ನಮಗೆ ಕಮ್ಯುನಲ್ ಭಾರತ ಬೇಡ -ಅಬ್ದುಲ್ ಜಬ್ಬಾರ್
ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆ ಪುತ್ತೂರು ಎಪಿಎಂಸಿ ರಸ್ತೆಯಲ್ಲಿರುವ ಕ್ರಿಸ್ತೋಫರ್ ಸಭಾಂಗಣದಲ್ಲಿ ನಡೆಯಿತು.ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ರಾಜ್ಯ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್ ಮಾತನಾಡಿ ನಮ್ಮ ಮುಂದಿನ ಪೀಳಿಗೆಗೆ ಕಮ್ಯುನಲ್ ಭಾರತವನ್ನು ಬಿಟ್ಟುಹೋಗದೆ ಬಾಂಧವ್ಯದ ಉತ್ತಮ ಭಾರತವನ್ನು ಕೊಡಬೇಕಾಗಿದೆ.ಯಾರು ಯಾವುದೇ ದ್ವೇಷವನ್ನು ಮಾಡಿದರೂ ನಾವು ಅವರನ್ನು ಪ್ರೀತಿಯಿಂದ ಕಾಣುವ ಮೂಲಕ ಜಾತ್ಯಾತೀತ ಭಾರತವನ್ನು ಮುಂದಿನ ಪೀಳಿಗೆಗೆ ಬಿಟ್ಟುಹೋಗಬೇಕಾಗಿದೆ ಎಂದು ತಿಳಿಸಿದರು.ಎಸ್ಡಿಪಿಐ ಸಹಿತ ಹಲವಾರು ಪಕ್ಷಗಳು, ತಾವು ಗೆಲುವು ಸಾಧಿಸುವುದಿಲ್ಲ ಎಂದು ತಿಳಿದರೂ ಕೂಡ ಕಮ್ಯುನಲ್ ಪಕ್ಷಕ್ಕೆ ಸಹಕಾರಿ ಆಗುವ ರೀತಿಯಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಇಂತಹ ಪಕ್ಷಗಳು ಒಳ್ಳೆಯ ಕೆಲಸ ಮಾಡಲಿ ಎಂದು ಅವರು ಹೇಳಿದರು.
ಮುಸ್ಲಿಂ ಯುವಕರಿಗೆ ಹಿರಿಯರು ಮಾರ್ಗದರ್ಶನ ನೀಡಬೇಕು-ಶಕುಂತಳಾ ಶೆಟ್ಟಿ:
ಮಾಜಿ ಶಾಸಕಿ ಶಕುಂತಳಾ ಶೆಟ್ಟಿಯವರು ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಬಹುಸಂಖ್ಯಾತ ಮುಸಲ್ಮಾನರಿದ್ದಾರೆ.ಆದರೆ ಮುಸಲ್ಮಾನರಲ್ಲಿಯೂ ಒಂದು ಬಣ ೭೦ ವರ್ಷದಲ್ಲಿ ಕಾಂಗ್ರೆಸ್ ಏನು ನೀಡಿದೆ ಎಂದು ಪ್ರಶ್ನಿಸುತ್ತಿದ್ದಾರೆ.ಇಂದು ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮಹಿಳೆಯರಿಗೆ ಪ್ರೋತ್ಸಾಹ, ಸ್ಥಾನಮಾನ ನೀಡಿ ಅವರನ್ನು ಮೇಲಕ್ಕೆ ತರುವ ಪ್ರಯತ್ನ ಕಾಂಗ್ರೆಸ್ನಿಂದಾಗಿದೆ.ಮುಸ್ಲಿಂ ಯುವಕರು ಕೂಡಾ ಕಾಂಗ್ರೆಸ್ನಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಲು ಹಿರಿಯರು ಅವರಿಗೆ ಮಾರ್ಗದರ್ಶನ ನೀಡಬೇಕಾಗಿದೆ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು-ಝೀನತ್: ಯುವ ಕಾಂಗ್ರೆಸ್ನ ರಾಷ್ಟ್ರೀಯ ಸಂಯೋಜಕಿ, ಕೆಪಿಸಿಸಿ ಉಸ್ತುವಾರಿ ಝೀನತ್ ಎನ್.ಗಲಾರವರು ಮಾತನಾಡಿ ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು. ಆ ಮೂಲಕ ಪುತ್ತೂರಿನಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಬೇಕು.ಇದು ನಮ್ಮೆಲ್ಲರ ಉದ್ದೇಶ ಆಶಯವಾಗಿ ನಾವೆಲ್ಲರೂ ಒಂದೇ ಎಂಬ ಭಾವನೆಯಿಂದ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಕಾಂಗ್ರೆಸ್ ಪರ ಕೆಲಸ ಕಾರ್ಯ ಮಾಡುವ ಅನಿವಾರ್ಯತೆ ಇದೆ.ಇದಕ್ಕಾಗಿ ಯುವ ಜನಾಂಗ ಮುಂದೆ ಬರಬೇಕೆಂದು ಹೇಳಿದರು.
