ಬೆಟ್ಟಂಪಾಡಿ: ಮನೆ ಮನೆಗೆ ಕುಡಿಯುವ ನೀರು ಪೂರೈಕೆಯ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಜಲಜೀವನ್ ಮಿಷನ್’ ಅಡಿಯಲ್ಲಿ ಬೆಟ್ಟಂಪಾಡಿ ಗ್ರಾಮದ ಮಿತ್ತಡ್ಕ ಎಂಬಲ್ಲಿ ನಿರ್ಮಾಣಗೊಳ್ಳಲಿರುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಬೆಟ್ಟಂಪಾಡಿ ಪಂಚಾಯತ್ ಅಧ್ಯಕ್ಷೆ ಪವಿತ್ರ ಡಿ. ತೆಂಗಿನಕಾಯಿ ಒಡೆದು ಶಂಕುಸ್ಥಾಪನೆಗೈದರು. ರಾಮಚಂದ್ರ ಮನೋಳಿತ್ತಾಯ ಕಾಜಿಮೂಲೆಯವರು ಪ್ರಾರ್ಥಿಸಿ ತೆಂಗಿನಕಾಯಿ ಒಡೆದರು.
ಪಂಚಾಯತ್ ಉಪಾಧ್ಯಕ್ಷ ವಿನೋದ್ ಕುಮಾರ್ ರೈ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪಂಚಾಯತ್ ಸದಸ್ಯರಾದ ಪಾರ್ವತಿ ಎಂ., ಗಂಗಾಧರ ಎಂ.ಎಸ್., ಮಹೇಶ್ ಕೆ. ಹಾಗೂ ಈ ಟ್ಯಾಂಕ್ ಮೂಲಕ ನೀರಿನ ಉಪಯೋಗ ಪಡೆಯುವ ಫಲಾನುಭವಿಗಳು ಉಪಸ್ಥಿತರಿದ್ದರು.
25 ಸಾವಿರ ಲೀ. ಸಾಮರ್ಥ್ಯದ ಈ ಟ್ಯಾಂಕ್ ನ್ನು ಪುತ್ತೂರಿನ ಒಡ್ಯಮೆ ಇನ್‌ಫ್ರಾ ಕಂಪೆನಿಯ ಗುತ್ತಿಗೆದಾರ ಮನ್ವಿಜ್ ಶೆಟ್ಟಿ ಪನಡ್ಕ ನಿರ್ಮಿಸಲಿದ್ದಾರೆ.