ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ಎಂಬಲ್ಲಿ ಹೋರಿಯೊಂದನ್ನು ಇಬ್ಬರು ವ್ಯಕ್ತಿಗಳು ಹಿಂಸಾತ್ಮಕವಾಗಿ ನಡೆಸಿಕೊಂಡು ಹೋಗುತ್ತಿದ್ದ ವಿಚಾರಕ್ಕೆ ಸಂಬಂಧಿಸಿ ಇಬ್ಬರು ವ್ಯಕ್ತಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚಿಕ್ಕಮುಡ್ನೂರು ಗ್ರಾಮದ ಫಾರೂಕ್ ಮತ್ತು ಪ್ರಶಾಂತ್ ಎಂಬವರು ಆರೋಪಿಗಳಾಗಿದ್ದು, ಅವರು ಬೀರ್ನಹಿತ್ಲುವಿನಿಂದ ಹೋರಿಯೊಂದನ್ನು ಖರೀದಿಸಿ ಅದನ್ನು ರಸ್ತೆ ಬದಿಯಲ್ಲಿ ಹಿಂಸಾತ್ಮಕ ರೀತಿಯಲ್ಲಿ ನಡೆಸಿಕೊಂಡು ಹೋಗುತ್ತಿದ್ದಾಗ ಕಿರಣ್ ಎಂಬವರು ವಿಚಾರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಚಾರಣೆ ನಡೆಸಿದಾಗ ಹೋರಿಯನ್ನು ವಧೆ ಮಾಡಲು ಕೆರೆಮೂಲೆಗೆ ಕೊಂಡೊಯ್ಯುತ್ತಿರುವುದು ಬೆಳಕಿಗೆ ಬಂದಂತೆ ಫಾರೂಕ್ ಮತ್ತು ಪ್ರಶಾಂತ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.