ನರಿಮೊಗರು: ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಮಾ.5,7 ಮತ್ತು 8ರಂದು ನಡೆಯಲಿರುವ ನಾಗಪ್ರತಿಷ್ಠೆ, ಮಾ.15,16 ರಂದು ನಡೆಯಲಿರುವ ಸಾರ್ವಜನಿಕ ಮಹಾಮೃತ್ಯುಂಜಯ ಹೋಮ, ಹಾಗೂ ವರ್ಷಾವಧಿ ಜಾತ್ರೋತ್ಸವದ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ಫೆ.26ರಂದು ದೇವಳದಲ್ಲಿ ಬಿಡುಗಡೆಗೊಳಿಸಲಾಯಿತು.
ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಮುರಳೀಕೃಷ್ಣ ಹಸಂತಡ್ಕರವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ದೇವಳದಲ್ಲಿ ನಡೆಯಲಿರುವ ಎಲ್ಲಾ ಕಾರ್ಯಕ್ರಮಗಳು ಭಕ್ತಾದಿಗಳ ಒಗ್ಗೂಡುವಿಕೆಯಿಂದ ನಡೆಯಬೇಕು. ದೇವರ ಸಾನಿಧ್ಯ ವೃದ್ಧಿಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರಬೇಕು ಎಂದರು. ಪ್ರಮುಖರಾದ ವೆಂಕಟ್ರಮಣ ಗೌಡ ಕಳುವಾಜೆ, ಅಣ್ಣಿ ಪೂಜಾರಿ ಹಿಂದಾರು ಮಾತನಾಡಿ ನಾಗಪ್ರತಿಷ್ಠೆ, ಜಾತ್ರೋತ್ಸವ ಕಾರ್ಯಕ್ರಮಗಳ ಯಶಸ್ಸಿಗೆ ಎಲ್ಲರ ಸಹಕಾರ ಸಹಭಾಗಿತ್ವ ಮುಖ್ಯ ಎಂದರು. ಆಮಂತ್ರಣ ಪತ್ರಿಕೆಗಳನ್ನು ದೇವರ ನಡೆಯ ಮುಂದೆ ಇರಿಸಿ ಪ್ರಾರ್ಥಿಸಲಾಯಿತು. ಅರ್ಚಕ ರಮೇಶ ಬೈಪಾಡಿತ್ತಾಯ ಪ್ರಾರ್ಥಿಸಿದರು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಲೋಕಪ್ಪ ಗೌಡ ಕರೆಮನೆ, ಸದಸ್ಯರಾದ ಕುತ್ತಿಗುದ್ದೆ ಜನಾರ್ಧನ ಜೋಯಿಸ, ವೇದಾವತಿ ಕೆದ್ಕಾರು, ಸಂಧ್ಯಾಕುಮಾರಿ ಕೈಪಂಗಳ ದೋಳ, ಮಾಜಿ ಸದಸ್ಯ ಗುರುರಾಜ ಪುತ್ತೂರಾಯ, ತಾ.ಪಂ.ಮಾಜಿ ಸದಸ್ಯೆ ಯಶೋಧಾ ಕೆ. ಗೌಡ, ನರಿಮೊಗರು ಗ್ರಾ.ಪಂ.ಮಾಜಿ ಅಧ್ಯಕ್ಷ ಸುಭಾಶ್ಚಂದ್ರ ಶೆಣೈ, ಮುಂಡೂರು ಗ್ರಾ.ಪಂ.ಮಾಜಿ ಸದಸ್ಯ ಸಂಜೀವ ಪೂಜಾರಿ ಕುರೆಮಜಲು, ಪ್ರಮುಖರಾದ ವೇದನಾಥ ಸುವರ್ಣ ನರಿಮೊಗರು, ನಿವೃತ್ತ ಅಬಕಾರಿ ಅಧಿಕಾರಿ ಮಹಾಲಿಂಗ ನಾಯ್ಕ, ಪ್ರವೀಣ್ ಆಚಾರ್ಯ ನರಿಮೊಗರು, ಪ್ರಭಾಕರ ಸಾಲ್ಯಾನ್, ಬಾಲಕೃಷ್ಣ ರೈ ಮರ್ತಡ್ಕ, ದೇವಪ್ಪ ನಾಯ್ಕ ಕೇದಗೆದಡಿ, ಗಣೇಶ್ ಸಾಲ್ಯಾನ್ ಪಜಿಮಣ್ಣು, ಬಾಲಪ್ಪ ಗೌಡ ಕೆದ್ಕಾರು, ತಿಮ್ಮಪ್ಪ ನಾಯ್ಕ ಬಂಡಿಕಾನ, ವಾಸುದೇವ ಸಾಲಿಯಾನ್ ಪಜಿಮಣ್ಣು, ಪಿ.ರಮೇಶ್ ಗೌಡ, ಮಾಧವ ಸಾಲ್ಯಾನ್ ಕುರೆಮಜಲು, ಸುರೇಶ್ ಕಣ್ಣರಾಯ, ಬಿ.ಶುಭಕರ ಬಾರಿಕೆ, ರಮೇಶ್ ಗೌಡ ಕೆದ್ಕಾರು, ಕೃಷ್ಣಪ್ರಸಾದ್ ಶರ್ಮ, ಮೋಹನ ಗೌಡ ಜಿ., ನಿಶ್ಮಿತಾ ಕೆದ್ಕಾರು, ಸೌಮ್ಯ ನೆಕ್ಕಿಲು, ಸುಬ್ಬರಾಯ ಕೆ.ಎಸ್.ನೆಕ್ಕಿಲು, ಅನಿಷ್ ಕುಮಾರ್ ಕೆ., ವಿಜಯ, ಗಣೇಶ್ ಸಾಲ್ಯಾನ್ ಕೆ. ಮತ್ತಿತರರು ಉಪಸ್ಥಿತರಿದ್ದರು. ಸಹಾಯಕ ಅರ್ಚಕ ಶಂಕರನಾರಾಯಣ, ಸಿಬಂದಿ ವಿಜಿತ್ ಕುಮಾರ್, ಶಿವಪ್ರಸಾದಸ್ ಶಾಂತಿಗೋಡು ಸಹಕರಿಸಿದರು.