ಕಾಂಗ್ರೆಸ್ ಬೆಳವಣಿಗೆಯಲ್ಲಿ ಅಲ್ಪಸಂಖ್ಯಾತರ ಸೇವೆ ಶ್ಲಾಘನೀಯ-ಶಾಹುಲ್ ಹಮೀದ್:
ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಅವರು ಮಾತನಾಡಿ ಅಲ್ಪಸಂಖ್ಯಾತರು ಕಾಂಗ್ರೆಸ್ನ ಅವಿಭಾಜ್ಯ ಅಂಗವಾಗಿದ್ದಾರೆ.ಕಾಂಗ್ರೆಸ್ನ ಬೆಳೆವಣಿಗೆಯಲ್ಲಿ ಅಲ್ಪಸಂಖ್ಯಾತರ ಸೇವೆ ಶ್ಲಾಘನೀಯ. ಮುಂದೆ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ನಮ್ಮ ಧ್ಯೇಯವಾಗಿದೆ.ನಾವು ಪರಸ್ಪರ ಪ್ರೀತಿ ವಿಶ್ವಾಸದಿಂದ ಕೆಲಸ ಕಾರ್ಯ ಮಾಡಿದಾಗ ಕಾಂಗ್ರೆಸ್ನ ಗೆಲುವು ಸಾಧ್ಯ ಎಂದರು.
ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಮೊಹಮ್ಮದ್, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಆಲಿ ಅವರು ಮಾತನಾಡಿ ಪಕ್ಷ ಸಂಘಟನೆಯ ಬಗ್ಗೆ ಹಾಗು ಅಲ್ಪಸಂಖ್ಯಾತರ ಬಗ್ಗೆ ಗಮನ ಹರಿಸಬೇಕಾದ ವಿಷಯಗಳ ಕುರಿತು ಮಾತನಾಡಿದರು.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಮುದಬ್ಬಿರ್ ಅಹಮ್ಮದ್, ಪ್ರಧಾನ ಕಾರ್ಯದರ್ಶಿಗಳಾದ ಮುಸ್ತಾಫ ಸುಳ್ಯ, ಸಿರಾಜ್ ಅಹಮ್ಮದ್, ಇಬ್ರಾನ್ ಅಹಮ್ಮದ್, ಇರ್ಷಾದ್ ಅಹಮ್ಮದ್ ಶೇಖ್, ಸಂಘಟನಾ ಕಾರ್ಯದರ್ಶಿ ರೆಹನಾ, ರಝಿಯಾ ಸುಲ್ತಾನ್, ಮೊಹಮ್ಮದ್ ಅಶ್ಪಕ್, ಯಾಹಿಯಾ ನಕ್ವಿ ಉಡುಪಿ, ಪುತ್ತೂರು ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ.ಎಚ್ ಶಕೂರ್ ಹಾಜಿ, ವಿಟ್ಲ ಉಪ್ಪಿನಂಗಡಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಕರೀಂ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ, ಕಾಂಗ್ರೆಸ್ ಮುಖಂಡ ಅಶೋಕ್ ಕುಮಾರ್ ರೈ ಕೋಡಿಂಬಾಡಿ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ, ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಪ್ರಸಾದ್ ಕೌಶಲ್ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಗೌಡ ಕೋಡಿಂಬಾಳ, ಕೆಪಿಸಿಸಿ ವಕ್ತಾರ ಅಮಲ ರಾಮಚಂದ್ರ, ಕೆಪಿಸಿಸಿ ಸದಸ್ಯ ಸತೀಶ್ ಕುಮಾರ್ ಕೆಡೆಂಜಿ, ಕೆಪಿಸಿಸಿ ಮಹಿಳಾ ಪದಾಧಿಕಾರಿ ಸಾಯಿರ ಜುಬೈರ್, ಕೃಪಾಅಮರ್ ಆಳ್ವ, ಸೀತಾ ಭಟ್, ಅಸ್ಮಾ ಗಟ್ಟಮನೆ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೌರೀಸ್ ಮಸ್ಕರೇನಸ್, ಸಿರಿಲ್ ರೋಡ್ರಿಗಸ್, ಯಾಕೂಬ್ ಮುಲಾರ್, ನಗರಸಭಾ ಸದಸ್ಯ ರಿಯಾಜ್ ವಳತ್ತಡ್ಕ, ರಶೀದ್ ಮುರ, ಬಶೀರ್ ಅಹಮ್ಮದ್, ಶೆರೀಫ್ ಬಲ್ನಾಡು, ದಾಮೋದರ್ ಭಂಡಾರ್ಕರ್, ಅಶ್ರಫ್ ಶೇಡಿಗುಂಡಿ ಕಡಬ, ಸಾಬ್ ಸಾಹೇಬ್ ಪಾಲ್ತಾಡು, ಎಮ್.ಎಸ್ ಹಮೀದ್, ಹುಸೈನ್ ದಾರಿಮಿ ರೆಂಜಲಾಡಿ, ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ,ಸಲಾಂ ಸಂಪ್ಯ, ಆಲಿಕುಂಞಿ, ವಿಕ್ಟರ್ ಪಾಯಸ್ ಸೇರಿದಂತೆ ನೂರಾರು ಮಂದಿ ಅಲ್ಪಸಂಖ್ಯಾತ ಘಟಕದ ಪದಾಧಿಕಾರಿಗಳು,ಕಾರ್ಯಕರ್ತರು ಉಪಸ್ಥಿತರಿದ್ದರು. ಸಿದ್ದಿಕ್ ಸುಲ್ತಾನ್ ಹಾಗು ಆಬೀದ್ ಕಣ್ಣೂರು ಕಾರ್ಯಕ್ರಮ ನಿರೂಪಿಸಿದರು.