ಪುತ್ತೂರು: ಪರ್ಲಡ್ಕ ಗೋಳಿಕಟ್ಟೆ ಬಳಿ ಚರಂಡಿಯಲ್ಲಿ ತುಂಬಿದ ತ್ಯಾಜ್ಯ ನೀರಿನಿಂದಾಗಿ ಪರಿಸರದ ಹಿರಿಯರಿಗೆ ಸಾಂಕ್ರಾಮಿಕ ರೋಗ ಭೀತಿಯುಂಟಾಗಿದೆ.
ನಗರಸಭೆ ವ್ಯಾಪ್ತಿಯ ಪರ್ಲಡ್ಕ ಗೋಳಿಕಟ್ಟೆಯಲ್ಲಿ ಕೆಲವು ಮನೆಗಳಿಗೆ ಇಂಗುಗುಂಡಿಯಿಲ್ಲದೆ ಮನೆ ಶೌಚಾಲಯಗಳ ತ್ಯಾಜ್ಯ ನೀರು ಚರಂಡಿಯಲ್ಲಿ ಹರಿಯುತ್ತಿದೆ. ಆರೋಗ್ಯ ಕೆಡುತ್ತಿರುವ ಹಿರಿಯರು ನಗರಸಭೆಗೆ ದೂರು ನೀಡಿದ್ದಾರೆ.
ಈ ಕುರಿತು ನಗರಸಭೆಯಿಂದಲೂ ಸ್ಥಳ ತನಿಖೆ ಮಾಡಿ ಸಂಬಂಧಿಸಿದವರಿಗೆ ನೋಟೀಸ್ ಕೂಡಾ ಜಾರಿ ಮಾಡಿದ್ದಾರೆ. ಆದರೂ ಕೆಲವು ಮನೆಗಳಿಂದ ಮತ್ತೆ ಮತ್ತೆ ತ್ಯಾಜ್ಯ ನೀರನ್ನು ಚರಂಡಿಗೆ ಬಿಡುವ ಮೂಲಕ ಪರಿಸರದಲ್ಲಿ ರೋಗ ಭೀತಿಯುಂಟಾಗಿದೆ.
ಇದೀಗ ಪರಿಸರದಲ್ಲಿ ಚರಂಡಿ ತುಂಬಿ ತುಳುಕುತ್ತಿದೆ. ಎಲ್ಲಿ ಮಕ್ಕಳಿಗೆ ಹಿರಿಯರಿಗೆ ಮಲೇರಿಯಾ, ಚಿಕನ್ಗುನ್ಯ ಮುಂತಾದ ಮಾರಕ ಸಾಂಕ್ರಾಮಿಕ ಕಾಯಿಲೆಗಳು ಬರುತ್ತವೋ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.