ಪುತ್ತೂರು: ಕೋಡಿಂಬಾಡಿಯ ವನಿತಾ ಸಮಾಜದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಮಾ.26ರಂದು ಕೋಡಿಂಬಾಡಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ವನಿತಾ ಸಮಾಜದ ಅಧ್ಯಕ್ಷೆ ಧರ್ಮಾವತಿ ಸೇಡಿಯಾಪು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶಾಂತಿ ಟಿ. ಹೆಗಡೆ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಲಕ್ಷ್ಮಣ ಪೂಜಾರಿ ಕೋರ್ಯ ಮತ್ತು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಕಾರ್ಯದರ್ಶಿ ಪೂರ್ಣಿಮಾ ಎಸ್. ಶೆಟ್ಟಿ ಹೆಗ್ಡೆಹಿತ್ಲು ಭಾಗವಹಿಸಿದ್ದರು. ಹಿರಿಯ ಸದಸ್ಯರಾದ ಸೀತಾ ಎಸ್.ಪೂಜಾರಿ ಬದಿನಾರು ಮತ್ತು ಲಲಿತಾ ಎಸ್. ಗೌಡ ದರ್ಖಾಸ್ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ವನಿತಾ ಸಮಾಜದ ಗೌರವಾಧ್ಯಕ್ಷರಾದ ಜಿ.ಪಂ. ಮಾಜಿ ಸದಸ್ಯೆ ಶಯನಾ ಜಯಾನಂದ, ಗ್ರಾ.ಪಂ. ಸದಸ್ಯೆ ಮಲ್ಲಿಕಾ ಅಶೋಕ್ ಪೂಜಾರಿ ಕಾಂತಳಿಕೆ, ವನಿತಾ ಸಮಾಜದ ಮಾಜಿ ಅಧ್ಯಕ್ಷೆ ಮೋಹಿನಿ ಸುಂದರ ಗೌಡ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಗ್ರಾ.ಪಂ. ಮಾಜಿ ಉಪಾಧ್ಯಕ್ಷೆ ಪದ್ಮಲತಾ ಜೆ. ಶೆಟ್ಟಿ ನಡುಮನೆ ಅವರು ಅದೃಷ್ಟ ಮಹಿಳೆ ಪ್ರಶಸ್ತಿ ಗಳಿಸಿದರು. ಕಾರ್ಯದರ್ಶಿ ಭಾರತಿ ದೇವಾನಂದ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಲಕ್ಷ್ಮಿ ಆರ್. ನಾಯಕ್ ನಿಡ್ಯ ಮತ್ತು ಅನುರಾಧ ರಮೇಶ್ ನಾಯಕ್ ನೆಕ್ಕರಾಜೆ ಸನ್ಮಾನಿತರ ಪರಿಚಯ ಪತ್ರ ವಾಚಿಸಿದರು. ಪವಿತ್ರಾ ಸುರೇಶ್ ಶೆಟ್ಟಿ ಬರೆಮೇಲು ಬಹುಮಾನ ವಿಜೇತರ ಪಟ್ಟಿ ಓದಿದರು. ರಾಧಿಕಾ ಆರ್. ಸಾಮಂತ್ ನೆಕ್ಕರಾಜೆ ಕಾರ್ಯಕ್ರಮ ನಿರೂಪಿಸಿದರು. ಲೀಲಾವತಿ ಲಕ್ಷ್ಮಣ ಗೌಡ ಮೇಲಿನಹಿತ್ಲು, ಸುಮಲತಾ ಬಾಬು ಗೌಡ ಭಂಡಾರದಮನೆ, ಸವಿತಾ ವಿಕ್ರಂಶೆಟ್ಟಿ ಅಂತರ, ಸ್ಪೂರ್ತಿ ರಾಜಮಣಿ ರೈ ಮಠಂತಬೆಟ್ಟು ಮತ್ತು ಸೀತಾ ಸಾಮಂತ್ ಕೋಡಿಂಬಾಡಿ ಅತಿಥಿಗಳನ್ನು ಗೌರವಿಸಿದರು. ಹರಿಣಾಕ್ಷಿ ರಮೇಶ್ ಭಂಡಾರಿ ಕೈಪ ಪ್ರಾರ್ಥಿಸಿದರು.