ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಯುಕೆಜಿ ಮಕ್ಕಳ ಪದಪ್ರಧಾನ ಸಮಾರಂಭ

0

ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಕಾಳಜಿ ತೋರಿಸಬೇಕು- ಸವಣೂರು ಸೀತಾರಾಮ ರೈ

ಚಿತ್ರ: ಉಮಾಪ್ರಸಾದ್ ರೈ ನಡುಬೈಲು

ಪುತ್ತೂರು: ಎಳೆಯ ಮಕ್ಕಳ ಭವಿಷ್ಯದ ಬಗ್ಗೆ ಪೋಷಕರು ಹೆಚ್ಚಿನ ಕಾಳಜಿಯನ್ನು ತೋರಿಸಬೇಕು ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸವಣೂರು ಕೆ.ಸೀತಾರಾಮ ರೈಯವರು ಹೇಳಿದರು.

ಅವರು ಮಾ. 2 ರಂದು ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಯುಕೆಜಿ ಮಕ್ಕಳ ಪದಪ್ರಧಾನ ಸಮಾರಂಭದ ಅಧ್ಯಕ್ಷತೆ ವಹಿಸಿ, ಮಾತನಾಡಿ ಇಂದಿನ ಮಕ್ಕಳು ಎಳೆಯ ಪ್ರಾಯದಿಂದಲೇ ಇಂಟರ್‌ನೆಟ್, ಕಂಪ್ಯೂಟರ್‌ಗಳಲ್ಲಿ ಪರಿಣತಿಯನ್ನು ಬೆಳೆಸಿಕೊಂಡು, ಶಿಕ್ಷಣದಲ್ಲಿ ಮುಂದೆ ಬರುತ್ತಿರುವುದು ತುಂಬಾ ಸಂತೋಷದ ವಿಚಾರವಾಗಿದೆ. ಯುಕೆಜಿ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಅವರ ಮುಂದಿನ ತರಗತಿಗೆ ವಿದ್ಯಾರಶ್ಮಿಯು ವಿಶೇಷವಾದ ಕಾಳಜಿಯನ್ನು ತೋರಿಸುತ್ತಿದೆ ಎಂದು ಹೇಳಿದರು.
ಕಸ್ತೂರಿಕಲಾ ಎಸ್ ರೈ ಸವಣೂರುರವರು ಕಾರ‍್ಯಕ್ರಮವನ್ನು ದೀಪಬೆಳಗಿಸಿ, ಉದ್ಘಾಟಿಸಿದರು.

ಓದುವ ಹವ್ಯಾಸ ಬೆಳೆಸಿ- ಅಶ್ವಿನ್ ಶೆಟ್ಟಿ
ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿರವರು ಮಾತನಾಡಿ ಮಕ್ಕಳಿಗೆ ಇಂಗ್ಲೀಷ್ ಕಲಿಕೆಗೆ ಪೂರಕವಾಗುವ ಕಥೆ ಪುಸ್ತಕವನ್ನು ಓದುವ ಹವ್ಯಾಸವನ್ನು ಬೆಳೆಸಲು ಪೋಷಕರು ಮನಸು ಮಾಡಬೇಕು ಎಂದರು.

ಓದು ಮಾತ್ರ ಪ್ರತಿಭೆ ಅಲ್ಲ-ಕೇವಳ
ವಿದ್ಯಾರಶ್ಮಿ ವಿದ್ಯಾಲಯದ ಪ್ರಾಂಶುಪಾಲ ಸೀತಾರಾಮ ಕೇವಳರವರು ಮಾತನಾಡಿ ಪ್ರತಿ ಮಗುವಿನಲ್ಲೂ ಒಂದೊಂದು ಪ್ರತಿಭೆ ಆಡಕವಾಗಿದೆ. ಕೇವಲ ಓದು ಮಾತ್ರ ಪ್ರತಿಭೆ ಅಲ್ಲ. ವಿವಿಧ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದಾಗ ಗೌರವ ಸಿಗುತ್ತದೆ ಎಂದರು.

ಸಂಸ್ಥೆಯ ಟ್ರಸ್ಟಿಗಳಾದ ಸವಣೂರು ಎನ್.ಸುಂದರ ರೈ, ರಶ್ಮಿ ಅಶ್ವಿನ್ ಶೆಟ್ಟಿ, ಸಂಸ್ಥೆಯ ರಕ್ಷಕ-ಶಿಕ್ಷಕ ಸಂಘದ ಸದಸ್ಯೆ ಸವಿತಾ ಕಾಯರ್ಗ, ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾರಾಯಣ ಮೂರ್ತಿ, ವಿದ್ಯಾರಶ್ಮಿ ವಿದ್ಯಾಲಯದ ಉಪ ಪ್ರಾಂಶುಪಾಲೆ ಶಶಿಕಲಾ ಎಸ್.ಆಳ್ವರವರುಗಳು ಉಪಸ್ಥಿತರಿದ್ದರು.

ಯುಕೆಜಿ ವಿದ್ಯಾರ್ಥಿ ತನಯಿ ಡಿ.ಕೆ, ಸ್ವಾಗತಿಸಿ, ಫಾತಿಮತ್ ಹುದಾ ವಂದಿಸಿದರು. ಮೋಕ್ಷ ಕೆ.ವಿ.ಕಾರ‍್ಯಕ್ರಮ ನಿರೂಪಿಸಿದರು. ಶಿಕ್ಷಕಿಯರಾದ ಸುನೀತಾ, ತಿರುಮಲೇಶ್ವರಿ ಕಾರ‍್ಯಕ್ರಮದಲ್ಲಿ ಸಹಕರಿಸಿದರು.

LEAVE A REPLY

Please enter your comment!
Please enter your name here