ಪುತ್ತೂರು: ರೋಟರಿ ಕ್ಲಬ್ ಪುತ್ತೂರು ವತಿಯಿಂದ ಸವಣೂರು ಕ್ಲಸ್ಟರ್‌ನ ಆರೆಲ್ತಡಿ ಸರಕಾರಿ ಕಿರಿಯ ಪ್ರಾಥಮಿಕಗೆ ರೂ.25,000 ಮೌಲ್ಯದ ಡ್ರಿಂಕಿಂಗ್ ವಾಟರ್ ಕೂಲರನ್ನು ಕೊಡುಗೆಯಾಗಿ ನೀಡಲಾಯಿತು.
ಜಿಲ್ಲಾ ಗವರ್ನರ್ ಮೇಜರ್ ಡೋನರ್ ರೊಟೇರಿಯನ್ ಪ್ರಕಾಶ್ ಕಾರಂತ್ ಉದ್ಘಾಟಿಸಿದರು. ಪುತ್ತೂರು ರೋಟರಿ ಕ್ಲಬ್ ಅಧ್ಯಕ್ಷ ರೋ.ಉಮನಾಥ್, ಕಾರ್ಯದರ್ಶಿ ರೋ. ಪ್ರಕಾಶ್, ರೋ. ಜಗನ್ನಿವಾಸ, ರೊ.ನಾರಾಯಣ ಹೆಗಡೆ, ರೊ. ಕೃಷ್ಣಕುಮಾರ್ ಶೆಟ್ಟಿ, ರೊ. ಎಂ.ಜಿ ರಫೀಕ್, ರೋ. ವಿಜಯ ಫರ್ನಾಂಡಿಸ್, ರೋ. ಕಾಶ್ಮೀರಿ ಕುಟ್ಟಿ, ಸವಣೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ರಾಜೀವಿ ವಿ. ಶೆಟ್ಟಿ, ಸದಸ್ಯರಾದ ತೀರ್ಥರಾಮ ಕೆಡೆಂಜಿ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಸೀತಮ್ಮ ಕುದ್ಮನಮಜಲು, ಉಪಾಧ್ಯಕ್ಷ ದೇವೇಂದ್ರ ಆರೆಲ್ತಡಿ, ಎಸ್‌ಡಿಎಂಸಿ ಸದಸ್ಯರುಗಳು, ಮಕ್ಕಳ ಪೋಷಕರು, ಊರ ನಾಗರಿಕರು ಉಪಸ್ಥಿತರಿದ್ದರು.
ಜಿಲ್ಲಾ ಗವರ್ನರ್ ರೊ. ಪ್ರಕಾಶ್ ಕಾರಂತ್ ಸಾಂಕೇತಿಕವಾಗಿ ಅಡಿಕೆ ಗಿಡವನ್ನು ನೆಡುವುದರ ಮೂಲಕ ಅಡಿಕೆ ತೋಟ ರಚನೆಗೆ ಚಾಲನೆ ನೀಡಿದರು. ಶಾಲಾ ಮುಖ್ಯಗುರು ಜಗನ್ನಾಥ್ ಎಸ್. ಸ್ವಾಗತಿಸಿ ಶ್ರೀಕಾಂತ ನಾಯಕ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.