ಪುತ್ತೂರು: ಬಂಟ್ವಾಳದ ಫೈನಾನ್ಸ್‌ವೊಂದರಿಂದ ಸಾಲ ಪಡೆದು ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ವಾರಂಟ್ ಆರೋಪಿಯೊಬ್ಬರನ್ನು ಪುತ್ತೂರು ಪೊಲೀಸರು ಪೊಳಲಿಯಿಂದ ಬಂಧಿಸಿದ್ದಾರೆ.
ಮೂಲತಃ ಮಂಗಳೂರು ಕುದ್ರೋಳಿ ನಿವಾಸಿಯಾಗಿದ್ದು ಬಂಟ್ವಾಳದ ಗಂಜಿಮಠ ಗ್ರಾಮದ ಪೊಳಲಿ ಗುರಿಕಂಬಳ ರೋಡ್ ನಿವಾಸಿ ಯಾಸೀನ್ ಅಹಮ್ಮದ್ ಬಂಧಿತ ಆರೋಪಿ.
2014ರಲ್ಲಿ ಬಂಟ್ವಾಳದ ಶ್ರೀರಾಮ ಫೈನಾನ್ಸ್‌ನಿಂದ ಸಾಲ ಪಡೆದು ಬಳಿಕ ಸಾಲಕ್ಕೆ ನೀಡಿದ ಚೆಕ್ ಬೌನ್ಸ್ ಕೇಸು ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಪ್ರಕರಣಕ್ಕೆ ಸಂಬಂಧಿಸಿ ಸುಮಾರು 7 ವರ್ಷಗಳಿಂದ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೆ ಯಾಸೀನ್ ಅಹಮ್ಮದ್ ತಲೆಮರೆಸಿಕೊಂಡಿದ್ದರು. ನ್ಯಾಯಾಲಯ, ಆರೋಪಿ ವಿರುದ್ಧ ವಾರಂಟ್ ಜಾರಿ ಮಾಡಿತ್ತು. ಪುತ್ತೂರು ಪೊಲೀಸರು ಆರೋಪಿಯನ್ನು ಫೆ. 20ರಂದು ಎಸ್ಪಿ ಮತ್ತು ಡಿವೈಎಸ್ಪಿ ಅವರ ನಿರ್ದೇಶನದಂತೆ ಪುತ್ತೂರು ನಗರ ಪೊಲೀಸ್ ಠಾಣೆ ನಿರೀಕ್ಷಕರು ಮತ್ತು ಉಪ ನಿರೀಕ್ಷಕರ ಮಾರ್ಗದರ್ಶನದಲ್ಲಿ ಎ.ಎಸ್.ಐ ಚಂದ್ರ ಮತ್ತು ಹೆಡ್‌ಕಾನ್‌ಸ್ಟೇಬಲ್ ಪರಮೇಶ್ವರ ಅವರು ಆರೋಪಿಯನ್ನು ಪೊಳಲಿಯಲ್ಲಿ ಬಂಧಿಸಿದ್ದಾರೆ.