ಉಪ್ಪಿನಂಗಡಿ: ಇಲ್ಲಿನ ಶ್ರೀ ಸಹಸ್ರಲಿಂಗೇಶ್ವರ ದೇವಾಲಯದ ಮೂರನೇ ಮಖೆ ಜಾತ್ರೆಯಾದ ಅಷ್ಟಮಿ ಮಖೆ ಜಾತ್ರೆಯು ಮಾ. 14ರಂದು ರಾತ್ರಿಯಿಂದ ಮಾ. 15ರ ಮಧ್ಯಾಹ್ನದವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಂಗಳವಾರ ರಾತ್ರಿ ಶ್ರೀ ದೇವರ ಬಲಿ ಹೊರಟು ಉತ್ಸವ ಹಾಗೂ ವಿಜ್ರಂಭಣೆಯ ರಥೋತ್ಸವವು ಜರಗಿತು. ಬುಧವಾರದಂದು ಪ್ರಾತಃಕಾಲದಿಂದಲೇ ನೂರಾರು ಭಕ್ತರು ನೇತ್ರಾವತಿ ಕುಮಾರಧಾರಾ ನದಿ ಸಂಗಮ ಸ್ಥಳದಲ್ಲಿ ಪವಿತ್ರ ಮಖೆ ತೀರ್ಥ ಸ್ನಾನಗೈದು ಶ್ರೀ ದೇವರ ದರ್ಶನ ಗೈದರು. ಬಳಿಕ ದೇವಾಲಯದಲ್ಲಿ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ ಹಾಗೂ ಶ್ರೀ ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವ ಕಾರ್ಯಕ್ರಮ ಜರಗಿ ಮಹಾಪೂಜೆ ಹಾಗೂ ಅನ್ನ ಸಂತರ್ಪಣೆಯು ನಡೆಯಿತು.
ಈ ಸಂದರ್ಭ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕರುಣಾಕರ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಡಾ| ನಿಂಗಯ್ಯ, ವ್ಯವಸ್ಥಾಪನಾ ಸಮಿತಿಯ ಹರೀಶ ಉಪಾಧ್ಯಾಯ, ಹರಿರಾಮಚಂದ್ರ, ಶ್ರೀಮತಿ ಹರಿಣಿ ಕೆ., ಸುನೀಲ್ ಎ., ಶ್ರೀಮತಿ ಪ್ರೇಮಲತಾ, ರಾಮ ನಾಯ್ಕ, ಜಯಂತ ಪೊರೋಳಿ, ಮಹೇಶ್ ಜಿ. ಪ್ರಮುಖರಾದ ರಾಮಚಂದ್ರ ಮಣಿಯಾಣಿ, ಲಕ್ಷ್ಮಣ ಮಣಿಯಾಣಿ, ಕೈಲಾರು ರಾಜಗೋಪಾಲ ಭಟ್, ಡಾ. ರಾಜಾರಾಮ್ ಕೆ.ಬಿ., ಕಂಗ್ವೆ ವಿಶ್ವನಾಥ ಶೆಟ್ಟಿ, ರವೀಶ್ ಎಚ್.ಟಿ., ಕೃಷ್ಣ ರಾವ್ ಅರ್ತಿಲ, ಕೌಶಲ್ ಪ್ರಸಾದ್ ಶೆಟ್ಟಿ, ಗೋಪಾಲ ಹೆಗ್ಡೆ, ಸದಾನಂದ , ಚಿದಾನಂದ ನಾಯಕ್ ದೇವಾಲಯದ ವ್ಯವಸ್ಥಾಪಕ ವೆಂಕಟೇಶ್ ರಾವ್, ಸಿಬ್ಬಂದಿ ಸುಧಾಕರ ಶೆಟ್ಟಿ, ಪದ್ಮನಾಭ ಕುಲಾಲ್, ಕೃಷ್ಣಪ್ರಸಾದ್, ದಿವಾಕರ ಮತ್ತಿತರರು ಇದ್ದರು.