ಪುತ್ತೂರು: ದರ್ಬೆ ಲಿಟ್ಲ್ ಫ್ಲವರ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸ್ಕೌಟ್, ಗೈಡ್ ,ಕಬ್ ಮತ್ತು ಬುಲ್ ಬುಲ್ ಶಾಲಾ ಮಟ್ಟದ ವಾರ್ಷಿಕ ಮೇಳವೂ ಫೆ.16 ಮತ್ತು 17 ರಂದು ಹಲವು ವಿಶೇಷತೆಗಳೊಂದಿಗೆ ನೆರವೇರಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಧ್ವಜವಂದನೆ ನಡೆದ ಬಳಿಕ ವಾರ್ಷಿಕ ಸಮಾರಂಭ ಉದ್ಘಾಟನೆಗೊಂಡಿತು. ಶಾಲಾ ಸಂಚಾಲಕಿ ಭಗಿನಿ ಪ್ರಶಾಂತಿ ಬಿ.ಎಸ್. ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಆಯುಕ್ತ ಗಿರೀಶ್ ನಂದನ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.
ಪುತ್ತೂರು ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಹಾಗೂ ಪುತ್ತೂರು ನಗರಸಭಾ ಉಪಾಧ್ಯಕ್ಷರಾದ ವಿದ್ಯಾ ಆರ್. ಗೌರಿ, ಪುತ್ತೂರು ನಗರ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಶಶಿಕಲಾ, ಶಾಲಾ ಹಿರಿಯ ವಿದ್ಯಾರ್ಥಿ ಹಾಗೂ ಬೆಳ್ತಂಗಡಿ ತಾಲೂಕಿನ ಸುದ್ದಿ ಬಿಡುಗಡೆಯ ಮುಖ್ಯಸ್ಥೆ ಸಿಂಚನಾ, ನಿವೃತ್ತ ಶಿಕ್ಷಕಿ ಹಾಗೂ ಪುತ್ತೂರು ಸ್ಥಳೀಯ ಸಂಸ್ಥೆಯ ಪದಾಧಿಕಾರಿ ಡೋರತಿ ಮೇರಿ ಡಿಸೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಶಾಲಾ ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಮಾಜಿ ಅಧ್ಯಕ್ಷ ರಮೇಶ ಕೆ ವಿ, ಹಿರಿಯ ವಿದ್ಯಾರ್ಥಿ ಹಾಗೂ ಕೋಸ್ಟಲ್ ಹೋಮ್ ಮಾಲಕ ಸಂದೇಶ ರೈ ಹಾಗೂ ಮುಖ್ಯ ಶಿಕ್ಷಕಿ ಭಗಿನಿ ವೆನಿಷಾ ಬಿ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಾರ್ಷಿಕ ಮೇಳದ ನಾಯಕ ಬಾಲಕೃಷ್ಣ ರೈ ಪೊರ್ದಾಲ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಬುಲ್‌ಬುಲ್ ಶಿಕ್ಷಕಿ ಜೋಸ್ಲಿನ್ ವಂದಿಸಿ, ಬುಲ್ ಬುಲ್ ಶಿಕ್ಷಕರಾದ ಮಮತಾ ಹಾಗೂ ಕಾವ್ಯ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಸ್ಕೌಟ್ ವಿದ್ಯಾರ್ಥಿಗಳಿಂದ ಕಸದಿಂದ ರಸ, ವಿಶ್ವ ಸ್ಕೌಟ್ ಧ್ವಜ, ಗೂಡು ದೀಪ ರಚನೆ, ಗೈಡ್ಸ್ ವಿದ್ಯಾರ್ಥಿನಿಯರಿಂದ ವಿಶ್ವ ಗೈಡ್ ಧ್ವಜ, ಕಸದಿಂದ ರಸ, ರಂಗೋಲಿ, ಕಬ್ಸ್ ವಿದ್ಯಾರ್ಥಿಗಳಿಂದ ಗಾಳಿಪಟ ರಚನೆ, ಗೊಂಬೆ ತಯಾರಿ, ಕಸದಿಂದ ರಸ. ಬುಲ್ ಬುಲ್ ವಿದ್ಯಾರ್ಥಿಗಳಿಂದ ಗೊಂಬೆ ತಯಾರಿ, ಎಲೆಗಳಿಂದ ಆಕೃತಿ ತಯಾರಿ, ಕಸದಿಂದ ರಸ ಮೊದಲಾದ ಚಟುವಟಿಕೆಗಳನ್ನು ನಡೆಸಲಾಯಿತು.
