ಪುತ್ತೂರು: ಜಾತ್ರೋತ್ಸವ ಸಂದರ್ಭದಲ್ಲಿ ಬಂದಂತಹ ಭಕ್ತಾದಿಗಳಿಗೆ ಸ್ವಚ್ಚ ಹಾಗೂ ಸ್ವಾದಿಷ್ಟ ಆಹಾರವನ್ನು ಕೊಡುವ ಉದ್ದೇಶದಿಂದ ಜೇಸಿಐ ಪುತ್ತೂರು ಸಂಸ್ಥೆಯು ಸಾದರಪಡಿಸುವ ನಳಪಾಕವು ಜಾತ್ರಾ ಗದ್ದೆಯಲ್ಲಿ ಉದ್ಘಾಟನೆಗೊಂಡಿತು.ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ ಉದ್ಘಾಟಿಸಿದರು.

ಕಳೆದ 16ವರ್ಷದಿಂದ ಸತತವಾಗಿ ಒಂದು ಅಂತಾರಾಷ್ಟ್ರೀಯ ವ್ಯಕ್ತಿತ್ವ ವಿಕಸನ ಸಂಸ್ಥೆ ಈ ಕಾರ್ಯವನ್ನು ನಡೆಸುತ್ತಾ ಬಂದಿದ್ದು ಈ ಕಾರ್ಯಕ್ರಮದಿಂದ ಬಂದಂತಹ ಲಾಭದಿಂದ ಜೇಸಿಐ ಪುತ್ತೂರು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಿ ಆಯೋಜಿಸುತ್ತದೆ.
ನಳಪಾಕ ಎಂಬುದು ಒಂದು ಸುಂದರ ಕಲ್ಪನೆ:
ಬಿಸಿಬಿಸಿ ರುಮಾಲು ರೋಟಿ ಅದರೊಂದಿಗೆ ಸವಿಯಲು ಒಂದೊಂದು ದಿನ ಒಂದೊಂದು ಗ್ರೇವಿ ಒಂದು ದಿನ ಪನೀರ್ ಮಸಾಲ ಆದ್ರೆ ಇನ್ನೊಮ್ಮೆ ಚೆನ್ನ ಮಸಾಲ, ಮಿಕ್ಸ್ ವೆಜ್ ಕೂರ್ಮ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ, ರುಮಾಲು ರೋಟಿ ಒಂದು ಕಡೆ ಆದರೆ ಇನ್ನೊಂದು ಕಡೆ, ಆರೋಗ್ಯ ವರ್ಧಕ ನೇರಳೆ ಹಣ್ಣಿನ ಜ್ಯೂಸ್, ದ್ರಾಕ್ಷೆ ಜ್ಯೂಸ್, ಮಾವಿನ ಹಣ್ಣಿನ ಜ್ಯೂಸ್, ಇರುತ್ತದೆ.
ಸ್ಟಾಲ್ ಮೆರುಗನ್ನು ಹೆಚ್ಚಿಸಲು ಮರಿಕೆಯ ನೈಸರ್ಗಿಕ ಐಸ್ ಕ್ರೀಮ್ ಕೂಡ ಇದೆ. ಇದರಲ್ಲಿ ಮಾವು, ಹಲಸು, ಎಳೆನೀರು, ಚಿಕ್ಕು ಹೀಗೆ ಹತ್ತು ಹಲವು ಬಗೆಯ ವಿಶೇಷ ಹಣ್ಣಿನಿಂದ ತಯಾರಿಸಿದ ಐಸ್ ಕ್ರೀಮ್ ಲಭ್ಯ. ಪ್ರತಿವರ್ಷದಂತೆ ಈ ವರ್ಷವೂ ಎ 18 ರ ವರೆಗೆ ನಳಪಾಕ ನಡೆಯುತ್ತದೆ. ಕಾರ್ಯಕ್ರಮದಲ್ಲಿ ಜೇಸಿಐ ಅಧ್ಯಕ್ಷ ಸುಹಾಸ್ ಮರಿಕೆ, ಹಾಗೂ ಸದಸ್ಯರು ಉಪಸ್ಥಿತರಿದ್ದರು.