ನೆಲ್ಯಾಡಿ: ಉತ್ತಮ ಸಮಾಜ ನಿರ್ಮಾಣಕ್ಕೆ ಕೋಮು ಸೌಹಾರ್ದತೆ ಅತೀ ಮುಖ್ಯವಾಗಿದ್ದು ಇದನ್ನು ಅರಿತು ಮುಂದುವರಿಯಬೇಕು. ಕೋಲ್ಪೆ ಸೈಯದ್ ಮಲ್ಹರ್ ವಲಿಯುಲ್ಲಾಹಿ ದರ್ಗಾ ಶರೀಫ್ ಸೌಹಾರ್ದತೆಯ ಕೇಂದ್ರವಾಗಿ ಬೆಳೆಯಬೇಕು. ಇದೊಂದು ಎಲ್ಲಾ ಜಾತಿ,ಧರ್ಮದವರೂ ಭೇಟಿ ನೀಡುವ ಪಾವಿತ್ರ್ಯತೆಯ ಕೇಂದ್ರವಾಗಿದ್ದು ಇದನ್ನು ಮುಂದಿನ ಪೀಳಿಗೆಗೂ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಈಗಿನ ಯುವ ಜನತೆಯ ಮೇಲಿದೆ ಎಂದು ಕರ್ನಾಟಕ ವಿಧಾನಸಭೆ ವಿರೋಧಪಕ್ಷದ ಉಪನಾಯಕ ಹಾಗೂ ಶಾಸಕ ಯು.ಟಿ.ಖಾದರ್ ಹೇಳಿದರು.
ಅವರು ಕಡಬ ತಾಲೂಕಿನ ಕೊಣಾಲು ಗ್ರಾಮದ ಕೋಲ್ಪೆ ಮಖಾಂ ಉರೂಸ್ ಪ್ರಯುಕ್ತ ಫೆ.18 ರಂದು ರಾತ್ರಿ ನಡೆದ ಮತಪ್ರಚನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಜೀವನಕ್ಕೆ ಉಸಿರು ಅತೀ ಅಗತ್ಯ. ಅದೇ ರೀತಿ ಸಮಾಜದಲ್ಲಿ ಬದುಕಲು ಸೌಹಾರ್ದತೆಯೂ ಅತೀ ಮುಖ್ಯವಾಗಿದೆ. ಪ್ರವಾದಿಯವರ ಸಂದೇಶ ಪಾಲನೆ ಮಾಡುವ ಮೂಲಕ ಉತ್ತಮ ಸಮಾಜ ನಿರ್ಮಾಣ ಆಗಬೇಕು. ಮಾನವೀಯತೆ, ಕರುಣೆ, ಪ್ರೀತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಪ್ಪು ಮಾಡುವುದು ಸಹಜ. ತಪ್ಪು ತಿದ್ದಿಕೊಂಡು ಮುನ್ನಡೆಯಬೇಕು. ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಡಬೇಕು. ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮಾಜದಲ್ಲಿ, ಕುಟುಂಬದಲ್ಲಿ ನೆಮ್ಮದಿ ಪಡೆಯಲು ಸಾಧ್ಯವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಸದಸ್ಯ ಸರ್ವೋತ್ತಮ ಗೌಡ, ಕೆಪಿಸಿಸಿ ಸುಳ್ಯ ಬ್ಲಾಕ್ ಸಂಯೋಜಕ ಕೃಷ್ಣಪ್ಪ ಜಿ., ನೆಲ್ಯಾಡಿಯ ಉದ್ಯಮಿ ಕೆ.ಪಿ.ತೋಮಸ್ ಮತ್ತಿತರರು ಉಪಸ್ಥಿತರಿದ್ದರು. ಆ ಬಳಿಕ ಹನೀಫ್ ನಿಝಾಮಿ ಮೊಗ್ರಾಲ್ ಪುತ್ತೂರು, ಕಾಸರಗೋಡು ಅವರು ಮುಖ್ಯ ಪ್ರಭಾಷಣ ಮಾಡಿದರು. ಗೋಳಿತ್ತೊಟ್ಟು ರಹ್ಮಾನಿಯಾ ಜುಮಾ ಮಸೀದಿ ಖತೀಬರಾದ ಹನೀಫ್ ದಾರಿಮಿ ದು:ವಾ ನೆರವೇರಿಸಿದರು.
