ಪುತ್ತೂರು: ಶ್ರೀ ಪಂಚಲಿಂಗೇಶ್ವರ ಎಜ್ಯುಕೇಷನಲ್ ಸೊಸೈಟಿ ಈಶ್ವರಮಂಗಲ ಇದರ ಆಶ್ರಯದಲ್ಲಿ ನಡೆಯುತ್ತಿರುವ ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ಪ್ರೌಢಶಾಲೆಗೆ 2023-24 ನೇ ಶೈಕ್ಷಣಿಕ ವರ್ಷಕ್ಕೆ 50 ವರ್ಷಗಳು ತುಂಬುತ್ತಿದೆ.
ಶಾಲೆಯು 26-06-1973 ರಂದು ಸ್ಥಾಪನೆಯಾಯಿತು. ಸಂಸ್ಥೆಯಲ್ಲಿ ಸುಮಾರು 4538 ವಿದ್ಯಾರ್ಥಿಗಳು ವಿದ್ಯಾರ್ಜನೆಯನ್ನು ಮಾಡಿ ತಮ್ಮ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ. ಸುವರ್ಣ ಸಂಭ್ರಮದ ಆಚರಣೆಯ ಪೂರ್ವ ತಯಾರಿಯ ಬಗ್ಗೆ ಹಾಗೂ ಸುವರ್ಣ ಮಹೋತ್ಸವದ ಆಚರಣೆಯ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯು ಶಾಲಾ ಅಭಿವೃದ್ಧಿ ದೃಷ್ಟಿಯಿಂದ ಕೆಲವೊಂದು ಯೋಜನೆಗಳನ್ನು ಕಾರ್ಯಗತಗೊಳಿಸಲು ಬೇಕಾಗಿರುವಂತಹ ಹಲವು ವಿಷಯಗಳ ಬಗ್ಗೆ ಚರ್ಚಿಸಲು ಫೆ. 25 ರಂದು ಅಪರಾಹ್ನ 2 ಗಂಟೆಗೆ ಸಭೆಯನ್ನು ಕರೆಯಲಾಗಿದೆ.
ಶಿಕ್ಷಣಾಭಿಮಾನಿಗಳು, ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆ ನೀಡುವಂತೆ ಎಜ್ಯುಕೇಷನಲ್ ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ಕುಂಜತ್ತಾಯ ಎಂ, ಕಾರ್ಯದರ್ಶಿ/ಸಂಚಾಲಕ ಸರ್ವೋತ್ತಮ ಬೋರ್ಕರ್.ಬಿ, ಮುಖ್ಯ ಶಿಕ್ಷಕಿ ವನಿತಾ ಕೆ ಹಾಗೂ ಆಡಳಿತ ಮಂಡಳಿ ಸದಸ್ಯರುಗಳು, ಶಿಕ್ಷಕ ವೃಂದದವರ ಪ್ರಕಟಣೆ ತಿಳಿಸಿದೆ.