ಪುತ್ತೂರು: 1923ರಲ್ಲಿ ಸ್ಥಾಪನೆಯಾದ ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದು ಶತಮಾನೋತ್ಸವದ ಸಂಭ್ರಮದಲ್ಲಿದೆ. ಅದರ ಸವಿನೆನಪಿನಲ್ಲಿ ಸ್ಥಾಪನಾ ದಿನಾಚರಣೆ ಹಾಗೂ ನವೀಕೃತಗೊಂಡ ಹವಾನಿಯಂತ್ರಿತ ಶ್ರೀ ಸಚ್ಚಿದಾನಂದ ಸೇವಾ ಸದನದ ಉದ್ಘಾಟನೆಯು ಫೆ.23ರಂದು ನಡೆಯಲಿದೆ.
ಮುಂಜಾನೆ ಧಾರ್ಮಿಕ ವಿಧಿ ವಿಧಾನಗಳು ನಡೆದು, ಸಂಜೆ ಪುತ್ತೂರು ಹವಾನಿಯಂತ್ರಿತ ನವೀಕೃತ ಕಟ್ಟಡವನ್ನು ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರಿನ ಜಂಟಿ ನಿರ್ದೇಶಕ ಗೋಕುಲ್‌ದಾಸ್ ನಾಯಕ್ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಂಘದ ಕಚೇರಿ ಉದ್ಘಾಟನೆ, ಕಿರುಚಿತ್ರ ಬಿಡುಗಡೆ, ಪುಸ್ತಕ ಬಿಡುಗಡೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಉದ್ಯಮಿ ಕರೋಡಿ ಗೋಪಾಲಕೃಷ್ಣ ಬೋರ್ಕರ್, ಪ್ರಗತಿಪರ ಕೃಷಿಕ ಕುಳ್ಳಾಜೆ ಈಶ್ವರ ನಾಯಕ್, ಉದ್ಯಮಿ ಶಿವಶಂಕರ ನಾಯಕ್ ರೈತಬಂಧು, ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ, ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್ ಆರ್ ಸತೀಶ್ಚಂದ್ರ, ಸಾರಸ್ವತ ಸಮೂಹ ಸಂಸ್ಥೆಗಳ ಕೇಂದ್ರೀಯ ಸಮಿತಿ ಅಧ್ಯಕ್ಷ ಉಮೇಶ್ ಪ್ರಭು ಬೆಳ್ತಂಗಡಿ, ಪುರುಷೋತ್ತಮ ಪ್ರಭು ಮುಂಡಕೊಚ್ಚಿ, ನಿವೃತ್ತ ವೃತ್ತ ನಿರೀಕ್ಷಕ ಮುಕುಂದ ನಾಯಕ್, ಶ್ರೀಮತಿ ವಿನತಾದೇವಿ ಸುಳ್ಯ, ಬದನಾಜೆ ಸ.ಪ್ರೌ ಶಾಲಾ ಮುಖ್ಯ ಶಿಕ್ಷಕಿ ಜಮುನಾ ಕೆ.ಎಸ್, ಪ್ರಗತಿಪರ ಕೃಷಿಕ ರಾಮಚಂದ್ರ ಬೋರ್ಕರ್, ನಿವೃತ್ತ ಪಬ್ಲಿಕ್ ಪ್ರಾಸಿಕ್ಯೂಟರ್ ಉದಯ ಶಂಕರ ಕುಕ್ಕಾಡಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಸಂಜೆ 5ರಿಂದ 6ಗಂಟೆಯವರೆಗೆ ಸರಸ್ವತಿ ಮಹಿಳಾ ಮಂಡಳಿ ಸದಸ್ಯರಿಂದ ಭಜನ್ ಸಂಧ್ಯಾ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.