ನೆಲ್ಯಾಡಿ: ಪುತ್ತೂರು ತಾಲೂಕು ರಬ್ಬರ್ ಬೆಳೆಗಾರರ ಮತ್ತು ಮಾರಾಟಗಾರರ ಸಂಸ್ಕರಣಾ ಸಹಕಾರಿ ಸಂಘದ ನಿರ್ದೇಶಕ, ಕಡಬ ತಾಲೂಕಿನ ಇಚ್ಲಂಪಾಡಿ ನಿವಾಸಿ ಜಾರ್ಜ್‌ಕುಟ್ಟಿ ಉಪದೇಶಿಯವರು ಬರೆದಿರುವ’ ಓರ್ಮ ಕುರುಪು’(ನೆನಪು) ಪುಸ್ತಕವನ್ನು ಮರ್ದಾಳದಲ್ಲಿ ನಡೆದ ಮಲಂಕರ ಸಿರಿಯನ್ ಕ್ಯಾಥೋಲಿಕ್ ಚರ್ಚ್‌ನ ಪುತ್ತೂರು ಧರ್ಮಪ್ರಾಂತ್ಯದ ಧ್ಯಾನ ಶಿಬಿರದ ಕೊನೆಯ ದಿನವಾದ ಮಾ.19ರಂದು ಬಿಡುಗಡೆಗೊಳಿಸಲಾಯಿತು.
ಪುತ್ತೂರು ಧರ್ಮಪ್ರಾಂತ್ಯದ ಬಿಷಪ್ ಗೀವರ್ಗೀಸ್ ಮಾರ್ ಮಖಾರಿಯೋಸ್‌ರವರು ಪುಸ್ತಕ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ಜಾರ್ಜ್‌ಕುಟ್ಟಿ ಉಪದೇಶಿಯವರನ್ನು ಸನ್ಮಾನಿಸಲಾಯಿತು. ಜಾರ್ಜ್‌ಕುಟ್ಟಿ ಉಪದೇಶಿಯವರು ಮಾತನಾಡಿ, 1953ರಿಂದ 2023ರ ತನಕದ ನನ್ನ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದೇನೆ. ಮಲಯಾಳದಲ್ಲಿ ಪ್ರಕಟಗೊಂಡಿರುವ ಪುಸ್ತಕವನ್ನು ಕನ್ನಡದಲ್ಲೂ ಶೀಘ್ರದಲ್ಲಿ ಪ್ರಕಟಿಸಿ ಬಿಡುಗಡೆಗೊಳಿಸಲಾಗುವುದು. ಪುಸ್ತಕ ರಚನೆಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ರೆ.ಫಾ. ಝಖಾರಿಯಾಸ್ ನಂದಿಯಾಟ್ ಹಾಗೂ ಇತರೇ ಧರ್ಮಗುರುಗಳು, ಧರ್ಮಭಗಿನಿಯವರು, ವಿವಿಧ ಕ್ಷೇತ್ರಗಳ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.