ಪುತ್ತೂರು: ನಾವು ನಮ್ಮನ್ನೇ ಕ್ರಿಸ್ತನ ಮೌಲ್ಯಗಳೊಂದಿಗೆ ರೂಪಾಂತರಗೊಳಿಸಿದರೆ, ಇಡೀ ಸಮುದಾಯವನ್ನು ಬದಲಾಯಿಸಬಹುದು ಎಂದು ವಂ| ಲ್ಯಾರಿ ಪಿಂಟೊ ಹೇಳಿದರು. ಅವರು ಮಾ.5 ರಂದು ನಡೆದ ಮಾಯ್ ದೆ ದೇವುಸ್ ಚರ್ಚ್ನ 2022-23 ನೇ ವಾರ್ಷಿಕ ಕ್ರೈಸ್ತ ಶಿಕ್ಷಣ ದಿವಸದ ಸಂಭ್ರಮದಲ್ಲಿ ಮಾತನಾಡಿದರು.
ಮಾಯ್ ದೆ ದೇವುಸ್ ಚರ್ಚ್ ಇದರ ವ್ಯಾಪ್ತಿಗೊಳಪಟ್ಟ ಕ್ರೈಸ್ತ ಶಿಕ್ಷಣದ ವಾರ್ಷಿಕ ದಿವಸವು ದಿವ್ಯ ಬಲಿ ಪೂಜೆಯನ್ನು ಅರ್ಪಿಸುವುದರ ಮೂಲಕ ಚಾಲನೆ ಕೊಡಲಾಯಿತು. ಪ್ರಧಾನ ಧರ್ಮಗುರುಗಳಾಗಿ ವಂ| ಲ್ಯಾರಿ ಪಿಂಟೊ , ಸಹಾಯಕ ನಿರ್ದೇಶಕರು ಸಂತ ಅಂತೋಣಿಯವರ ಆಶ್ರಮ ಜೆಪ್ಪುರವರು ನೆರವೇರಿಸಿದರು. ಚರ್ಚ್ನ ಧರ್ಮಗುರುಗಳಾದ ವಂ| ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರುಗಳಾದ ವಂ|ಕೆವಿನ್ ಲಾರೆನ್ಸ್ ಡಿಸೋಜಾರವರು ದಿವ್ಯ ಬಲಿಪೂಜೆಯಲ್ಲಿ ಉಪಸ್ಥಿತರಿದ್ದರು.
ಕ್ರೈಸ್ತ ಧರ್ಮಕ್ಕೆ ಸಂಬಂಧಿಸಿದ ರೂಪಕ, ನೃತ್ಯಗಳು, 1 ರಿಂದ 12ರ ವರೆಗೆ ತರಗತಿವಾರು ಕ್ರೈಸ್ತ ಮಕ್ಕಳು ನಟಿಸಿ, ಸಮುದಾಯಕ್ಕೆ ಮನರಂಜನೆ ನೀಡಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಕ್ಯಾಂಪಸ್ ನಿರ್ದೇಶಕರಾದ ವಂ|ಸ್ಟ್ಯಾನಿ ಪಿಂಟೋ, ಸಂತ ಫಿಲೋಮಿನಾ ಪಿ.ಯು ಕಾಲೇಜ್ನ ಪ್ರಾಂಶುಪಾಲ ವಂ| ಅಶೋಕ್ ರಾಯನ್ ಕ್ರಾಸ್ತಾ, ಪುತ್ತೂರು ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷರಾದ ಜೆರಾಲ್ಡ್ ಡಿಕೋಸ್ಟಾ , ಕಾರ್ಯದರ್ಶಿ ಎವ್ಲಿನ್ ಡಿಸೋಜಾ, ಆಯೋಗದ ಸಂಯೋಜಕರಾದ ಜೋನ್ ಡಿಸೋಜಾ ಮತ್ತು ಸದಸ್ಯರು ಉಪಸ್ಥಿತರಿದ್ದರು. ಪುತ್ತೂರು ಚರ್ಚ್ನ ಕ್ರೈಸ್ತ ಶಿಕ್ಷಣದ ಸಂಯೋಜಕ ಕ್ಲೆಮೆಂಟ್ ಪಿಂಟೊ ಸ್ವಾಗತಿಸಿ, ಸಹಾಯಕ ಧರ್ಮಗುರುಗಳಾದ ವಂ| ಕೆವಿನ್ ಲಾರೆನ್ಸ್ ಡಿಸೋಜಾ ವಂದಿಸಿದರು. ವೈ.ಸಿ.ಎಸ್ನ ವಿದ್ಯಾರ್ಥಿಗಳಾದ ಫಿಯೋನಾ ಮತ್ತು ಜೆನ್ನಿಫರ್ರವರು ಕಾರ್ಯಕ್ರಮವನ್ನು ನಿರೂಪಿಸಿದರು.
ಈ ಸಂದರ್ಭದಲ್ಲಿ ಕೈಸ್ತ ಶಿಕ್ಷಣದ ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳಿಗೆ ಅತೀ|ವಂ| ಲಾರೆನ್ಸ್ ಮಸ್ಕರೇನಸ್ ರವರು ಬಹುಮಾನವನ್ನು ನೀಡಿ ಅಭಿನಂದಿಸಿದರು. ಕ್ರೈಸ್ತ ಶಿಕ್ಷಣದ ತರಗತಿಗಳಲ್ಲಿ ಪೂರ್ಣ ಪ್ರಮಾಣ ಹಾಜರಾತಿ, ಒಂದು ಗೈರು ಹಾಗೂ ಇತರ ವಿದ್ಯಾರ್ಥಿಗಳಿಗೆ ವಂ| ಲ್ಯಾರಿ ಪಿಂಟೊರವರು ಬಹುಮಾನ ವಿತರಿಸಿ ಅಭಿನಂದಿಸಿದರು. ಕ್ರೈಸ್ತ ಶಿಕ್ಷಣದ ತರಗತಿಗಳನ್ನು ನಿಸ್ವಾರ್ಥ ಮನೋಭಾವದಿಂದ ಶಿಕ್ಷಣ ನೀಡಿ ಸಹಕರಿಸಿದ ಎಲ್ಲಾ ಶಿಕ್ಷಕ – ಶಿಕ್ಷಕಿಯರಿಗೆ ಕಿರು ಕಾಣಿಕೆಯನ್ನು ನೀಡುವ ಮೂಲಕ ಧರ್ಮಗುರುಗಳು ಎಲ್ಲರನ್ನೂ ಸನ್ಮಾನಿಸಿದರು.
ಬೆಳಿಗ್ಗೆ 9.30 ಕ್ಕೆ ಕಾಫಿ, ಫಲಹಾರ ಹಾಗೆಯೇ ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಮೃಷ್ಟಾನ್ಹ ಭೋಜನದೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.