ಸವಣೂರು ಪರಣೆಯಲ್ಲಿ ಬಿಸು ಪರ್ಬ ಆಚರಣೆ

0

ತುಳು ಸಂಸ್ಕೃತಿ ದೇಶಕ್ಕೆ ಮಾದರಿ- ಗಿರಿಶಂಕರ್ ಸುಲಾಯ


ಪುತ್ತೂರು: ಶ್ರೀ ದೇವಿ ಸೇವಾ ಸಮಿತಿ ತುಳುಸಿಪುರಂ ಪರಣೆ, ಸವಣೂರು ಬೊಳ್ಳಿಬೊಲ್ಪು ತುಳುಕೂಟ. ಸವಣೂರು ಯುವಕ ಮಂಡಲ, ಶ್ರೀ ಹರಿ ಭಜನಾ ಮಂಡಳಿ ಶಕ್ತಿನಗರ ಪಾದೆಬಂಬಿಲ, ಶ್ರೀ ಹರಿ ಭಜನಾ ಮಂಡಳಿ ದೇವಸ್ಯ ಹಾಗೂ ಶ್ರೀ ಮಹಾವಿಷ್ಣು ಭಜನಾ ಮಂಡಳಿ ಮುಗೇರು ಇವರಗಳ ಆಶ್ರಯದಲ್ಲಿ ಎ. 15 ರಂದು ಸವಣೂರು ಪರಣೆ ತುಳುಸಿಪುರಂನಲ್ಲಿ ಬಿಸು ಪರ್ಬ ಆಚರಣೆ ನಡೆಯಿತು.


ಭಜನೆ-
ವಿವಿಧ ಭಜನಾ ತಂಡಗಳಿಂದ ಸುಮಾರು ಮೂರು ಗಂಟೆಗಳ ಕಾಲ ಭಜನೆ ನಡೆಯಿತು. ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಗೌರವಾಧ್ಯಕ್ಷ ಗಿರಿಶಂಕರ್ ಸುಲಾಯರವರು ಮಾತನಾಡಿ ತುಳುವರ ಬಿಸು ಆಚರಣೆಯ ಮೂಲಕ ನಾವಿಂದು ಹೊಸ ವರ್ಷದ ಸಂಭ್ರಮದಲ್ಲಿ ಇದ್ದೇವೆ, ತುಳು ಸಂಸ್ಕೃತಿ ದೇಶಕ್ಕೆ ಮಾದರಿಯಾಗಿದೆ.ಇದನ್ನು ಉಳಿಸಿ, ಬೆಳೆಸುವ ಕಾರ್‍ಯ ನಿರಂತರವಾಗಿ ನಡೆಯಬೇಕು,. ಕಳೆದ ಹಲವಾರು ವರ್ಷಗಳಿಂದ ಪರಣೆ ಪದ್ಮಯ್ಯ ಗೌಡರವರ ನೇತ್ರತ್ವದಲ್ಲಿ ಬಿಸು ಆಚರಣೆಯನ್ನು ವಿವಿಧ ಕಾರ್‍ಯಕ್ರಮಗಳ ಮೂಲಕ ಉತ್ತಮವಾಗಿ ನಡೆಸಿಕೊಂಡು ಬರಲಾಗುತ್ತಿದೆ. ಮುಂದೆಯೂ ಇಲ್ಲಿ ಬಿಸು ಆಚರಣೆಯು ನಿರಂತರವಾಗಿ ನಡೆಯಲಿ ಎಂದು ಶುಭಹಾರೈಸಿದರು.,

ಸವಣೂರು ಬೊಳ್ಳಿಬೊಲ್ಪು ತುಳುಕೂಟದ ಅಧ್ಯಕ್ಷ ಕುಂಜಾಡಿ ಪ್ರಕಾಶ್‌ಚಂದ್ರ ರೈ ಮುಗೇರುಗುತ್ತು ಕಾರ್‍ಯಕ್ರಮ ಉದ್ಘಾಟಿಸಿದರು. ಶ್ರೀ ದೇವಿ ಸೇವಾ ಸಮಿತಿಯ ಸಂಚಾಲಕ ಪದ್ಮಯ್ಯ ಗೌಡ ಪರಣೆ, ಸವಣೂರು ಸ.ಪ.ಪೂರ್ವ ಕಾಲೇಜಿನ ಕಟ್ಟಡ ಸಮಿತಿಯ ಅಧ್ಯಕ್ಷ ಪಿ.ಡಿ.ಕೃಷ್ಣಕುಮಾರ್ ರೈ ದೇವಸ್ಯ, ಶ್ರೀ ಹರಿ ಭಜನಾ ಮಂಡಳಿ ಶಕ್ತಿನಗರ ಪಾದೆಬಂಬಿಲದ ಅಧ್ಯಕ್ಷ ಪುಟ್ಟಣ್ಣ ಬಂಬಿಲ, ಸವಣೂರು ಯುವಕ ಮಂಡಲದ ಅಧ್ಯಕ್ಷ ಜಿತಾಕ್ಷ, ಕಾರ್‍ಯದರ್ಶಿ ಕೀರ್ತನ್ ಕೋಡಿಬೈಲು,ಕ್ರೀಡಾ ಸಂಚಾಲಕ ಸಂತೋಷ್ ಕೆರೆತಕೊಚ್ಚಿ, ರಾಜೇಶ್ ರೈ ಮುಗೇರು, ವಿವಿಧ ಸಂಘಟನೆಗಳ ಪ್ರಮುಖರಾದ ಗಂಗಾಧರ್ ಸುಣ್ಣಾಜೆ, ಶ್ರೀಧರ್ ಸುಣ್ಣಾಜೆ, ಸತೀಶ್ ಬಲ್ಯಾಯ, ಶಿವರಾಮ ಗೌಡ ಮೆದು, ಕುಲಪ್ರಕಾಶ್ ಮೆದು, ಉಮಾಪ್ರಸಾದ್ ರೈ ನಡುಬೈಲು, ದಿನೇಶ್ ಆಚಾರ್ಯ ಸವಣೂರು, ವಸಂತಿ ಶಿವರಾಮ ಗೌಡ ಮೆದು, ರಕ್ಷಾ ಸುಣ್ಣಾಜೆ, ಚಂದ್ರಶೇಖರ್ ಮೆದು. ಕರುಣಾಕರ್ ದೇವಸ್ಯ ಸಹಿತ ನೂರಾರು ಮಂದಿ ಭಾಗವಹಿಸಿದರು. ಸಂಗೀತ ಕುರ್ಚಿ, ಹಗ್ಗಜಗ್ಗಾಟ ಸಹಿತ ಅನೇಕ ಆಟೋಟ ನಡೆಯಿತು.

LEAVE A REPLY

Please enter your comment!
Please enter your name here