ಪುತ್ತೂರು: ರೋಟರಿ ಅಂತರ್ರಾಷ್ಟ್ರೀಯ ಜಿಲ್ಲೆ 3181 ಇದರ ವಲಯ 4 ಮತ್ತು 5ರ ರೊಟೇರಿಯನ್ಸ್ ಗಳ ರೋಟರಿ ಝೋನಲ್ ಪ್ರೀಮಿಯರ್ ಲೀಗ್ ಝಡ್.ಪಿ.ಎಲ್ 2023 ಲೀಗ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯು ಮಾ.19 ರಂದು ಬೆಟ್ಟಂಪಾಡಿಯ ನವೋದಯ ಕ್ರೀಡಾಂಗಣದಲ್ಲಿ ಜರಗಿತು.
ರೋಟರಿ ಡಿಸ್ಟ್ರಿಕ್ಟ್ ಕಾರ್ಯದರ್ಶಿ ಕೆ.ವಿಶ್ವಾಸ್ ಶೆಣೈಯವರು ಉದ್ಘಾಟಿಸಿ ಮಾತನಾಡಿ, ಕ್ರೀಡೆಯಿಂದ ಆರೋಗ್ಯ ವೃದ್ಧಿಗೊಳ್ಳುತ್ತದೆ. ವಿವಿಧ ವಲಯಗಳ ರೊಟೇರಿಯನ್ಸ್ ಗಳು ಈ ಕ್ರಿಕೆಟ್ ಪಂದ್ಯಾಟದಲ್ಲಿ ಭಾಗವಹಿಸುವುದರ ಮೂಲಕ ಒಗ್ಗಟ್ಟು ಮೂಡಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು ಎಂದರು.
ಝಡ್.ಪಿ.ಎಲ್ ಸಲಹೆಗಾರರಾದ ಓಸ್ಕರ್ ಆನಂದ್ ಹಾಗೂ ಸಂತೋಷ್ ಶೆಟ್ಟಿ, ಇವೆಂಟ್ ಸಂಯೋಜಕರಾದ ರವಿಕುಮಾರ್ ರೈ ಹಾಗೂ ಕಾರ್ತಿಕ್ ರೈ,ರೋಟರಿ ಪುತ್ತೂರು ಸಿಟಿ ಅಧ್ಯಕ್ಷ ಪ್ರಶಾಂತ್ ಶೆಣೈ, ರೋಟರಿ ಕ್ಲಬ್ ಪುತ್ತೂರು ಈಸ್ಟ್ ಅಧ್ಯಕ್ಷ ಶರತ್ ಕುಮಾರ್ ರೈ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಅಸಿಸ್ಟೆಂಟ್ ಗವರ್ನರ್ ಮಂಜುನಾಥ್ ಆಚಾರ್ಯ ಸ್ವಾಗತಿಸಿ, ಝಡ್.ಪಿ.ಎಲ್ ವೈಸ್ ಛೇರ್ ಮ್ಯಾನ್ ಡಾ|ಹರ್ಷಕುಮಾರ್ ರೈ ವಂದಿಸಿದರು.
5 ತಂಡಗಳು-ಮಾಲಕರು..
-ಪುತ್ತೂರು ಸಿಟಿ ಸ್ಟ್ರೈಕರ್ಸ್-ಜೈಗುರು ಆಚಾರ್
-ಎಸ್.ಎಂ.ಸಿ ರೊಟೇರಿಯನ್ಸ್-ಸುಶಾಂತ್ ಹಾರ್ವಿನ್
-ಎಲೈಟ್ ಸೂಪರ್ ಕಿಂಗ್ಸ್-ಕಾರ್ತಿಕ್ ಸುಂದರ್
-ರೋಟರಿ ಡಾಮಿನೇಟರ್ಸ್-ರಿತೇಶ್ ಬಾಳಿಗ/ನಾಗಾರಾಜು ಬಿ
-ಯುವರತ್ನ ರೈಡರ್ಸ್-ಡಾ|ಹರ್ಷಕುಮಾರ್ ರೈ