ಪುತ್ತೂರು: ಕಳೆದ ಒಂದು ವರ್ಷದಿಂದ ಇಲ್ಲಿನ ವೆಂಕಟರಮಣ ದೇವಸ್ಥಾನದ ಕಟ್ಟಡದಲ್ಲಿ ವ್ಯವಹರಿಸುತ್ತಿರುವ, ಸಾಕುಪ್ರಾಣಿಗಳ ಆಹಾರ-ಔಷಧ ಮಾರಾಟ ಸೇವೆಯಲ್ಲಿ ಗ್ರಾಹಕರ ಪ್ರಶಂಸೆಗೆ ಪಾತ್ರರಾಗಿರುವ ಸನ್ಲೈಫ್ ವೆಟ್ ಫಾರ್ಮಾದ 2ನೇ ಮಳಿಗೆ ಪೆಟ್ ಕಾರ್ನರ್ ಮಾ.27ರಂದು ಕಲ್ಲಡ್ಕ ಮುಖ್ಯರಸ್ತೆಯ ಶ್ರೀರಾಮ ಮಂದಿರ ಕಮರ್ಷಿಯಲ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ| ಪ್ರಭಾಕರ ಭಟ್ ಕಲ್ಲಡ್ಕರವರು ನೂತನ ಮಳಿಗೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಗೊಳ್ತಮಜಲು ಗ್ರಾ.ಪಂ.ಅಧ್ಯಕ್ಷ ಅಭಿಷೇಕ್ ಶೆಟ್ಟಿ ನೆಟ್ಲ, ಕಲ್ಲಡ್ಕ ಪಶುಚಿಕಿತ್ಸಾಲಯದ ವೈದ್ಯಾಧಿಕಾರಿ ಡಾ| ಕಾರ್ತಿಕ್, ಕೆಎಂಎಫ್ ಕ್ಯಾಂಪ್ ಆಫೀಸರ್ ಸುನೀಲ್ ಚೌಹಾನ್ ಮೊದಲಾದವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಮಳಿಗೆಯ ಪಾಲುದಾರರಾದ ಲಿಖಿತ್ ರೈ ಹಾಗೂ ಶಿವಕುಮಾರ್ ಒ.ಎಸ್. ಅವರು ಅತಿಥಿಗಳನ್ನು ಸ್ವಾಗತಿಸಿ, ಗ್ರಾಹಕರ ಸಹಕಾರ ಕೋರಿದರು. ಪ್ರಸ್ತುತ ದಿನಗಳಲ್ಲಿ ಸಾಕುಪ್ರಾಣಿಗಳ ಆರೈಕೆಯು ಹೊಸ ಹವ್ಯಾಸವನ್ನು ಸೃಷ್ಟಿಸಿದ್ದು, ಅದಕ್ಕೆ ಪೂರಕವಾಗಿ ಸನ್ಲೈಫ್ ವೆಟ್ ಫಾರ್ಮಾ ಪುತ್ತೂರು ಮುಖ್ಯರಸ್ತೆಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಮುಂದೆ ಕಲ್ಲಡ್ಕದ ಪೆಟ್ ಕಾರ್ನರ್ ಮಳಿಗೆಯಲ್ಲೂ ಅದೇ ಸೇವೆಯನ್ನು ಮುಂದುವರಿಸಲಿದೆ.
ಮಳಿಗೆಯಲ್ಲಿ ಸಾಕು ಪ್ರಾಣಿಗಳ ಹಲವು ಬಗೆಯ ಆಹಾರಗಳು, ಔಷಧಿಗಳು, ಲಸಿಕೆಗಳು, ಜತೆಗೆ ಪ್ರಾಣಿಗಳಿಗೆ ಬೇಕಾದ ಎಲ್ಲಾ ಬಗೆಯ ಆಟಿಕೆ, ಇತರ ಸಲಕರಣೆಗಳು ಇಲ್ಲಿ ಲಭ್ಯವಾಗಲಿದೆ. ವಿವಿಧ ಜಾತಿಯ ನಾಯಿ, ಬೆಕ್ಕು ಮೊದಲಾದ ಸಾಕು ಪ್ರಾಣಿಗಳು ಕೂಡ ಲಭ್ಯವಾಗಲಿದ್ದು, ವಾರದ ಎಲ್ಲಾ ದಿನವೂ ಮಳಿಗೆ ತೆರೆದಿರುತ್ತದೆ ಎಂದು ಪಾಲುದಾರರು ತಿಳಿಸಿದ್ದಾರೆ.