ಕಾಣಿಯೂರು: ಬೆಳಂದೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ರಾಷ್ಟ್ರೀಯ ಮೌಲ್ಯ ಮಾಪನ ಮತ್ತು ಅಂಗೀಕಾರ ಸಮಿತಿ (ನ್ಯಾಕ್) ಯಿಂದ ಮೌಲ್ಯ ಮಾಪನಕ್ಕೆ ಒಳಪಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಎ 4 ಮತ್ತು 5 ರಂದು ಬೆಳಂದೂರು ಕಾಲೇಜಿಗೆ ನ್ಯಾಕ್ ತಜ್ಞರ ಸಮಿತಿಯು ಭೇಟಿ ನೀಡುತ್ತದೆ.
ಪ್ರಸ್ತುತ ಕಾಲೇಜಿನಲ್ಲಿ ಬಿಎ, ಬಿಕಾಂ, ಬಿಬಿಎ ಕೋರ್ಸ್ಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ನಡೆಸುತ್ತಿದ್ದಾರೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪದವಿ ವ್ಯಾಸಂಗಕ್ಕೆ ಉತ್ತಮ ಅವಕಾಶ ನೀಡುತ್ತಿರುವ ಈ ಸರಕಾರಿ ಪದವಿ ಕಾಲೇಜು ನ್ಯಾಕ್ ಸಂಸ್ಥೆಯಿಂದ ಮೌಲ್ಯ ಮಾಪನಗೊಳ್ಳುತ್ತಿರುವುದು ಗಮನಾರ್ಹ ವಿಷಯವಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲರು ತಿಳಿಸಿದ್ದಾರೆ.