ಪುತ್ತೂರು: ನಿಮ್ಮ ಮಕ್ಕಳು ಬೇಸಿಗೆ ರಜೆಯಲ್ಲಿ ಶಿಬಿರಗಳಿಗೆ ಹೋಗಲು ಹೆಜ್ಜೆಯನ್ನು ಇಟ್ಟಿರಬಹುದು. ಅಚ್ಚರಿಯ ವಿಷಯವೇನೆಂದರೆ , ರಜೆಯನ್ನು ಮಜವಾಗಿ ಕಳೆಯಲು ಅವರ ನಿರ್ಧಾರವಿದ್ದು, ಪೋಷಕರೇ ನೀವು ಮರು ಯೋಚಿಸದೇ ಅವರ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸುವುದು ಒಳ್ಳೆಯದು. ಬೇಸಿಗೆ ಶಿಬಿರಗಳು ಮಕ್ಕಳಿಗೆ ತರಗತಿಯಲ್ಲಿ ಅಥವಾ ಮನೆಯಲ್ಲಿ ಹೇಳಿಕೊಡುವ ವಿಚಾರಗಳನ್ನು ತಿಳಿಸುವುದಿಲ್ಲ. ಇಲ್ಲಿ ಮಕ್ಕಳು ಕೆಲವೊಂದು ನಿರ್ದಿಷ್ಟ ಕಲೆಗಳ ಜೊತೆಗೆ ಆಟವನ್ನಾಡುತ್ತಾರೆ.ಇಂತಹ ಒಂದು ವಿಭಿನ್ನ ಪ್ರಯತ್ನವನ್ನು ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯು ಮಾಡಿದೆ.
ಎ.23 ರಂದು ಪ್ರಾರಂಭವಾಗುವ ಬೇಸಗೆ ಶಿಬಿರದಲ್ಲಿ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಸಿದ್ದಪಡಿಸಿ, ಟಿ.ವಿ ಮೊಬೈಲ್ಗಳ ಮುಂದೆ ರಜೆಯನ್ನು ಕಳೆಯದೆ, ಮಕ್ಕಳನ್ನು ಹೊಸ ಕಲಿಕೆಗೆ ಸೆಳೆಯುವ ಪ್ರಯತ್ನದಲ್ಲಿದೆ.
ಮಕ್ಕಳಿಗೆ ದೊರೆಯುವ ಚಟುವಟಿಕೆಗಳು:
ವಿಜ್ಞಾನ ಪ್ರಯೋಗಗಳು, ಮ್ಯಾಥ್ಸ್ ಟ್ರಿಕ್ಸ್, ಕ್ಯಾಲಿಗ್ರಫಿ ಬರವಣಿಗೆ, ಐಕ್ಯೂ ಟೆಸ್ಟ್, ಮೈಂಡ್ ಗೇಮ್ಸ್ , ಕಲೆ ಮತ್ತು ಕರಕುಶಲ, ಮಕ್ಕಳ ಕಥೆ ಮತ್ತು ನಾಟಕ, ಮಡ್ & ವಾಟರ್ ಫನ್, ಪುಟ್ಟ ಬಾಣಸಿಗ ಹೀಗೆ ಮಕ್ಕಳಿಗೆ ಸಂಸ್ಥೆಯಲ್ಲಿ ದೊರೆಯುವ ಚಟುವಟಿಕೆಗಳಾಗಿವೆ ಇಲ್ಲಿ ಮಕ್ಕಳು ಬಹಳಷ್ಟು ಚಟುವಟಿಕೆಗಳಲ್ಲಿ ಪಾಲುಗೊಳ್ಳುವುದರಿಂದ ತಮ್ಮ ಆಸಕ್ತಿಯೇನು ಎಂಬುದನ್ನು ಅರಿಯುತ್ತಾರೆ, ಸಮಾನಾಸಕ್ತಿ ಇರುವ ಮಕ್ಕಳು ಬಂದಿರುವುದರಿಂದ ಇಲ್ಲಿ ಮಗು ತಾನು ಹೇಗೆ ಇತರರೊಡನೆ ಬೆರೆಯಬೇಕು, ಉಳಿದವರೊಡನೆ ಒಟ್ಟಾಗಿ ಹೇಗೆ ಕೆಲಸ ಮಾಡಬೇಕು ಎನ್ನುವುದನ್ನು ಅರಿತುಕೊಳ್ಳುತ್ತಾರೆ. ಇದು ಜೀವನದ ಹಾದಿಯಲ್ಲಿ ಮಕ್ಕಳಿಗೆ ಹೊಸ ದಾರಿಗಲ್ಲಾಗುತ್ತದೆ.
ಈ ಶಿಬಿರಗಳು ಶಿಕ್ಷಣ–ಅಂಕಗಳು- ಗ್ರೇಡ್ ಪದ್ದತಿಯಿಂದ ಹೊರತಾಗಿರುವುದರಿಂದ ಮಕ್ಕಳ ಮನಸ್ಸಿನ ಭಾರವನ್ನು ಇಳಿಸುತ್ತವೆ. ವರುಷವಿಡೀ ಪರೀಕ್ಷೆಗಳ ಜಂಜಾಟದಿಂದ ನೊಂದ ಮನಸ್ಸಿಗೆ ಇವುಗಳಲ್ಲಿ ಮುದವನ್ನು ನೀಡುತ್ತವೆ. ದಾಖಲಾತಿಗಾಗಿ ಪುತ್ತೂರಿನ ಐ.ಆರ್.ಸಿ.ಎಂ.ಡಿ ಶಿಕ್ಷಣ ಸಂಸ್ಥೆಯನ್ನು ಸಂಪರ್ಕಿಸಿ 9945988118 / 9632320477