ರಾಮಕೃಷ್ಣ ಸೇವಾ ಸಮಾಜದಲ್ಲಿ ಉಚಿತ ನೇತ್ರ ಚಿಕಿತ್ಸಾ ಶಿಬಿರ

0

ಪುತ್ತೂರು: ಆನಂದಾಶ್ರಮ ಸೇವಾ ಟ್ರಸ್ಟ್, ಸರಕಾರಿ ಆಸ್ಪತ್ರೆ ಹಾಗೂ ಶ್ರೀ ರಾಮಕೃಷ್ಣ ಸೇವಾ ಸಮಾಜ ಪುತ್ತೂರು ಇವರ ಸಹ ಭಾಗಿತ್ವದಲ್ಲಿ ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ, ದ.ಕ ಜಿಲ್ಲಾ ಸಂಚಾರಿ ನೇತ್ರ ಘಟಕ ಹಾಗೂ ಮಂಗಳೂರಿನ ಖ್ಯಾತ ಜಿಲ್ಲಾ ಆಸ್ಪತ್ರೆ ಹಾಗೂ ಕೆಎಂಸಿ ಆಸ್ಪತ್ರೆಯ ಪ್ರಸಿದ್ಧ ನೇತ್ರ ತಜ್ಞರ ತಂಡದವರಿಂದ ಉಚಿತ ನೇತ್ರ ಚಿಕಿತ್ಸಾ ಶಿಬಿರವು ಮಾ.7ರಂದು ನೆಲ್ಲಿಕಟ್ಟೆ ಶ್ರೀ ರಾಮಕೃಷ್ಣ ಸೇವಾ ಸಮಾಜದಲ್ಲಿ ನಡೆಯಿತು.

ಶಿಬಿರವನ್ನು ಶ್ರೀರಾಮಕೃಷ್ಣ ಸೇವಾ ಸಮಾಜದ ಅಧ್ಯಕ್ಷ ಎನ್.ಸುಬ್ರಹ್ಮಣ್ಯಂ ಕೊಳತ್ತಾಯ ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಕಣ್ಣಿನ ಆರೋಗ್ಯ ಸಂರಕ್ಷಣೆ ಬಹುಮುಖ್ಯ. ಕಣ್ಣಿನ ಆರೋಗ್ಯ ಸಂಬಂಧಿಸಿದಂತೆ ಉತ್ತಮ ವೈದ್ಯರುಗಳು ಹಾಗೂ ಚಿಕಿತ್ಸೆಗಳು ದೊರೆಯುತ್ತಿದೆ. ಇಂತಹ ಸೇವಾ ಶಿಬಿರಗಳು ಪೂರಕವಾಗಿದ್ದು ಜನರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿದ್ದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಆಶಾ ಪುತ್ತೂರಾಯ ಮಾತನಾಡಿ, ಜನರಿಗೆ ಬರುವಂತ ಕುರುಡುತನವನ್ನು ಕಡಿಮೆ ಮಾಡುವ ಉದ್ದೇಶದಿಂದ ಉಚಿತ ಶಿಬಿರಗಳನ್ನು ನಡೆಸಲಾಗುತ್ತಿದೆ. ಕಣ್ಣಿನ ಸಾಮಾನ್ಯ ಖಾಯಿಲೆಗಳು ಕುರುಡುತನಕ್ಕೆ ಕಾರಣವಾಗುತ್ತಿದ್ದು ಅಂತಹವನ್ನು ಗುರುತಿಸಿ ಅವರಿಗೆ ಚಿಕಿತ್ಸೆಗಳನ್ನು ನೀಡಿ ಲೆನ್ಸ್ ಅಳಡಿಸುವ ಕಾರ್ಯಗಳು ಶಿಬಿರಗಳ ಮೂಲಕ ನಡೆಯುತ್ತಿದೆ. ಇದರ ಬಗ್ಗೆ ಚಿಕಿತ್ಸೆ ಪಡೆದವರು ತಮ್ಮ ಮನೆ ಪರಿಸರದವರಿಗೂ ಮಾಹಿತಿ ನೀಡುವಂತೆ ಅವರು ತಿಳಿಸಿದರು.

ಆನಂದಾಶ್ರಮ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಡಾ.ಗೌರಿ ಪೈ, ರಾಮಕೃಷ್ಣ ಸೇವಾ ಸಮಾಜದ ಕಾರ್ಯದರ್ಶಿ ಗುಣಪಾಲ ಜೈನ್, ನೇತ್ರಾಧಿಕಾರಿಗಳಾದ ಶಾಂತಾರಾಜ್, ಅನಿಲ್ ರಾಮಾನುಜನ್, ಶಶಿಕುಮಾರ್, ಡಾ.ಊರ್ಜಾ ಶರ್ಮ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾ ಸಮಾಜದ ವಿದ್ಯಾರ್ಥಿಗಳಾದ ಇಂದುಶ್ರೀ ಹಾಗೂ ಸುಚಿತಾ ಪ್ರಾರ್ಥಿಸಿದರು. ವತ್ಸಲಾ ರಾಜ್ಞಿ ಸ್ವಾಗತಿಸಿ, ವಂದಿಸಿದರು.

ಶಿಬಿರದಲ್ಲಿ ಕಣ್ಣಿನ ಉಚಿತ ಪರೀಕ್ಷೆ, ಚಿಕಿತ್ಸೆ, ಸಲಹೆ ನೀಡಲಾಯಿತು. ಆವಶ್ಯವಿದ್ದವರಿಗೆ ಮಂಗಳೂರಿನಲ್ಲಿ ಕಣ್ಣಿನ ಉಚಿತ ಪೊರೆ ಶಸ್ತ್ರಚಿಕಿತ್ಸೆಯನ್ನು ಆಯೋಜಿಸಲಾಗಿತ್ತು.

LEAVE A REPLY

Please enter your comment!
Please enter your name here