ್ಚಿನ ವಿವರಗಳಿಗೆ 9945032916 ಸಂಪರ್ಕಿಸಬಹುದು ಎಂದು ಮುಳಿಯ ಜ್ಯುವೆಲ್ಸ್ ತಿಳಿಸಿದೆ.