ಪುತ್ತೂರು: ಸುಳ್ಯಪದವು ಬ್ರಹ್ಮಬೈದರ್ಕಳ ಗರಡಿಯಲ್ಲಿ ದೈವಗಳ ಕೋಲ ಹಾಗೂ ಬೈದರ್ಕಳ ನೇಮೋತ್ಸವ ಎ.5 ಮತ್ತು 6ರಂದು ನಡೆಯಲಿದೆ.
ಎ.5ರಂದು ಬೆಳಿಗ್ಗೆ ಗಣಪತಿ ಹವನ, ಅಪರಾಹ್ನ ಬೈದರ್ಕಳ ಕಲಶ ಹೋಮ, ಸಂಜೆ ಮೂಲ ಮಹಿಷಂತಾಯ ದೈವಗಳಿಗೆ ಕೋಲ, ಚಕ್ರವರ್ತಿ ಕೊಡಮಣಿತ್ತಾಯ ದೈವಗಳಿಗೆ ಕೋಲ, ಇಷ್ಟದೇವತೆ ದೈವಗಳಿಗೆ ಕೋಲ, ಅನ್ನಸಂತರ್ಪಣೆ, ಕೋಟಿಚೆನ್ನಯರು ಗರಡಿ ಇಳಿದು ಬ್ರಹ್ಮರ ಗುಂಡದಲ್ಲಿ ನಾಗಬ್ರಹ್ಮರಿಗೆ ಪ್ರಥಮ ದರ್ಶನ ಸೇವೆ, ಕೋಟಿ ಚೆನ್ನಯರ ರಂಗಸ್ಥಳ ಪ್ರವೇಶ, ರಾತ್ರಿ ದರ್ಶನ ಪಾತ್ರಿಗಳು ಗರಡಿಗೆ ಆಗಮನ, ದೇವಿ ಮಾಯಂದಾಳ್ ಗರಡಿ ಇಳಿದು ರಂಗಸ್ಥಳ ಪ್ರವೇಶ, ಹೂಪ್ರಸಾದ ವಿತರಣೆ, ಎ.6ರಂದು ಬೆಳಿಗ್ಗೆ 4ರಿಂದ ದರ್ಶನ ಪಾತ್ರಿಗಳ ಸೇಟ್, ಕೋಟಿ ಚೆನ್ನಯರ ಸೇಟ್ ನಡೆಯಲಿದೆ.