ದೇಲಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ ಸಂಪನ್ನ

0

ಈಶ್ವರಮಂಗಲ: ದೇಲಂಪಾಡಿ ಶ್ರೀಮಹಾಲಿಂಗೇಶ್ವರ ದೇವರ 27ನೇ ಪ್ರತಿಷ್ಠಾ ವಾರ್ಷಿಕೋತ್ಸವ ವಿವಿಧ ದಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ದೇವತಾ ಪ್ರಾರ್ಥನೆ, ಗಣಹೋಮ, ನಾಗಬ್ರಹ್ಮ ಸ್ಥಾನದಲ್ಲಿ ತಂಬಿಲ ಸೇವೆ, ಹಾಗೂ ರಕ್ತೇಶ್ವರಿ ದೈವಸ್ಥಾನದಲ್ಲಿ ತಂಬಿಲ, ಮಹಾಲಿಂಗೇಶ್ವರ ದೇವರಿಗೆ ಮಹಾಪೂಜಾ ಮಹೋತ್ಸವ ಸಂಪನ್ನಗೊಂಡಿತು.

ಕ್ಷೇತ್ರ ತಂತ್ರಿವರ್ಯರಾದ ವೇಮೂ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರುರವರ ಮಾರ್ಗದರ್ಶನದಲ್ಲಿ ಕುಂಟಾರು ತಾಂತ್ರಿಕ ಸದನದ ಬ್ರಹ್ಮಶ್ರೀ ವಾಸುದೇವ ತಂತ್ರಿ ಸಂಗಡಿಗರು ಹಾಗೂ ಕ್ಷೇತ್ರದ ಪುರೋಹಿತ ನಾಗರಾಜ ಭಟ್ ಪೂಜಾ ವಿಧಿವಿಧಾನ ನೆರವೇರಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಡಿ.ರಾಮ ಭಟ್ ಹಾಗೂ ಅವರ ಸಹೋದರರು ಭಕ್ತಾದಿಗಳನ್ನು ಆದರದಿಂದ ಬರಮಾಡಿಕೊಂಡರು. ಮಹಾಲಿಂಗೇಶ್ವರ ಭಟ್ ದೇಲಂಪಾಡಿ, ಡಿ.ವೆಂಕಪ್ಪಯ್ಯ ಭಟ್ ದೇಲಂಪಾಡಿ, ಸುರೇಶ್ ಕುಮಾರ್ ದೇಲಂಪಾಡಿ, ಸೂರ್ಯನಾರಾಯಣ ಬೃಂದಾವನ ಸಹಕರಿಸಿದರು. ಕೆ. ವಿಶ್ವವಿನೋದ ಬನಾರಿ, ತಿರುಮಲೇಶ್ವರ ಭಟ್ ದೇಲಂಪಾಡಿ, ದೇರ್ಕಜೆ ಶ್ರೀರಾಮ ಭಟ್, ವಸಂತ ಭಟ್ ನಾಚಿಕೇರಿ, ಶಿವಪ್ರಸಾದ್ ಚೂಂತಾರು, ರವಿ ಕುಮಾರ್ ಕುತ್ಯಾಳ, ಸತ್ಯಶಂಕರ ಭಟ್ ಚೂಂತಾರು, ದಿನೇಶ ಕಾಟುರಾಯ, ಕೋಟಿಗದ್ದೆ ಗೋಪಾಲಯ್ಯ, ಬಿ.ಬಾಲಕೃಷ್ಣ ಗೌಡ ದೇಲಂಪಾಡಿ, ಡಿ. ರಮೇಶ್ ಟೈಲರ್ ದೇಲಂಪಾಡಿ, ಚೆಂಡೆಮೂಲೆ ಶಿವಪ್ಪ ಗೌಡ, ದಯಾನಂದ ಗೌಡ ಬಂದ್ಯಡ್ಕ, ಲಂಬೋದರ ಶೆಟ್ಟಿ ಮಣಿಯೂರು, ಬಂದಯಡ್ಕ ಚಿದಾನಂದ ಗೌಡ, ಮಾಧವ ರೈ ದೇಲಂಪಾಡಿ, ಕೇಶವ ಗೌಡ ಕುತ್ತಿಮುಂಡ, ಹರೀಶ್ ಗೌಡ ಮುದಿಯಾರು ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.

ನೆರೆದ ಸಹಸ್ರಾರು ಭಕ್ತರಿಗೆ ಅನ್ನ ಸಂತರ್ಪಣೆ ನಡೆಸಲಾಯಿತು. ಈಶ್ವರಿ ರಾಮಭಟ್, ಸವಿತಾ ಎಂ.ಭಟ್, ಗಂಗಾದೇವಿ ವಿ. ಭಟ್, ಸಹನಾ ದೇಲಂಪಾಡಿ, ವೀಣಾ ಭಟ್ ದೇಲಂಪಾಡಿ ಸಹಕರಿಸಿದರು. ಧಾರ್ಮಿಕ ಮುಂದಾಳು ಬೆಳ್ಳಿಪ್ಪಾಡಿ ಸದಾಶಿವ ರೈ ಕಾರ್ಯಕ್ರಮ ನಿರೂಪಿಸಿ, ಯೋಗರತ್ನ ಗೋಪಾಲಕೃಷ್ಣ ಭಟ್ ದೇಲಂಪಾಡಿ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here