ಪುತ್ತೂರು: ಅತಿಥಿ ಶಿಕ್ಷಕಿಯೋರ್ವರು ಕಬ್ಬಿಣದ ಸ್ಕೇಲ್‌ನಿಂದ ಕೈ ಬೆರಳಿಗೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ವಿದ್ಯಾರ್ಥಿಯೋರ್ವ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನರಿಮೊಗರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ’ನಾನು ಶಾಲೆಯಲ್ಲಿ ಮಧ್ಯಾಹ್ನ ಊಟದ ಬಳಿಕ ವೈದ್ಯರ ಸಲಹೆಯಂತೆ ನೀರು ಕುಡಿಯಲು ಹೋಗಿದ್ದೆ. ಆ ಸಂದರ್ಭ ಇತರ ವಿದ್ಯಾರ್ಥಿಗಳು ಸಹ ನೀರು ಕುಡಿಯಲು ಬಂದಿದ್ದರು. ಪುನಃ ತರಗತಿಗೆ ಹೋಗಿ ಕುಳಿತಾಗ ವೀಣಾ ಎಂಬ ಅತಿಥಿ ಶಿಕ್ಷಕಿಯೋರ್ವರು ನನಗೆ ಮತ್ತು ಇನ್ನೊಬ್ಬ ವಿದ್ಯಾರ್ಥಿಗೆ ಕಬ್ಬಿಣದ ಸ್ಕೇಲ್‌ನಿಂದ ಹೊಡೆದಿದ್ದಾರೆ. ಬಲ ಕೈಯ ಬೆರಳ ತುದಿಗೆ ಹೊಡೆದಿರುವುದರಿಂದ ಗಾಯವಾಗಿದೆ ಎಂದು ಆರೋಪಿಸಿದ್ದಾರೆ.
ಘಟನೆ ಕುರಿತು ಶಾಲಾ ಎಸ್.ಡಿ.ಎಂ.ಸಿ ಸದಸ್ಯ ಪ್ರವೀಣ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಅತಿಥಿ ಶಿಕ್ಷಕಿ ವೀಣಾ ಅವರಿಗೆ ರೀಲೀವ್ ಆಗಿದೆ. ಆದರೂ ಅವರು ಶಾಲೆಗೆ ಬಂದು ವಿದ್ಯಾರ್ಥಿಗೆ ಹಲ್ಲೆ ನಡೆಸಿರುವುದು ಸರಿಯಲ್ಲ. ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಯವರಿಗೆ ದೂರು ನೀಡಲಾಗುವುದು ಎಂದು ತಿಳಿಸಿದ್ದಾರೆ.