ಬಡಗನ್ನೂರು: ಐತಿಹಾಸಿಕ ಕ್ಷೇತ್ರ ಪಡುಮಲೆ ಶ್ರೀ ಕೂವೆಶಾಸ್ತಾರ ವಿಷ್ಣುಮೂರ್ತಿ ದೇವಾಲಯದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳ ಉದ್ಘಾಟನೆಯೊಂದಿಗೆ ಫೆ. 25 ರಂದು ಚಾಲನೆ ನೀಡಲಾಯಿತು.
ಪೂರ್ವಾಹ್ನ 9.30ಕ್ಕೆ ಸರ್ವ ಕಾರ್ಯಕ್ರಮಗಳ ಯಶಸ್ಸಿಗಾಗಿ ಶ್ರೀ ಕೂವೆ ಶಾಸ್ತಾರ ವಿಷ್ಣುಮೂರ್ತಿ ದೇವರಿಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು .ಬಳಿಕ ಉಗ್ರಾಣ ಮುಹೂರ್ತ ನಡೆಯಿತು. ಹಿರಿಯರಾದ ಗಣಪತಿ ಗೌಡ ಕೋಡಿಯಡ್ಕ ದೀಪ ಬೆಳಗಿಸಿದರು. ಪ್ರಗತಿ ಪರ ಕೃಷಿಕ ಜಯಂತ ರೈ ಕುದ್ಕಾಡಿ ಉದ್ಘಾಟನೆ ನೆರವೇರಿಸಿದರು. ಅನಂತರ ಪಾಕಶಾಲೆಯನ್ನು ವಾಸುದೇವ ಭಟ್ ಕನ್ನಡ್ಕ ಹಾಗೂ, ನಾರಾಯಣ ಭಟ್ ಪಟ್ಟೆ ಉದ್ಘಾಟಿಸಿದರು.
ಬ್ರಹ್ಮಕಲಶೋತ್ಸವದ ಕಾರ್ಯಲಯವನ್ನು ಗಣಪತಿ ಭಟ್ ನೆಕ್ಕರೆ ಉದ್ಘಾಟಿಸಿದರು. ಬಡಗನ್ನೂರು ಗ್ರಾ.ಪಂ. ವತಿಯಿಂದ ನಿರ್ಮಿಸಲಾದ ನೀರಿನ ಟ್ಯಾಂಕನ್ನು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೆ. ಉದ್ಘಾಟಿಸಿದರು. ಸದಸ್ಯ ರವಿರಾಜ ರೈ ಸಜಂಕಾಡಿ ದೀಪ ಬೆಳಗಿಸಿದರು. ಬಳಿಕ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮುಖ್ಯ ವೇದಿಕೆ “ಕೀರ್ತಿ ಶೇಷ ರಮಾ.ಟಿ ಭಂಡಾರಿ ಮತ್ತು ಕ್ಯಾಪ್ಟನ್ ಡಾ.ಕೆ.ಟಿ ಭಂಡಾರಿ ಪೇರಾಲ್” ವೇಧಿಕೆಯನ್ನು ನಾರಾಯಣ ಭಟ್ ಚಂದುಕೂಡ್ಲು ದೀಪ ಬೆಳಗಿಸಿ ಉದ್ಘಾಟಿಸಿದರು.
ಅರ್ಚಕ ಮಹಾಲಿಂಗ ಭಟ್ ಪೂಜಾ ವಿಧಿಗಳನ್ನು ನೆರವೇರಿಸಿದರು. ಈ ಸಂದರ್ಭದಲ್ಲಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮನೋಜ್ ರೈ ಪೇರಾಲು, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀನಿವಾಸ ಭಟ್ ಚಂದುಕೂಡ್ಲು, ಗೌರವಾಧ್ಯಕ್ಷ ಬಲರಾಜ್ ಶೆಟ್ಟಿ ನಿಟ್ಟೆಗುತ್ತು ಪೇರಾಲು, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷ ಮನೋಹರ, ಬ್ರಹ್ಮಕಲಶೋತ್ಸವ ಅರ್ಥಿಕ ಸಮಿತಿ ಅಧ್ಯಕ್ಷ ನಾರಾಯಣ ಭಟ್ ಬಿ., ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ವಿಷ್ಣು ಭಟ್ ಪಡ್ಪು, ಕಾರ್ಯಾಲಯ ಮುಖ್ಯಸ್ಥ ರಾಮಣ್ಣ ಗೌಡ ಕೆ., ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ನಾರಾಯಣ ನಾಯ್ಕ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಚಂದ್ರಶೇಖರ ಆಳ್ವ ಗಿರಿಮನೆ, ಪ್ರಭಾಕರ ಗೌಡ ಕನ್ನಯ, ಅಪ್ಪಯ್ಯ ನಾಯ್ಕ, ತಿಲೋತ್ತಮಾ, ಸುಮಿತ್ರಾ ಯು.ಕೆ, ಹೊರೆಕಾಣಿಕೆ ಸಮಿತಿಯ ಸಂಚಾಲಕರಾದ ಲಿಂಗಪ್ಪ ಗೌಡ ಮೋಡಿಕೆ ಹಾಗೂ ಸುಬ್ಬಯ್ಯ ರೈ,