ಮಧ್ಯಾಹ್ನದ ಬಳಿಕ ನಡೆದ ಕಾರ್ಯಕ್ರಮದಲ್ಲಿ ಸ್ಕೌಟ್, ಗೈಡ್, ಕಬ್ ಮತ್ತು ಬುಲ್ ಬುಲ್ ವಿದ್ಯಾರ್ಥಿಗಳ ೨೦ ತಂಡಗಳಿಂದ ಬೆಂಕಿ ಬಳಸದ ಅಡುಗೆ ತಯಾರಿ, ಪುತ್ತೂರು ಕ್ಯಾಂಪ್ಕೊ ಚಾಕಲೇಟ್ ಫ್ಯಾಕ್ಟರಿಗೆ ಹೊರ ಸಂಚಾರ, ಸಂಜೆ ದರ್ಬೆ ವೃತ್ತದ ಮೂಲಕ ಸ್ಕೌಟ್ ಗೈಡಿನ ಬ್ಯಾಂಡ್ ವಿದ್ಯಾರ್ಥಿಗಳಿಂದ ಆಕರ್ಷಕ ಪಥ ಸಂಚಲನ, ಸಂಜೆ ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ಮಕ್ಕಳಿಂದ ಕರೋಕೆ ಹಾಡುಗಳ ರಸಮಂಜರಿ ಕಾರ್ಯಕ್ರಮಕ್ಕೆ ಮೆರುಗು ನೀಡಿತು. ರಾತ್ರಿ ಭೋಜನದ ನಂತರ ನಡೆದ ಆಕರ್ಷಕ ಶಿಭಿರಾಗ್ನಿ ಕಾರ್ಯಕ್ರಮ ಪ್ರೇಕ್ಷಕರ ಮನಸೆಳೆಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಬೆಥನಿ ಶಿಕ್ಷಣ ಮಂಡಳಿಯ ಪ್ರಾಂತೀಯ ಮುಖ್ಯಸ್ಥೆಯ ಸಲಹೆಗಾರ್ತಿ ಭಗಿನಿ. ರೋಶಲ್ ಬಿ.ಎಸ್, ಬೆಥನಿ ಶಿಕ್ಷಣ ಮಂಡಳಿಯ ಮಂಗಳೂರು ಪ್ರಾಂತೀಯ ಶಿಕ್ಷಣ ಸಂಯೋಜಕಿ ಭಗಿನಿ. ಶುಭ ಬಿ.ಎಸ್, ಪುತ್ತೂರು ಸ್ಥಳೀಯ ಸಂಸ್ಥೆಯ ಲೀಡರ್ ಆಫ್ ಟ್ರೈನರ್ ಸುನಿತಾ, ಹಿರಿಯ ವಿದ್ಯಾರ್ಥಿ ಹಾಗೂ ಉದ್ಯಮಿಗಳಾದ ವಾಮನ್ ಪೈ ದರ್ಬೆ, ಶಾಲಾ ಸಂಚಾಲಕಿ ಪ್ರಶಾಂತಿ ಬಿ.ಎಸ್, ಶಾಲಾ ಹಿತೈಷಿ ಮತ್ತು ದಾನಿಗಳಾದ ಅಬ್ದುಲ್ ರಹಿಮಾನ್, ಪುತ್ತೂರು ಸ್ಥಳೀಯ ಸಂಸ್ಥೆಯ ಪ್ರತಿನಿಧಿ ಡೋರತಿ ಮೇರಿ ಡಿಸೋಜ, ಹಿರಿಯ ವಿದ್ಯಾರ್ಥಿ ಹಾಗೂ ದಂತ ವೈದ್ಯ ಡಾ. ಶ್ರೀ ಪ್ರಕಾಶ್, ವಿವೇಕಾನಂದ ಸ್ನಾತಕೋತ್ತರ ಮಹಾ ವಿದ್ಯಾಲಯದ ಮುಖ್ಯಸ್ಥೆ ಡಾ.ವಿಜಯ ಸರಸ್ವತಿ, ಧನ್ವಂತರಿ ಆಸ್ಪತ್ರೆಯ ವೈದ್ಯ ಡಾ. ರವಿಪ್ರಕಾಶ್, ನಿವೃತ ದೈಹಿಕ ಶಿಕ್ಷಣ ಶಿಕ್ಷಕ ಜೆರೊಮಿಯಸ್ ಪಾಯ್ಸ್, ನಿವೃತ ಶಿಕ್ಷಕಿ ಮೇರಿ ಡಿಸಿಲ್ವಾ, ಪ್ರೆಸ್ಸಿ ಲೋಬೊ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರಘುನಾಥ ರೈ, ಸುರಕ್ಷಾ ಸಮಿತಿ ಅಧ್ಯಕ್ಷ ರಾಮಚಂದ್ರ ಭಟ್, ರಕ್ಷಕ ಶಿಕ್ಷಕ ಸಂಘದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳಾದ ಸತೀಶ್ ಆರ್.ಚಂದ್ರಶೇಖರ ರೈ ಹಾಗೂ ಪ್ರಿಯ ಉಪಸ್ಥಿತರಿದ್ದರು.