ಕೋಲ್ಪೆ ಬಿಜೆಎಂ ಉಪಾಧ್ಯಕ್ಷ ಎಸ್.ಇಕ್ಬಾಲ್ ಅಧ್ಯಕ್ಷತೆ ವಹಿಸಿದ್ದರು. ಕೋಲ್ಪೆ ಬಿಜೆಎಂ ಅಧ್ಯಕ್ಷ ಕೆ.ಕೆ.ಅಬೂಬಕ್ಕರ್ ಕೋಲ್ಪೆ, ಕೊಚ್ಚಿಲ ಆರ್‌ಜೆಎಂ ಅಧ್ಯಕ್ಷ ಹಾರೀಫ್ ಹೆಚ್., ಕೊಣಾಲು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಕೆ.ಇ.ಮಹಮ್ಮದ್ ರಫೀಕ್, ಮಲ್ಲಿಗೆಮಜಲು ಜೆ.ಎಂ. ಖತೀಬರಾದ ಹಾಶಿಮ್ ಫೈಝಿ, ಉದ್ಯಮಿ ಹನೀಫ್ ಪಟ್ರಮೆ, ಕೋಲ್ಪೆ ಮುಹಲ್ಲಿ ಹಮೀದ್ ಮುಸ್ಲಿಯಾರ್, ಅರಸಿನಮಕ್ಕಿ ಗೋರಿ ಪ್ರಧಾನ ಕಾರ್ಯದರ್ಶಿ ಅಬ್ಬಾಸ್ ಅರಸಿನಮಕ್ಕಿ, ಖತೀಬರಾದ ಎಮ್.ಜಿ.ಉಮ್ಮರ್ ಮುಸ್ಲಿಯಾರ್, ಬೆದ್ರೋಡಿ ಬಿಜೆಎಂ ಕಾರ್ಯದರ್ಶಿ ಶರೀಫ್ ಬೆದ್ರೋಡಿ, ಹೊಸಮಜಲು ಗೋಲ್ಡನ್ ಸ್ಟಾರ್ ಕನ್ಸ್‌ಸ್ಟ್ರಕ್ಷನ್‌ನ ಅಬ್ಬಾಸ್, ಉಪ್ಪಿನಂಗಡಿ ಮದ್ರಸ ಮ್ಯಾನೇಜ್‌ಮೆಂಟ್ ಪ್ರಧಾನ ಕಾರ್ಯದರ್ಶಿ ಯೂಸುಫ್ ಹಾಜಿ ಆಲಂಕಾರು ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಲ್ಪೆ ಬಿಜೆಎಂ ಕಾರ್ಯದರ್ಶಿ ಕೆ.ಎಚ್.ಸಾದಿಕ್ ಸ್ವಾಗತಿಸಿದರು. ಕೋಲ್ಪೆ ಬಿಜೆಎಂ ಕಾರ್ಯದರ್ಶಿ ರಂಝಾನ್ ಸಾಹೇಬ್ ವಂದಿಸಿದರು. ನಾಸೀರ್ ಸಮರಗುಂಡಿ ಕಾರ್ಯಕ್ರಮ ನಿರೂಪಿಸಿದರು. ಕೋಲ್ಪೆ ಬಿಜೆಎಂ, ಗೋಳಿತ್ತೊಟ್ಟು ರಹ್ಮಾನಿಯಾ ಜುಮಾ ಮಸೀದಿ, ಕೋಲ್ಪೆ ಖಲಂದರ್ ಷಾ ದಫ್ ಸಮಿತಿ, ಎಸ್‌ಕೆಎಸ್‌ಎಸ್‌ಎಫ್ ಕೋಲ್ಪೆ ಹಾಗೂ ಗೋಳಿತ್ತೊಟ್ಟು ಶಾಖೆಯ ಸದಸ್ಯರು ಸಹಕರಿಸಿದರು.