ಪುತ್ತೂರು ಸಂಜೀವ ಮಠಂದೂರಿಗೆ ಅವಕಾಶಕ್ಕೆ ಮನವಿ-ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಭೇಟಿ ಮಾಡಿದ ನಾಯಕರು

0

ಪುತ್ತೂರು: ಪುತ್ತೂರಿನಲ್ಲಿ ಗೌಡ ಸಮುದಾಯದಾಯದ ನಾಯಕ ಹಾಲಿ ಶಾಸಕ ಸಂಜೀವ ಮಠಂದೂರು ಅವರಿಗೆ ಈ ಭಾರಿಯೂ ಬಿಜೆಪಿಯಿಂದ ಅವಕಾಶ ದೊರೆಯುವಂತೆ ಮಾಡಬೇಕು ಎಂದಯ ಒಕ್ಕಲಿಗ ಸಮುದಾಯದ ಪರವಾಗಿ ಒಕ್ಕಲಿಗ ಗೌಡ ಸಂಘದ ನಿಯೋಗವೊಂದು ಶ್ರೀ ಆದಿ ಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ| ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಸುಧೀರ್ಘ ಚರ್ಚೆ ಮಾಡಿರುವ ವಿಚಾರ ಭಾರಿ ಕುತೂಹಲಕ್ಕೆ ಕಾರಣವಾಗಿದೆ.



ಒಕ್ಕಲಿಗ ಸಮುದಾಯದ ಪ್ರಾಬಲ್ಯ ಇರುವ ಪುತ್ತೂರಿನಲ್ಲಿ ಒಕ್ಕಲಿಗ ಗೌಡ ಸಮುದಾಯದ ನಾಯಕರಾಗಿರುವ ಸಂಜೀವ ಮಠಂದೂರು ಅವರಿಗೆ ಈ ಭಾರಿಯೂ ಅಭ್ಯರ್ಥಿ ಸ್ಥಾನ ಸಿಗಬೇಕು. ಎಲ್ಲಾ ಸಮುದಾಯದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಅವರು ಎಲ್ಲರಿಗೂ ಆತ್ಮೀಯರು. ಜೊತೆಗೆ ಅವರ ನಾಯಕತ್ವದಿಂದ ಒಕ್ಕಲಿಗ ಗೌಡ ಸಮುದಾಯದಲ್ಲಿ ಅನೇಕ ಅಭಿವೃದ್ಧಿಪರ ಕಾರ್ಯಕ್ರಮ ನಡೆದಿದೆ. ಆದ್ದರಿಂದ ಈ ಬಾರಿಯ ವಿಧಾನಸಭಾ ಚುನಾವಣೇಯಲ್ಲಿಯೂ ಅವರಿಗೇ ಬಿಜೆಪಿಯಿಂದ ಅವಕಾಶ ದೊರೆಯುವಂತೆ ಮಾಡಬೇಕು ಎಂದು ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಒಕ್ಕಲಿಗ ಸ್ವಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ.ನಾರಾಯಣ, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಯುವ ಗೌಡ ಸೇವಾ ಸಂಘದ ಅಧ್ಯಕ್ಷ ನಾಗೇಶ್ ಕೆಡೆಂಜಿ, ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಪ್ರಧಾನ ಕಾರ್ಯದಶಿ ಡಾ. ಅಕ್ಷಯ್, ಡಾ.ಜ್ಞಾನೇಶ್, ಡಾ. ಲೀಲಾಧರ್, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಆಂತರಿಕಲೆಕ್ಕಪರಿಶೋಧಕ ಶ್ರೀಧರ್ ಗೌಡ ಕಣಜಾಲು, ಎ.ವಿ.ಜಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ಆಡಳಿತ ಮಂಡಳಿ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಮನೋಹರ್ ಕಬಕ, ಗಗನ್ ಬೈಲಾಡಿ, ಕೌಶಿಕ್ ಸಹಿತ ಪುತ್ತೂರು ಮತ್ತು ಸುಳ್ಯದ ಹಲವಾರು ಮಂದಿ ಮುಖಂಡರು ಈ ಸಂದರ್ಭದಲ್ಲಿ ಆದಿ ಚುಂಚನಗಿರಿ
ಪೀಠಾಧಿಪತಿ ಡಾ| ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದಾರೆ.

LEAVE A REPLY

Please enter your comment!
Please enter your name here