ಪುತ್ತೂರು: ಪಾಲ್ತಾಡು ಗ್ರಾಮದ ಮಣಿಕ್ಕರ ಕ್ಷೇತ್ರದಲ್ಲಿ ಮಾ.26ರಿಂದ 28ರ ತನಕ ನಡೆಯಲಿರುವ ನಾಗ ರಕ್ತೇಶ್ವರಿ, ಗುಳಿಗ, ಕಲ್ಲುರ್ಟಿ ಹಾಗೂ ಕೊರಗಜ್ಜ ದೈವಗಳ ಪ್ರತಿಷ್ಠೆ ಹಾಗೂ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.28ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬಿಡುಗಡೆಗೊಂಡಿತು.
ಮಹಾಲಿಂಗೇಶ್ವರ ದೇವರಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದ ಬಳಿಕ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು.
ಇದೇ ಸಂದರ್ಭದಲ್ಲಿ ಆಗಮಿಸಿ ಕೊರಗಜ್ಜ ದೈವದ ಮೂರ್ತಿಗೆ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಅರ್ಚಕ ವಸಂತ ಕೆದಿಲಾಯ ಆಮಂತ್ರಣ ಬಿಡುಗಡೆ ಮಾಡಿ ಕೊರಗಜ್ಜ ದೈವದ ಮೂರ್ತಿಗೆ ಪೂಜೆ ಸಲ್ಲಿಸಿದರು.
ದೈವಸ್ಥಾನದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ಗೌರವಾಧ್ಯಕ್ಷರಾದ ದಂಬೆಕ್ಕಾನ ಸದಾಶಿವ ರೈ, ಮಿತ್ರಂಪಾಡಿ ಜಯರಾಮ ರೈ, ಧರ್ಮದರ್ಶಿ ಬಾಬು ಮಣಿಕ್ಕರ, ಕೇಶವ ಪೂಜಾರಿ ಬೆದ್ರಾಳ, ಮಹೇಶ್ಚಂದ್ರ ಸಾಲಿಯಾನ್, ನಾಗೇಶ್ ಆಚಾರ್ಯ, ಜಯಪ್ರಕಾಶ್ ರೈ ನೂಜಿಬೈಲು, ಕಿರಣ್ ಬಲ್ನಾಡು, ಗಂಗಾಧರ್ ಶೆಟ್ಟಿ ಎಲಿಕ, ರವಿಚಂದ್ರ ಆಚಾರ್ಯ ಹಾಗೂ ನೇಮಾಕ್ಷ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.