ಪ್ರಮುಖರಾದ ಶ್ರೀನಿವಾಸ ಗೌಡ ಕನ್ನಯ, ಜನಾರ್ದನ ಪೂಜಾರಿ ಪದಡ್ಕ, ಶಿವಪ್ರಸಾದ್ ಭಟ್ ಪಟ್ಟೆ, ವೇಣುಗೋಪಾಲ್ ಭಟ್, ಸತೀಶ್ ರೈ ಕಟ್ಟಾವು, ಅನುಪ್ ಪೆರಿಗೇರಿ, ಪದ್ಮನಾಭ ರೈ ಅರೆಪ್ಪಾಡಿ ನೀರಾವರಿ ಸಮಿತಿ ರಾಜೇಶ್ ರೈ ಮೇಗಿನಮನೆ, ಪುರಂದರ ರೈ ಕುದ್ಕಾಡಿ, ಉತ್ತಮ್ ಭಟ್ ಪಡ್ಪು, ,ಸುಬ್ಬಯ್ಯ ರೈ ಹಲಸಿನಡಿ ,ನಿವೃತ್ತ ಮುಖ್ಯಗುರುಗಳಾದ ಶಂಕರಿ, ನಾರಾಯಣ ಪಾಟಾಳಿ, ವಿಷ್ಣು ಭಟ್, ವೈ. ಕೃಷ್ಣ ನಾಯ್ಕ್, ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೆ., ಉಪಾಧ್ಯಕ್ಷ ಸಂತೋಷ್ ಆಳ್ವ, ಸದಸ್ಯರಾದ ಹೇಮಾವತಿ ಬಿ., ಜ್ಯೋತಿ, ಧರ್ಮೇಂದ್ರ, ಕಲಾವತಿ, ಸುಜಾತ ಹಾಗೂ ಊರ ಭಕ್ತಾಧಿಗಳು ಉಪಸ್ಥಿತರಿದ್ದರು.
ಸಂಜೆ ಶ್ರೀ ಕ್ಷೇತ್ರದ ತಂತ್ರಿಗಳಿಗೆ ಪೂರ್ಣಕುಂಭ ಸ್ವಾಗತ ನಡೆಯಿತು. ಬಳಿಕ ದೇವತಾ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಅಂಕುರಾರೋಹಣ, ರಾಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಬಲಿ, ವಾಸ್ತು ಪುಣ್ಯಾಹಾಂತ, ರಾತ್ರಿಪೂಜೆ, ಪ್ರಸಾದ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಹಗಲು ವಿವಿಧ ತಂಡಗಳಿಂದ ಭಜನೆ, ಸಂಜೆ ಭರತನಾಟ್ಯ, ರಾತ್ರಿ ಮೆಗಾ ಮ್ಯಾಟಿಕ್ ಸ್ಟಾರ್ ಕುದ್ರೋಳಿ ಗಣೇಶ್ ಮತ್ತು ಬಳಗದವರಿಂದ ಮಸ್ತ್ ಮ್ಯಾಜಿಕ್ ನಡೆಯಿತು.
ಫೆ.26ರಂದು
ಫೆ.26ರಂದು ಪೂರ್ವಾಹ್ನ 6 ರಿಂದ ಗಣಪತಿ ಹೋಮ, ಪ್ರಾಯಶ್ಚಿತ ಹೋಮಗಳು, ಚತು:ಶುದ್ದಿಧಾರ, ಅವಾಗಹ, ಪಂಚಕ, ಅಂಕುರ ಪೂಜೆ, ಅಪರಾಹ್ನ ಅಂಕುರ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ, ಹೋಮ ಕಲಶಾಭಿಷೇಕ, ಅಂಕುರ ಪೂಜೆ, ಮಹಾಪೂಜೆ, ಭಜನೆ ನಡೆಯಲಿದೆ. ಸಂಜೆ ಸಭಾ ಕಾರ್ಯಕ್ರಮದಲ್ಲಿ ಹನುಮಗಿರಿ ಶ್ರೀ ಧರ್ಮಶ್ರೀ ಪ್ರತಿಷ್ಠಾನದ ಅಧ್ಯಕ್ಷ ನನ್ಯ ಅಚ್ಯುತ ಮೂಡೆತ್ತಾಯ ಅಧ್ಯಕ್ಷತೆ ವಹಿಸಲಿದ್ದು, ಹಿರಣ್ಯ ವೆಂಕಟೇಶ ಭಟ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅತಿಥಿಗಳಾಗಿ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸಾಂಸ್ಕೃತಿಕ ವೈವಿಧ್ಯತೆಗಳು ನಡೆಯಲಿವೆ.