ಬೆಳ್ಳಾರೆ : ವಿದ್ಯಾರ್ಥಿನಿಯೊಂದಿಗೆ ಅನುಚಿತ ವರ್ತನೆ – ಪ್ರಕರಣ ದಾಖಲು

0

ಬೆಳ್ಳಾರೆ : ಶಾಲೆಯಿಂದ ಮನೆಗೆ ಹೋಗುತ್ತಿದ್ದ ವಿದ್ಯಾರ್ಥಿನಿಯೊಬ್ಬಳೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ಹಾಗೂ ವ್ಯಕ್ತಿ ರಾತ್ರಿ ವೇಳೆ ನಿನ್ನ ತಾಯಿಯ ಮೊಬೈಲ್ ನಿಂದ ಕರೆ ಮಾಡಿ ಎಂದು ವಿದ್ಯಾರ್ಥಿಯ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿದ್ಯಾರ್ಥಿನಿಯು ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಆರೋಪಿಯು ಆಕೆಯ ಜೊತೆ ಅನುಚಿತವಾಗಿ ವರ್ತಿಸಿ ಅಶ್ಲೀಲವಾಗಿ ಮಾತನಾಡಿ ರಾತ್ರಿ ನಿನ್ನ ತಾಯಿಯ ಮೊಬೈಲ್‌ನಿಂದ ಕರೆ ಮಾಡಿ ನನ್ನೊಂದಿಗೆ ಮಾತನಾಡು ಎಂದು ಹೇಳುತ್ತಿದ್ದನು. ಈ ಬಗ್ಗೆ ಮನೆಗೆ ಬಂದು ವಿಷಯ ತಿಳಿಸಿದ ಬಾಲಕಿ ಭಯಗೊಂಡು ನಾನು ಶಾಲೆಗೆ ಹೋಗುವುದಿಲ್ಲ, ಅವನು ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಾನೆ ಎಂದು ಭಯಭೀತಳಾಗಿದ್ದಳು.

ಪದೇ ಪದೇ ಕರೆ ಮಾಡಲು ಒತ್ತಾಯಿಸಿದ್ದು, ಪೋಷಕರು ಅಶ್ರಫ್‌ಗೆ ಮೊಬೈಲ್‌ನಿಂದ ಕರೆ ಮಾಡಿಸಿದಾಗ ಮಗಳ ಜೊತೆ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದಾಗಿ ಬಾಲಕಿ ಸುಮಾರು 10 ದಿನಗಳಿಂದ ಶಾಲೆಗೆ ಹೋಗಲಿಲ್ಲ. ಆರೋಪಿಯು ಅಶ್ರಫ್ ಯಾನೆ ಅಚಪ್ಪನು ಎಂದು ತಿಳಿದುಬಂದಿದೆ.

ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಶ್ರಫ್ ವಿರುದ್ಧ ಪೊಕ್ಸೋ ಪ್ರಕರಣವನ್ನು ದಾಖಲಿಸಲಾಗಿದ್ದು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here