ನಗರಸಭೆ ವ್ಯಾಪ್ತಿಯಲ್ಲಿ ರೂ. 7.67 ಕೋಟಿಯ ವಿವಿಧ ಕಾಮಗಾರಿಗಳಿಗೆ ಶಂಕು ಸ್ಥಾಪನೆ

0

ನವ ಪುತ್ತೂರಿಗಾಗಿ ಜನರ ಮೂಲಭೂತ ಸೌಕರ್ಯ ಹೆಚ್ಚಿಸಿ ಮಾದರಿ ನಗರಸಭೆಗೆ ಆದ್ಯತೆ – ಸಂಜೀವ ಮಠಂದೂರು
ನಗರಸಭೆ ಸದಸ್ಯರು ತಲೆ ಎತ್ತಿ ತಿರುಗಲು ಶಾಸಕರು ಕಾರಣ – ಕೆ.ಜೀವಂಧರ್ ಜೈನ್

ಪುತ್ತೂರು: ದೇಶದ ಪ್ರಧಾನಿಯವರು ನವಭಾರತ ಆಗುವ ಕಲ್ಪನೆ ಅಡಿಯಲ್ಲಿ ದೇಶವನ್ನು ಮುನ್ನಡೆಸಿದರು. ರಾಜ್ಯದ ಮುಖ್ಯಮಂತ್ರಿಯವರು ನವ ಕರ್ನಾಟಕ ಆಗಬೇಕೆಂದು ರಾಜ್ಯವನ್ನು ಮುನ್ನಡೆಸಿದರು. ನಾವೆಲ್ಲ ನವ ಪುತ್ತೂರು ಆಗಬೇಕೆಂದು ರೂ. 7.67ಕೋಟಿ ಅನುದಾನ ತಂದು ಜನರ ಮೂಲಭೂತ ಸೌಲಭ್ಯ ಹೆಚ್ಚಿಸುವ ಜೊತೆಯಲ್ಲಿ ಪುತ್ತೂರು ನಗರಸಭೆ ರಾಜ್ಯದಲ್ಲಿ ಮಾದರಿ ನಗರಸಭೆಯಾಗಿ ಮೂಡಿ ಬರಬೇಕೆಂದು ನಗರದ ಸುಂದರಿಕರಣ ಮತ್ತು ಸ್ವಚ್ಛತೆಗೆ ಆದ್ಯತೆ ಕೊಟ್ಟು ಕೆಲಸ ಮಾಡುತ್ತಿದ್ದೇವೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.

ನಗರಸಭೆ ಅಮೃತ ನಗರೋತ್ಥಾನ 2ನೇ ಹಂತದ ರೂ. 4.67 ಕೋಟಿ ಮತ್ತು ನಗರೋತ್ಥಾನ ಪ್ರೋತ್ಸಾಹ ಧನ ರೂ. 3 ಕೋಟಿ ಅನುದಾನದಡಿ ಕೈಗೊಳ್ಳುವ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆಯನ್ನು ಮಾ.8ರಂದು ಬೆದ್ರಾಳದಲ್ಲಿ ಸೇತುವೆ ಕಾಮಗಾರಿ ಶಿಲಾನ್ಯಾಸ ಮಾಡಿ ಕ್ಯಾಂಪ್ಕೋ ಚಾಕಲೇಟು ಫ್ಯಾಕ್ಟರಿ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಳೆದ ಎರಡು ವರ್ಷಗಳಿಂದ ನಗರಸಭೆ ಅಸ್ತಿತ್ವಕ್ಕೆ ಬಂದ ಬಳಿಕ ನಾನು ಶಾಸಕನಾಗಿ 5 ವರ್ಷದ ಅವಧಿಯಲ್ಲಿ 70 ಸಾವಿರ ಜನಸಂಖ್ಯೆ ಇರುವ ನಗರಸಭೆ ವ್ಯಾಪ್ತಿಯಲ್ಲಿ ಶಾಶ್ವತ ಕಾಮಗಾರಿ ನಡೆಸಲಾಗುತ್ತಿದೆ. ಅದರಲ್ಲಿ ಅದರಲ್ಲಿ ಕುಡಿಯುವ ನೀರಿಗಾಗಿ ಜಲಸಿರಿ ಯೋಜನೆಯಲ್ಲಿ ಮುಂದಿನ 25 ವರ್ಷಕ್ಕೆ ಪುತ್ತೂರಿನ ಜನಸಂಖ್ಯೆಗೆ ಬೇಕಾಗುಷ್ಟು ನೀರನ್ನು ಒದಗಿಸುವುದು, ಅದಕ್ಕೆ ರೂ 117ಕೋಟಿ ಯೋಜನೆ ಕಾರ್ಯಗತ ಗೊಳ್ಳುತ್ತಿದೆ. ಕೆಲವೆ ತಿಂಗಳಲ್ಲಿ ಲೋಕಾರ್ಪಣೆ ಆಗಲಿದೆ. ವಿಶೇಷ ಅನುದಾನ ಮುಖ್ಯಮಂತ್ರಿಗಳಿಂದ ರೂ.25ಕೋಟಿ ಒದಗಿಸಿದೆ. ಸುಮಾರು 40 ವರ್ಷದ ಬೇಡಿಕೆಯಾಗಿರುವ ಹಾರಾಡಿ ರೈಲ್ವೇ ನಿಲ್ದಾಣ ಸಂಪರ್ಕ ರಸ್ತೆಗೆ ಶಿಲಾನ್ಯಾಸ ಮಾಡುವ ಮೂಲಕ ನಗರೋತ್ಥಾನದ ಪ್ರಥಮ ಹಂತದ ಕಾಮಗಾರಿಯು ಮುಗಿದು, ಇದೀಗ 2ನೇ ಹಂತದಲ್ಲಿ 4.67 ಕೋಟಿ ಮತ್ತು ಮುಖ್ಯಮಂತ್ರಿಗಳಿಂದ ಹೆಚ್ಚುವರಿಯಾಗಿ ಪಡೆದ ರೂ. 3 ಕೋಟಿ ಅನುದಾನದಲ್ಲಿ ಇವತು ಏಕಕಾಲದಲ್ಲಿ ಚಾಲನೆ ನೀಡಲಾಗಿದೆ ಎಂದರು.

