ಮಾಸ್ಟರ್ ಅಥ್ಲೆಟಿಕ್ಸ್: ಕೊಣಾಜೆಯ ಆಶಾಗೆ ರನ್ನಿಂಗ್ ರೇಸ್‌ನಲ್ಲಿ ಚಿನ್ನದ ಪದಕ

0

ಕಡಬ: ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 42ನೇ ರಾಷ್ಟ್ರೀಯ ಮಾಸ್ಟರ್‍ಸ್ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಿದ ಕಡಬ ತಾಲೂಕಿನ ಕೊಣಾಜೆ ನಿವಾಸಿ ಆಶಾ ದಯಾನಂದ ಪೂಜಾರಿಯವರು ರನ್ನಿಂಗ್ ರೇಸ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ.


ಇವರು 800 ಮೀ.ರನ್ನಿಂಗ್ ರೇಸ್‌ನಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದುಕೊಂಡಿದ್ದಾರೆ. 5000 ಮೀ.ವಾಕಿಂಗ್ ರೇಸ್, ೫೦೦೦ ಮೀ.ರನ್ನಿಂಗ್ ರೇಸ್ ಹಾಗೂ 4/100 ಮೀ.ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು ಸಿಂಗಾಪುರದಲ್ಲಿ ನಡೆಯಲಿರುವ ಅಂತರ್ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಕುಂತೂರು ಗ್ರಾಮದ ಕೋಡ್ಲ ಮೋನಪ್ಪ ಪೂಜಾರಿಯವರ ಪುತ್ರಿ. ಕಡಬ ತಾಲೂಕಿನ ಕೊಣಾಜೆ ನಿವಾಸಿ ದಯಾನಂದ ಪೂಜಾರಿಯವರ ಪತ್ನಿ.

LEAVE A REPLY

Please enter your comment!
Please enter your name here