ಯಕ್ಷಗಾನ ಶೈಲಿಯಲ್ಲಿ ಮಾದರಿ ಬೂತ್ ಆಗಿ ಸಜ್ಜುಗೊಳ್ಳುತ್ತಿರುವ ವೀರಮಂಗಲ ಶಾಲೆ

0

ಪುತ್ತೂರು: ಚುನಾವಣಾಧಿಕಾರಿಗಳ ನಿರ್ದೇಶನ ಹಾಗೂ ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಯವರ ಮಾರ್ಗದರ್ಶನದಂತೆ ಆಯ್ದ ಶಾಲೆಗಳನ್ನು ಮಾದರಿ ಬೂತ್ ಗಳಾಗಿ ಮಾಡಿ ಕಲಾವಿದರು ಸಿದ್ಧಗೊಳಿಸುತ್ತಿದ್ದು, ವೀರಮಂಗಲ ಶಾಲೆಯ ಬೂತ್ ನ್ನು ಚಿತ್ರ ಕಲಾವಿದರಾದ ಕೊಂಬೆಟ್ಟು ಶಾಲೆಯ ಜಗನ್ನಾಥ, ಇರ್ದೇ ಉಪ್ಪಳಿಗೆ ಶಾಲೆಯ ಪ್ರಕಾಶ್ ವಿಟ್ಲ, ಸಾಂದೀಪನಿ ವಿದ್ಯಾಸಂಸ್ಥೆಯ ಸುಚೇತ್ ಇವರು ತಮ್ಮ ಕುಂಚದಲ್ಲಿ ಗಾಂಜೀಪ ಕಲೆ, ವರ್ಲಿ ಕಲೆ ಇತ್ಯಾದಿ ಸಾಂಪ್ರಾದಾಯಿಕ ಕಲೆಗಳ ಮೂಲಕ ದಕ್ಷಿಣಕನ್ನಡ ಜಿಲ್ಲೆಯ ಜಾನಪದೀಯ ಕಲೆಯನ್ನು ವಿವಿಧ ಚಿತ್ತಾರದ ಮೂಲಕ ಅನಾವರಣಗೊಳಿಸಿದರು. ವೀರಮಂಗಲ ಶಾಲಾ ಮುಖ್ಯಗುರು ತಾರಾನಾಥ ಸವಣೂರು ಸಹಕರಿಸಿದರು.

LEAVE A REPLY

Please enter your comment!
Please enter your name here