ಗಾಯತ್ರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿ, ಗಾಯತ್ರಿ ಸ್ವದೇಶಿ ಮಳಿಗೆ ಸ್ಥಳಾಂತರಗೊಂಡು ಶುಭಾರಂಭ

0

ಪುತ್ತೂರು: ಮೆಲ್ಕಾರ್ ರಾಮ್‌ದೇವ್ ಕಾಂಪ್ಲೆಕ್ಸ್‌ನಲ್ಲಿ ಪ್ರಧಾನ ಕಛೇರಿ ಹೊಂದಿರುವ ಗಾಯತ್ರಿ ಕ್ರೆಡಿಟ್ ಕೋಆಪರೇಟಿವ್ ಸೊಸೈಟಿಯ ಪುತ್ತೂರು ಶಾಖೆಯು ಮುಳಿಯ ನೆಸ್ಟ್ ವಾಣಿಜ್ಯ ಸಂಕೀರ್ಣದಲ್ಲಿ ವ್ಯವಹರಿಸುತ್ತಿದ್ದು ಫೆ.23ರಂದು ಧಾರ್ಮಿಕ ಕಾರ್ಯಕ್ರಮದೊಂದಿಗೆ ಎಪಿಎಂಸಿ ರಸ್ತೆಯ ಆದರ್ಶ ಆಸ್ಪತ್ರೆಯ ಎದುರುಗಡೆಯ ವಿಶ್ವೇಶ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಶುಭಾರಂಭಗೊಂಡಿತು.

ವೇ.ಮೂ. ವಿ.ಎಸ್.ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಅಧ್ಯಕ್ಷ ವಿಷ್ಣು ಭಟ್ ಅಡ್ಯೇಯಿ ಸ್ವಾಗತಿಸಿ ಮಾತನಾಡಿ ನಮ್ಮ ಸೊಸೈಟಿಯಲ್ಲಿ ಠೇವಣಿ ಬಡ್ಡಿದರ ಶೇ.9, ಹಿರಿಯ ನಾಗರಿಕರಿಗೆ ಶೇ.೦.5ಕ್ಕಿಂತ ಹೆಚ್ಚಿನ ಬಡ್ಡಿದರ, ಆಕರ್ಷಕ ಬಡ್ಡಿದರದಲ್ಲಿ ಎಲ್ಲ ರೀತಿಯ ಸಾಲ ಸೌಲಭ್ಯ, ಅನಿಯಮಿತ ಸೇಫ್ ಲಾಕರ್ ಬಳಕೆ ಮತ್ತು ಸ್ವದೇಶಿ ಮಳಿಗೆಯಲ್ಲಿ ವಿವಿಧ ವಿನ್ಯಾಸದ ಉಡುಗೆಗಳು, ಸೀರೆಗಳು, ಮಗ್ಗದ ಬಟ್ಟೆಗಳು, ಕರಕುಶಲ ವಸ್ತುಗಳು, ಆಕರ್ಷಕ ಗೃಹೋದ್ಯಮದ ಉತ್ಪನ್ನಗಳು ಅಲ್ಲದೆ ಗ್ರಾಹಕರಿಗೆ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಲಭ್ಯವಿದೆ ಎಂದು ಹೇಳಿದರು.

ಆಡಳಿತ ಮಂಡಳಿ ನಿರ್ದೇಶಕರಾದ ಗಣಪತಿ ಸೋಮಯಾಜಿ, ಶರಾವತಿ ರವಿನಾರಾಯಣ, ರಾಜರಾಮ ಭಟ್ ಟಿ.ಜಿ., ಮೋಹನ್ ಆಚಾರ್ಯ, ಸಿಇಒ ರೇಣುಕಾ ರಾವ್, ಪಿಆರ್‌ಒ ಐಶ್ವಾನಿ ರಾಮಕೃಷ್ಣ ಭಟ್, ಸಿಬಂದಿಗಳಾದ ನಾರಾಯಣ ತೇಜಸ್ವಿ, ವೀಣಾ ಆರ್. ಭಟ್ ಸೇರಿದಂತೆ ಗಣ್ಯರು, ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here