ಫೆ.19 ರಿಂದ ಫೆ. 25: ಇರ್ದೆ-ಪಳ್ಳಿತ್ತಡ್ಕ ಉರೂಸ್ ಕಾರ್ಯಕ್ರಮ- ಏಳು ದಿನಗಳ ಧಾರ್ಮಿಕ ಮತಪ್ರವಚನ

0

ಪುತ್ತೂರು: ಐತಿಹಾಸಿಕ ಸೌಹಾರ್ದ ಕೇಂದ್ರ ಹಾಗೂ ವಿವಿಧ ಕರಾಮತ್ತುಗಳಿಂದ ಪ್ರಸಿದ್ದಿ ಪಡೆದ ಇರ್ದೆ -ಪಳ್ಳಿತ್ತಡ್ಕ ದರ್ಗಾ ಶರೀಫ್ ಇದರ 47 ನೇ ಉರೂಸ್ ಸಮಾರಂಭವು ಫೆ. 19 ರಿಂದ 25 ರತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಅಸ್ಸಯ್ಯದ್ ಕೆ ಎಸ್ ಆಟಕೋಯಾ ತಂಙಳ್ ರವರ ಘನ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಫೆ.19 ರಂದು ಉರೂಸ್ ಉದ್ಘಾಟನೆ ನಡೆಯಲಿದ್ದು ಕೊರಿಂಗಿಲ ಜಮಾತ್ ಕಮಿಟಿ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಲ್‌ಹಾಜ್ ಅಸ್ಸಯ್ಯದ್ ಹಾಶಿಂ ಬಾಅಲವಿ ತಂಙಳ್ ಕೊರಿಂಗಿಲ ದುವಾ ನೇತೃತ್ವ ವಹಿಸಲಿದ್ದು , ಕೊರಿಂಗಿಲ ಇಮಾಂ ಅಲ್‌ಹಾಜ್ ಬಿ ಎಚ್ ಅಯ್ಯೂಬ್ ವಹಬಿ ಗಡಿಯಾರ ಉದ್ಘಾಟನೆ ಮಾಡಲಿದ್ದಾರೆ. ಮೂಸಾ ಮದನಿ ಬೀತಂಡ್ಕ ಪ್ರಸ್ತಾವನೆಗೈಯ್ದು ಸ್ವಾಗತಿಸಲಿದ್ದಾರೆ. ಮುಖ್ಯ ಪ್ರಭಾಷಣಗಾರರಾಗಿ ಕರುನಾಗಪಳ್ಳಿ ಜಾಮಿಯಾ ಬಯ್ಯಿನತ್ ನಿರ್ದೇಶಕರಾದ ಅಬ್ದುಲ್ ವಹ್ಹಾಬ್ ನಈಮಿ ಕೊಲ್ಲಂ ರವರು ‘ಸ್ನೇಹಪೂರ್ವಂ ಯುವತಿ ಯುವಾಕಲುಂ’ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ.

ಫೆ. 20 ರಂದು ಹಾಫಿಳ್ ಇ ಪಿ ಅಬೂಬಕ್ಕರ್ ಅಲ್‌ಖಾಸಿಮಿ ಪತ್ತನಾಪುಂರವರು ಇಂಬಮುಳ್ಳ ಕುಟುಂಬಂ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಫೆ. 21 ರಂದು ವಲಿಯ್ಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಅಜ್ಮೀರ್ ಆಧ್ಯಾತಿಕ ಸಂಗಮ ನಡೆಯಲಿದೆ. ಹುಸೈನ್ ದಾರಿಮಿ ರೆಂಜಲಾಡಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಫೆ. 22 ರಂದು ಲುಕ್ಮಾನುಲ್ ಹಕೀಂ ಸಖಾಫಿ ಪುಲ್ಲಾರರವರು ‘ಮರಣವುಂ ಮರಣಾನಂತರ ಜೀವಿದಂ ’ ಎಂಬ ವಿಷಯದಲ್ಲಿ ಪ್ರವಚನ ನೀಡಲಿದ್ದಾರೆ. ಫೆ. 23 ರಂದು ಇಮಾಂ ಶಾಫಿ ಅಕಾಡೆಮಿ ವೈಸ್ ಪ್ರಿನ್ಸಿಪಾಲ್ ಅನ್ವರ್ ಅಲಿ ಹುದವಿ ಮಲಪ್ಪುರಂರವರು ‘ ವಿಲಸುನ್ನ ಮಕ್ಕಳುಂ ವಿದಂಬುನ್ನ ಮಾದಾಪಿದಾಕ್ಕಳುಂ’ ಎಂಬ ವಿಷಯದಲ್ಲಿ ಧಾರ್ಮಿಕ ಪ್ರವಚನ ನೀಡಲಿದ್ದಾರೆ. ಫೆ. 24 ರಂದು ಅಲ್‌ಹಾಜ್ ಅಹ್ಮದ್ ಪೂಕೋಯಾ ತಂಙಳ್ ಪುತ್ತೂರುರವರು ದುವಾ ಆಶೀರ್ವಚನ ನೀಡಲಿದ್ದಾರೆ. ಪಾನೂರು ಅಕ್ಯಾನಿಶ್ಯೇರಿ ಮರ್ಕಝ್ ಮಸ್ಜಿದ್ ಮುದರ್ರಿಸ್ ಹಾಫಿಳ್ ಮುಹಮ್ಮದ್ ಇಲ್ಯಾಸ್ ಸಖಾಫಿ (ಹುಬ್ಬುಲ್ ಹಬೀಬ್) ರವರು ‘ ಇಸ್ಲಾಮಿಲೆ ಆಚಾರವುಂ ಅನಾಚಾರವುಂ’ ಎಂಬ ವಿಷಯದಲ್ಲಿ ಮುಖ್ಯಪ್ರಭಾಷಣ ಮಾಡಲಿದ್ದಾರೆ.

ಫೆ. 25 ರಂದು ಸಮಾರೋಪ ಸಮಾರಂಭ ಹಾಗೂ ಸೌಹಾರ್ದ ಸಂಗಮ ಕಾರ್ಯಕ್ರಮ ನಡೆಯಲಿದ್ದು, ಆಶಿಕ್ ದಾರಿಮಿಒ ಆಲಪ್ಪುಝ ಮುಖ್ಯಪ್ರಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಧಾರ್ಮಿಕ, ರಾಜಕೀಯ ಹಾಗೂ ಸಾಮಾಜಿಕ ಮುಖಂಡರುಗಳು ಭಾಗವಹಿಸಲಿದ್ದಾರೆ.

ವಿಶೇಷವಾಗಿ ಉರೂಸ್ ಕಾರ್ಯಕ್ರಮದ ಏಳುದಿನಗಳಲ್ಲಿಯೂ ಹಗಲು ವೇಳೆ ಬೆಲ್ಲದ ಗಂಜಿ ಸೀರಣಿ ವಿತರಣೆ ನಿರಂತರವಾಗಿ ನಡೆಯಲಿದೆ ಎಂದು ಜಮಾತ್ ಕಮಿಟಿ ಕೊರಿಂಗಿಲ ಹಾಗೂ ಉರೂಸ್ ಕಮಿಟಿ ಇರ್ದೆ-ಪಳ್ಳಿತ್ತಡ್ಕ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here