ಅನಂತಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹರಿಣಾಕ್ಷ, ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿಗೆ ಗೆಲುವು
ಪುತ್ತೂರು: ಬಂಟ್ವಾಳ ತಾಲೂಕಿನ ಅನಂತಾಡಿ ಹಾಗೂ ನೆಟ್ಲ ಮುಡ್ನೂರು ಗ್ರಾಮ ಪಂಚಾಯತ್ನಲ್ಲಿ ತೆರವಾದ ತಲಾ ಒಂದು ಸ್ಥಾನಗಳಿಗೆ ಫೆ.25 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ಅನಂತಾಡಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ ಹರಿಣಾಕ್ಷ ಹಾಗೂ ನೆಟ್ಲಮುಡ್ನೂರಿನಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿರವರು ವಿಜಯಿಯಾಗಿದ್ದಾರೆ.
ಮತ ಎಣಿಕೆ ಕಾರ್ಯಗಳು ಬಂಟ್ವಾಳ ಆಡಳಿತ ಸೌಧದಲ್ಲಿ ಫೆ.28ರಂದು ನಡೆಯಿತು. ಅನಂತಾಡಿ ಗ್ರಾಮ ಪಂಚಾಯತ್ನ ಒಟ್ಟು 667 ಮತದಾರರ ಪೈಕಿ 500 ಮಂದಿ ಮತ ಚಲಾಯಿಸಿದ್ದರು. ಇದರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಶಶಿಕಲಾ 254 ಮತವನ್ನು ಪಡೆದುಕೊಂಡು 242 ಮತಗಳನ್ನು ಪಡೆದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗೀತಾ ಚಂದ್ರಶೇಖರ್ರವರ ವಿರುದ್ಧ 12 ಮತಗಳ ಅಂತರದಿಂದ ಜಯಗಳಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಕಳೆದ ಬಾರಿ ಬಿಜೆಪಿ ತೆಕ್ಕೆಯಲ್ಲಿದ್ದ ಈ ಸ್ಥಾನವು ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಕೈವಶ ಮಾಡಿಕೊಂಡಿದೆ.
ಅನಂತಾಡಿ ಗ್ರಾ.ಪಂನ ಎರಡನೇ ವಾರ್ಡ್ನಲ್ಲಿ ವಿಜಯಿಯಾಗಿದ್ದ ಅಭ್ಯರ್ಥಿ ಸರಕಾರಿ ಉದ್ಯೋಗಕ್ಕೆ ತೆರಳಿದ್ದ ಹಿನ್ನೆಲೆಯಲ್ಲಿ ಅವರ ಸ್ಥಾನ ತೆರವಾದ ಸ್ಥಾನಕ್ಕೆ ಚುಣಾವಣೆ ನಡೆದಿದೆ.
ನೆಟ್ಲಮುಡ್ನೂರು ಗ್ರಾಮ ಪಂಚಾಯತ್ನ ಒಟ್ಟು 816 ಮತದಾರರ ಪೈಕಿ 596 ಮಂದಿ ಮತ ಚಲಾಯಿಸಿದ್ದರು. ಈ ಪೈಕಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಜಾತ ಜಗದೀಶ್ ಪೂಜಾರಿ ಮಿತ್ತಕೋಡಿರವರು 353 ಮತವನ್ನು ಪಡೆದುಕೊಂಡು 239 ಮತಗಳನ್ನು ಪಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಹರಿಣಾಕ್ಷಿರವರ ವಿರುದ್ಧ 114 ಮತಗಳ ಅಂತರದಿಂದ ಜಯಗಳಿದ್ದಾರೆ. 4 ಮತಗಳು ತಿರಸ್ಕೃತಗೊಂಡಿದೆ. ಈ ವಾರ್ಡ್ನಲ್ಲಿ ಕಳೆದ ಬಿಜೆಪಿ ಮತ್ತೆ ಗೆಲುವು ಸಾಧಿಸುವ ಮೂಲಕ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ನೆಟ್ಲ ಮುಡ್ನೂರಿನಲ್ಲಿ ಎರಡನೇ ವಾರ್ಡ್ನ ಸದಸ್ಯರು ಅಕಾಲಿಕ ಮರಣವನ್ನಪ್ಪಿದ್ದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆದಿತ್ತು.