ನಗರಸಭೆ ಸದಸ್ಯರು ತಲೆ ಎತ್ತಿ ತಿರುಗಲು ಶಾಸಕರು ಕಾರಣ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಆಡಳಿತ ಪಡೆದಾಗ ಸಾರ್ವಜನಿಕರಿಗೆ ಪ್ರಣಾಳಿಕೆ ಮೂಲಕ ಆಶ್ವಾಸನೆ ನೀಡಿದಂತೆ ಸ್ವಚ್ಛ ಸುಂದರ ನಗರ, ಮೂಲಭೂತ ಸೌಕರ್ಯವನ್ನು ಕಳೆದ ಎರಡು ವರ್ಷಗಳಿಂದ ಪುತ್ತೂರು ನಗರಸಭೆಯಲ್ಲಿ ಬಹಳಷ್ಟು ಬಸ್‌ತಂಗುದಾಣವನ್ನು ಶಾಸಕರ ಅನುದಾನದಲ್ಲಿ ಮಾಡಲಾಗಿದೆ. ಎರಡು ವರ್ಷ ಚುನಾವಣೆಯಾಗಿ ಆಡಳಿತ ಇಲ್ಲದಿದ್ದರೂ ಶಾಸಕರು ಪ್ರತಿ ವಾರ್ಡ್‌ಗಳಿಗೆ ಅನುದಾನ ನೀಡುವ ಮೂಲಕ ಸದಸ್ಯರು ತಲೆಎತ್ತಿ ತಿರುಗಲು ಕಾರಣಿಕರ್ತರಾದವರು ನಮ್ಮ ಶಾಸಕರು ಎಂದರು.

ನಗರೋತ್ಥಾನ ಕಾರ್ಯಪಾಲಕ ಅಭಿಯಂತರ ಪುರಂದರ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರಸಭೆ ಸದಸ್ಯರಾದ ಪಿ.ಜಿ.ಜಗನ್ನಿವಾಸ ರಾವ್, ಶೀನಪ್ಪ ನಾಯ್ಕ್, ಯೂಸೂಪ್, ಗೌರಿ ಬನ್ನೂರು, ಮನೋಹರ್ ಕಲ್ಲಾರೆ, ದೀಕ್ಷಾ ಪೈ, ಸಹಾಯಕ ಕಾರ್ಯಪಾಲಕ ಅಭಿಯಂತರ ದುರ್ಗಾಪ್ರಸಾದ್, ನಗರಸಭೆ ಕಚೇರಿ ಮೆನೇಜರ್ ಪಿಯುಸ್ ಡಿ ಸೋಜ ಅತಿಥಿಗಳನ್ನು ಗೌರವಿಸಿದರು. ನಗರಸಭೆ ಸಿಬ್ಬಂದಿ ಜಯಲಕ್ಷ್ಮೀ ಪ್ರಾರ್ಥಿಸಿದರು. ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ ಸ್ವಾಗತಿಸಿ, ಮಮತಾ ರಂಜನ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಆರಂಭದಲ್ಲಿ ಬೆದ್ರಾಳ ಪುತ್ರಮೂಲೆಯಲ್ಲಿ ಸೇತುವೆ ಕಾಮಗಾರಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಜೇನು ವ್ಯವಸಾಯ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಧಿಕಾರಿ ಮಹಾಬಲ ಭಟ್, ಡಾ.ರಮೇಶ್, ಡಾ.ಪಿ.ಕೆ.ಎಸ್ ಭಟ್, ನಗರಸಭಾ ಸದಸ್ಯರಾದ ಪ್ರೇಮಲತಾ ನಂದಿಲ ಸಹಿತ ನಗರಸಭೆ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here