ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅನುದಾನ ಒದಗಿಸಿಕೊಡುವಂತೆ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಂಸದರಿಗೆ ಮನವಿ

0

ಪುತ್ತೂರು: ಈಶ್ವರಮಂಗಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಹೊರಾಂಗಣದ ಸುತ್ತು ಪೌಳಿಗೆ ಶಾಶ್ವತ ಚಪ್ಪರ ರಚನೆಗೆ ಅನುದಾನ ಒದಗಿಸಿಕೊಡುವಂತೆ ಜೀರ್ಣೋದ್ಧಾರ ಸಮಿತಿ ವತಿಯಿಂದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಮಂಗಳೂರಿನಲ್ಲಿ ಭೇಟಿಯಾಗಿ ಮನವಿ ನೀಡಿದರು. ಮನವಿ ಸ್ವೀಕರಿಸಿದ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ನೂಜಿಬೈಲು, ಕರ್ನೂರು ಗುತ್ತು ರತನ್ ಕುಮಾರ್ ನಾಯ್ಕ್, ರಾಮಪ್ರಸಾದ್ ಆಳ್ವ ಮೇನಾಲ, ವಿಕ್ರಮ್ ರೈ ಸಾಂತ್ಯ, ದೀಪಕ್ ಮುಂಡ್ಯ , ವಿನೋದ್ ರಾಜ್ ರೈ ಅನಿಲೆ, ಪೂರ್ಣಚಂದ್ರ ರೈ ನೆಲ್ಲಿತ್ತಡ್ಕ, ಚಿನ್ಮಯ್ ರೈ ನಡುಬೈಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here