ವಿವೇಕಾನಂದ ಸೆಂಟ್ರಲ್ ಸ್ಕೂಲ್ ವತಿಯಿಂದ ಮಾಣಿ ಗ್ರಾಮ ವಿಕಾಸ ಯೋಜನಾ ಕಾರ್ಯಕ್ರಮ

0

ಪುತ್ತೂರು : ವಿವೇಕಾನಂದ ಸೆಂಟ್ರಲ್ ಸ್ಕೂಲ್(CBSE) ವತಿಯಿಂದ ಮಾಣಿ ಅಂಗನವಾಡಿಯಲ್ಲಿ ಗ್ರಾಮ ವಿಕಾಸ ಯೋಜನೆಯ ಕಾರ್ಯಕ್ರಮ ಮಾ.17ರಂದು ನಡೆಯಿತು,

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಉಜಿರೆಯ ಡಾ. ಅನನ್ಯ ಲಕ್ಷ್ಮೀ ಸಂದೀಪ ಮಾತನಾಡಿ “ಮಗುವಿನ ಆಯುಷ್ಯವನ್ನು ನಿರ್ಧರಿಸುವಷ್ಟು ಶಕ್ತಿಯುತವಾದ ಎದೆ ಹಾಲನ್ನು ಮಾತ್ರ ಮಗುವಿಗೆ ಆರು ತಿಂಗಳಿನವರೆಗೆ ಕೊಡಬೇಕು. ನಂತರದ ದಿನಗಳಲ್ಲಿ ಅದಕ್ಕೆ ಪೂರಕವಾಗಿ ಪೌಷ್ಟಿಕ ಆಹಾರಗಳನ್ನು ನೀಡಬೇಕು. ಒಂದು ವರ್ಷದ ಬಳಿಕ ಮನೆಯವರು ಸೇವಿಸುವ ಎಲ್ಲಾ ಆಹಾರಗಳನ್ನು ಸಮಯೋಚಿತವಾಗಿ ಕೊಡಬೇಕು” ಎಂದು ವಿವರಿಸುತ್ತಾ, ಮಗುವಿನ ಬೆಳವಣಿಗೆಯ ಯಾವ ಹಂತದಲ್ಲಿ ಯಾವ ಚಟುವಟಿಕೆಯನ್ನು ಮಾಡುತ್ತದೆ ಹಾಗೂ ಎದೆ ಹಾಲು ಕುಡಿಸುವ ಸರಿಯಾದ ಕ್ರಮ ಇತ್ಯಾದಿಗಳನ್ನು ನೆರೆದ ಮಾತೆಯರಿಗೆ ಮನದಟ್ಟು ಮಾಡಿದರು. “ಯಾವುದೇ ಮೂಢನಂಬಿಕೆಗೆ ಬಲಿಯಾಗದೆ ಸರಿಯಾದ ಪೌಷ್ಟಿಕ ಆಹಾರವನ್ನು ಮಗುವಿಗೆ ನೀಡಿದರೆ ಮಗು ಎಲ್ಲಾ ರೋಗಗಳಿಗೂ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ಸೆಂಟ್ರಲ್ ಸ್ಕೂಲ್ ಆಡಳಿತ ಮಂಡಳಿಯ ಸದಸ್ಯ ವಿಜಯಾನಂದ ಕೈಂತಜೆ ವಹಿಸಿದ್ದರು.ಮಾಣಿ ವಲಯದ ಅಂಗನವಾಡಿ ಮೇಲ್ವಿಚಾರಕಿ ರೋಹಿಣಿ, ಮಾಣಿ ಗ್ರಾಮ ಪಂಚಾಯತ್ ಬಾಲಕೃಷ್ಣ ಆಳ್ವ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಂಕರಿ ಶರ್ಮ ಪ್ರಾಸ್ತಾವಿಕ ನುಡಿಗಳನ್ನಾಗಿ ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು.

ದೈಹಿಕ ಶಿಕ್ಷಕ ನವೀನ್ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಅಂಗನವಾಡಿ ಶಿಕ್ಷಕಿ ಲಲಿತಾ ವಂದಿಸಿ. ಅಂಗನವಾಡಿ ಪುಟಾಣಿಗಳಿಂದ ಪ್ರಾರ್ಥನೆ ನಡೆಯಿತು.

LEAVE A REPLY

Please enter your comment!
Please enter your name here