ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವನೇ ನಿಜವಾದ ಶಿಕ್ಷಕ ಸುಬ್ಬಪ್ಪ ಕೈಕಂಬ
ಮಕ್ಕಳ ಶೈಕ್ಷಣಿಕ ಬೆಳವಣಿಗೆಯಲ್ಲಿ ಶಿಕ್ಷಕನ ಪಾತ್ರ ಬಹಳಷ್ಟು ಇದೆ ಗುಡ್ಡಪ್ಪ ಬಲ್ಯ
ಪುತ್ತೂರು: ಮಕ್ಕಳ ಕ್ರಿಯಾಶೀಲತೆಯನ್ನು ಗುರುತಿಸಿ ಪ್ರೋತ್ಸಾಹಿಸುವನೇ ನಿಜವಾದ ಶಿಕ್ಷಕ ಎಂದು ಸರಕಾರಿ ಪದವಿ ಮಹಾವಿದ್ಯಾಲಯ ಉಪ್ಪಿನಂಗಡಿ ಇದರ ಪ್ರಾಂಶುಪಾಲ, ಹಿರಿಯ ರಂಗಲೇಖಕ ಸುಬ್ಬಪ್ಪ ಕೈ ಕಂಬ ಹೇಳಿದರು. ಅವರು ಕರ್ನಾಟಕ ಸರಕಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪುಣ್ಚಪ್ಪಾಡಿಯಲ್ಲಿ ನಡೆದ ಮೂರು ದಿನಗಳ “ಬಣ್ಣದ ಬಣ್ಣ” ಎಂಬ ಮಕ್ಕಳ ಕಲಿಕಾ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದರು . ಶಿಕ್ಷಕ ಕ್ರಿಯಾಶೀಲನಾಗಿದ್ದರೆ ಮಕ್ಕಳು ಕ್ರಿಯಾಶೀಲರಾಗುವುದರಲ್ಲಿ ಸಂಶಯವಿಲ್ಲ ಇಂಥ ಕೆಲಸದಲ್ಲಿ ಪುಣ್ಚಪ್ಪಾಡಿ ಶಾಲೆ ಸಫಲಗೊಂಡಿದೆ ಎಂದರು.
ಸಮಾರೋಪ ಭಾಷಣವನ್ನು ಮಾಡಿದ ಹಿರಿಯ ಯಕ್ಷಗಾನಾರ್ಥದಾರಿಗಳೂ ನಿವೃತ್ತ ಶಿಕ್ಷಕ ಗುಡ್ಡಪ್ಪ ಬಲ್ಯ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕನ ಪಾತ್ರ ಬಹಳಷ್ಟು ಇದೆ. ಒಂದು ಅರ್ಥದಲ್ಲಿ ಶಿಕ್ಷಕನ ಪ್ರತಿಫಲನವೇ ಮಕ್ಕಳ ಬೆಳವಣಿಗೆ. ಇಂತಹ ರಂಗ ಶಿಬಿರಗಳು ಮಕ್ಕಳ ಪ್ರತಿಭೆಗೆ ಅರ್ಥಪೂರ್ಣವಾದ ಅವಕಾಶವನ್ನು ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಕೃಷ್ಣಕುಮಾರ್ ರೈ ಮಗುಸ್ನೇಹಿ ಚಟುವಟಿಕೆಗಳನ್ನು ನಡೆಸುತ್ತಿರುವ ಪುಣ್ಚಪ್ಪಾಡಿ ಶಾಲೆಯ ಶ್ರಮ ಶ್ಲಾಘನೀಯ ಎಂದರು. ಸಂಪನ್ಮೂಲ ವ್ಯಕ್ತಿ ಪದ್ಮನಾಭ ಬೆಳ್ಳಾರೆ, ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮೂರು ದಿನಗಳ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಯುವರಂಗ ನಿರ್ದೇಶಕ ಉದಯ ಸಾರಂಗ್ ಪೆರ್ಲ, ಕರಕುಶಲ ಶಿಕ್ಷಕಿ ಬಕುಳ ನೆಹರು ನಗರ, ಹಕ್ಕಿ ತಜ್ಞ ಅರವಿಂದ ಕುಡ್ಲ, ಚಿತ್ರ ಕಲಾವಿದ ಪದ್ಮನಾಭ ಬೆಳ್ಳಾರೆ ಕಲಾವಿದ ಪ್ರಜಿತ್ ರೈ ಸೂಡಿಮುಳ್ಳು, ಸಂಗೀತ ಶಿಕ್ಷಕಿ ಶುಭ ರಾವ್, ಉಪ್ಪಿನಂಗಡಿ ಸರಕಾರಿ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ನಂದೀಶ್ ಮಂಡ್ಯ ಕುಮಾರಿ ದೀಪ್ತಿ ಕುಮಾರಿ ತೇಜಸ್ವಿ ಇವರುಗಳು ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರಶ್ಮಿತಾ ನರಿಮೊಗರು ಸ್ವಾಗತಿಸಿ,ಪದವೀಧರ ಶಿಕ್ಷಕಿ ಫ್ಲಾವಿಯ ವಂದಿಸಿದರು. ಅತಿಥಿ ಶಿಕ್ಷಕಿ ಚಂದ್ರಿಕಾ, ಗೌರವ ಶಿಕ್ಷಕಿ ತೃಪ್ತಿ ಕಾರ್ಯಕ್ರಮ ನಿರ್ವಹಿಸಿದರು.
ಶಿಬಿರದ ವಿಶೇಷತೆಗಳು:
ಅಗ್ನಿಶಾಮಕ ಠಾಣೆ ಪುತ್ತೂರು ಇವರು ನಡೆಸಿಕೊಟ್ಟ ಅಗ್ನಿಶಾಮಕದ ಪ್ರಾತ್ಯಕ್ಷಿಕೆ ಊರವರ ಹಾಗೂ ಮಕ್ಕಳ ಗಮನಸೆಳೆಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರ ಪಾಲ್ತಾಡಿ ಇವರು ನಡೆಸಿಕೊಟ್ಟ ಆರೋಗ್ಯ ಮಾಹಿತಿ ಊರವರಿಗೆ ಮತ್ತು ಮಕ್ಕಳಿಗೆ ತುಂಬಾ ಫಲಪ್ರದವಾಯಿತು.ವಿದ್ಯಾರ್ಥಿಗಳಿಗೆ ಚಿತ್ರಕಲೆ, ಕ್ರಾಫ್ಟ್, ಹಕ್ಕಿ ಕಥೆ, ರಂಗ ತರಬೇತಿಗಳಲ್ಲಿ ಆಸಕ್ತಿಯಿಂದ ಪಾಲ್ಗೊಂಡರು