ಗೈಡ್ ಶಿಕ್ಷಕಿ ವಿಲ್ಮಾ ಪೆರ್ನಾಂಡಿಸ್ ಸ್ವಾಗತಿಸಿದರು. ಕಬ್ ಶಿಕ್ಷಕಿ ವೀಣಾ ಡಿ’ಸೋಜ ವಂದಿಸಿದರು. ಸ್ಕೌಟ್ ಶಿಕ್ಷಕ ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ವಿದ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮ ಪ್ರಸ್ತುತ ಗೊಂಡಿತು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಸ್ಕೌಟ್ ವಿದ್ಯಾರ್ಥಿ ಭಾರವಿ. ಕೆ. ಭಟ್ ಹಾಗೂ ಗೈಡ್ ವಿದ್ಯಾರ್ಥಿನಿ ದೃಶಾ ನಿರ್ವಹಿಸಿದರು.
ಫೆ.೧೭ ಬೆಳಗ್ಗೆ ಬಿ. ಪಿ.ಸಿಕ್ಸ್ ವ್ಯಾಯಾಮ, ಸರ್ವ ಧರ್ಮ ಪ್ರಾರ್ಥನೆ, ಕಿಮ್ಸ್ ಗೇಮ್, ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿ ಚರಣ್ ಕುಮಾರ್‌ರವರಿಂದ ಕ್ರಾಫ್ಟ್ ತಯಾರಿ ತರಬೇತಿ ನಡೆಯಿತು. ಬಳಿಕ ನಡೆದ ಸಮಾರೋಪ ಸಮಾರಂಭದಲ್ಲಿ ಭಗಿನಿ. ವೆನಿಶಾ ಬಿ.ಎಸ್ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಸ್ಥಳೀಯ ಸಂಸ್ಥೆಯ ಹಿಮಾಲಯ ವುಡ್ ಬ್ಯಾಡ್ಜ್ ಗೈಡ್ ಟ್ರೈನರ್ ಮೇಬಲ್ ಡಿ`ಸೋಜ, ಶಾಲಾ ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ ರೈ, ಶಾಲಾ ಸುರಕ್ಷಾ ಸಮಿತಿಯ ಅಧ್ಯಕ್ಷ ರಾಮಚಂದ್ರ ಭಟ್ ಉಪಸ್ಥಿತರಿದ್ದರು. ಗೈಡ್ ಶಿಕ್ಷಕಿ ನಳಿನಾಕ್ಷಿ ಸ್ವಾಗತಿಸಿದರು. ಕಬ್ ಶಿಕ್ಷಕಿ ಸುಶ್ಮಿತ ವಂದಿಸಿದರು. ಬುಲ್ ಬುಲ್ ಶಿಕ್ಷಕಿಂiiರಾದ ಕಾವ್ಯ ಮತ್ತು ಮಮತಾ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸ್ಕೌಟ್, ಗೈಡ್, ಕಬ್, ಬುಲ್ ಬುಲ್ ಮೇಳದ ಸಮಾಪ್ತಿ ಧ್ವಜಾವರೋಹಣದೊಂದಿಗೆ ಮುಕ್ತಾಯವಾಯಿತು.