ಕಡಬ: ವಿದ್ಯುತ್ ಬಿಲ್ಲು ಪಾವತಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ

0

ಕಡಬ: ವಿದ್ಯುತ್ ಬಿಲ್ಲು ಪಾವತಿಸಲು ಹಾಗೂ ಆಸ್ಪತ್ರೆಗೆ ಔಷಧಿಗೆಂದು ಮನೆಯಿಂದ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಕಡಬ ತಾಲೂಕಿನ ಐತ್ತೂರು ಗ್ರಾಮದ ಎಡೆಂಜ ನಿವಾಸಿ ನಾಗರಾಜ (65 ವ.)ನಾಪತ್ತೆಯಾದ ವ್ಯಕ್ತಿ. ನಾಗರಾಜ ಅವರು ಮಾ.20ರಂದು ಬೆಳಿಗ್ಗೆ 9.30 ಕ್ಕೆ ಮನೆಯಿಂದ ವಿದ್ಯುತ್ ಬಿಲ್ಲು ಪಾವತಿಸಲು ಹಾಗೂ ಆಸ್ಪತ್ರೆಗೆ ಜೌಷಧಿಗೆಂದು ಮನೆಯಿಂದ ಹೊರಟು ಹೋದವರು ಈವರೆಗೂ ಮನೆಗೆ ಮರಳಿ ಬಂದಿರುವುದಿಲ್ಲ. ಸಂಬಂಧಿಕರ ಮನೆಗಳಲ್ಲಿ ಹಾಗೂ ಪರಿಸರಗಳಲ್ಲಿ ಹುಡುಕಾಟ ನಡೆಸಿದರೂ ಪತ್ತೆಯಾಗಿರುವುದಿಲ್ಲ. ನಾಪತ್ತೆಯಾದವರನ್ನು ಪತ್ತೆ ಮಾಡಿಕೊಡುವಂತೆ ನಾಗರಾಜ ಅವರ ಪತ್ನಿ ಶಿವಮ್ಮ ಅವರು ಕಡಬ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here