ಪುತ್ತೂರು: ಮೆಡಿಕಲ್ ಕಾಲೇಜು ಆಗಬೇಕೆಂದು ಕನಸ್ಸನ್ನು ಹೊತ್ತದ್ದೇ ಬಿಜೆಪಿ. ಮೆಡಿಕಲ್ ಕಾಲೇಜು ಮೂಲಕ ಹತ್ತಾರು ಜನರಿಗೆ ಉದ್ಯೋಗ ದೊರಕಬೇಕೆಂದು ಆಲೋಚನೆ ಮಾಡಿದ್ದೂ ಬಿಜೆಪಿ. ಇವತ್ತು ಬೇರೆ ಬೇರೆ ಉದ್ಯೋಗ ನಿಮಿತ್ತ ಕೆಲಸ ಕಾರ್ಯ ಆಗಿದೆ. ಹಾಗಾಗಿ ಬಿಜೆಪಿಯದ್ದು ಏನಿದ್ದರೂ ಅಭಿವೃದ್ದಿಯ ಆಲೋಚನೆ. ಇರಿಸುಮುರಿಸು ಪ್ರಶ್ನೇಯೇ ಇಲ್ಲ. ಆದರೆ ಮೆಡಿಕಲ್ ಕಾಲೇಜು ಅಭಿಯಾನದಲ್ಲಿ ಸಣ್ಣ ಕಾಂಗ್ರೆಸ್‌ನ ಟೂಲ್ ಕಿಟ್ ಇದೆ ಎಂದು ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಸಿ.ನಾರಾಯಣ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಚುನಾವಣೆ ಘೋಷಣೆ ಆಗುತ್ತದೆ ಎಂದು ಹೇಳುವಾಗಲೇ ಕಾಂಗ್ರೆಸ್‌ನವರು ಬೇರೆ ರೀತಿಯಲ್ಲಿ ಟೂಲ್ ಕಿಟ್ ಪ್ರಯೋಗ ಮಾಡುತ್ತಾರೆ. ಆ ಟೂಲ್ ಕಿಟ್ ಪ್ರಯೋಗದಲ್ಲಿ ಈ ಟೂಲ್ ಕಿಟ್ ಜೋಡಣೆಯಾಗಿದೆ. ಪುತ್ತೂರಿನ ಜನರನ್ನು ಟೂಲ್ ಕಿಟ್‌ಗೆ ಅಳವಡಿಸಲು ಕಾಂಗ್ರೆಸ್‌ನಿಂದ ಸಾಧ್ಯವಿಲ್ಲ. ಪುತ್ತೂರಿನ ಪ್ರಜ್ಞಾವಂತ ಜನರು ಅಭಿವೃದ್ಧಿಯ ಪರ ನಿಂತರವರು ಮತ್ತು ಸಂಘಟನಾತ್ಮಕವಾಗಿ ಸಮಾಜ ಸೇವೆ ಮಾಡುವವರ ಪರವಾಗಿ ನಿಲ್ಲುತ್ತಾರೆ ಎಂದರು. ಹೋರಾಟ ಸಮಿತಿಯವರು ಪುತ್ತೂರು ಶಾಸಕರಿಗೆ ಆರಂಭದಲ್ಲಿ ಯಾವುದೇ ಮಾಹಿತಿ ನೀಡಿಲ್ಲ. ಕೊನೆಯ ಹಂತದಲ್ಲಿ ಬಂದು ಮನವಿ ಮಾಡಿದ್ದಾರೆ. ಮಾರ್ಚ್ 30ರಂದು ನಡೆಸಲು ಉದ್ದೇಶಿಸಿರುವ ಜಾಥಾ ಹಾಗೂ ಸಮಾವೇಶಕ್ಕೆ ಆಮಂತ್ರಿಸಿದ್ದಾರೆ. ಬಿಜೆಪಿಗೂ ಆಮಂತ್ರಣ ನೀಡಿದ್ದಾರೆ ಎಂದು ಹೇಳಿದ ಅವರು, ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಆಗಬೇಕೆಂಬ ಬೇಡಿಕೆಗೆ ನಮ್ಮದೂ ಬೆಂಬಲವಿದೆ. ಬಿಜೆಪಿಯ ಸ್ಥಳೀಯ ಪ್ರಣಾಳಿಕೆಯಲ್ಲಿ ಇದನ್ನು ಸೇರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪುತ್ತೂರು ಮಂಡಲ ಅಧ್ಯಕ್ಷರಾದ ಸಾಜ ರಾಧಾಕೃಷ್ಣ ಆಳ್ವ, ನಗರಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಚಂದ್ರಶೇಖರ ರಾವ್ ಬಪ್ಪಳಿಗೆ, ರಾಜೇಶ್ ಬನ್ನೂರು ಉಪಸ್ಥಿತರಿದ್ದರು.