ಕಂಬಳಬೆಟ್ಟು: ಯುವಕನಿಗೆ ತಂಡದಿಂದ ಹಲ್ಲೆ ಆರೋಪ – ಪ್ರಕರಣ ದಾಖಲು

0

ವಿಟ್ಲ: ವಿಟ್ಲಮುಡ್ನೂರು ಗ್ರಾಮದ ಕಂಬಳಬೆಟ್ಟು ದರ್ಗಾದ ಬಳಿ ಫೋನ್‌ನಲ್ಲಿ ಮಾತನಾಡುತ್ತಿದ್ದ ವ್ಯಕ್ತಿಗೆ ಮೂವರಿದ್ದ ಯುವಕರ ತಂಡ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗಾಯಗೊಂಡ ವ್ಯಕ್ತಿಯನ್ನು ಮೊಹಮ್ಮದ್‌ ಅನ್ವರ್‌ ಎಂದು ಗುರುತಿಸಲಾಗಿದ್ದು, ಸಿನಾನ್‌ ಯಾನೆ ಚಿನ್ನು, ರಾಬಿ, ಶಿಯಾಬ್‌ ಯಾನೆ ಮೂಚಿ ಆರೋಪಿಗಳಾಗಿದ್ದಾರೆ.

ನಾನು ಮಾ.7ರಂದು ರಾತ್ರಿ ಕಂಬಳಬೆಟ್ಟು ಜಂಕ್ಷನ್‌ ಸಮೀಪದ ಕಂಬಳಬೆಟ್ಟು ದರ್ಗಾದ ಬಳಿ ಫೋನ್‌ನಿನಲ್ಲಿ ಮಾತನಾಡುತ್ತಿದ್ದಾಗ ಸಿನಾನ್‌ ಯಾನೆ ಚಿನ್ನು, ರಾಬಿ ಹಾಗೂ ಶಿಯಾಬ್‌ ಯಾನೆ ಮೂಚಿರವರು ದ್ವಿ ಚಕ್ರ ವಾಹನದಲ್ಲಿ ಬಂದು ನನ್ನಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದ ಬಗ್ಗೆ ಕಮೆಂಟ್‌ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಬಳಿಕ ಸಿನಾನ್‌ ಯಾನೆ ಚಿನ್ನು ಅಲ್ಲೇ ಇದ್ದ ಕಬ್ಬಿಣದ ರಾಡನ್ನು ತೆಗೆದುಕೊಂಡು ಕಬ್ಬಿಣದ ರಾಡ್‌ ನಿಂದ ನನ್ನ ಕುತ್ತಿಗೆಯ ಹಿಂಭಾಗ ಹಾಗೂ ಎರಡೂ ಕೈಗಳ ಮೊಣ ಕೈಗಳ ಭಾಗಕ್ಕೆ ಹೊಡೆದಿದ್ದು, ರಾಬಿ ಕಲ್ಲಿನಿಂದ ಹಿಂಬದಿಯ ಸೊಂಟಕ್ಕೆ ಮತ್ತು ಬೆನ್ನಿಗೆ ಗುದ್ದಿದ್ದಾನೆ. ಶಿಯಾಬ್‌ ಯಾನೆ ಮೂಚಿ ಅನ್ವರ್ ನೆಲಕ್ಕೆ ಬಿದ್ದಾಗ ಎದೆಗೆ ಕಚ್ಚಿದಾಗ ಈ ಘಟನೆಯನ್ನು ನೋಡಿದ ಸ್ಥಳೀಯ ಮೂವರು ವ್ಯಕ್ತಿಗಳು ಬರುತ್ತಿರುವುದನ್ನು ಕಂಡು ತಂಡ ದ್ವಿಚಕ್ರ ವಾಹನಗಳಲ್ಲಿ ಪರಾರಿಯಾಗಿದ್ದಾರೆ ಎಂದು ಅನ್ವರ್ ವಿಟ್ಲ ಠಾಣಾ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯಿಂದ ಗಾಯಗೊಂಡ ಅನ್ವರ್ ರವರು ವಿಟ್ಲ ಸರಕಾರಿ ಆಸ್ಪತ್ರೆಗೆ ತೆರಳಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆಯನ್ನು ಪಡೆದುಕೊಂಡು ತೆರಳಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here