ಪುತ್ತೂರು: ನೆಲ್ಲಿಕಟ್ಟೆ ಈಶ ಎಜ್ಯುಕೇಶನಲ್ & ಸೋಷಿಯಲ್ ಸರ್ವೀಸ್ ಟ್ರಸ್ಟ್ನಡಿಯಲ್ಲಿ ಕಳೆದ 23 ವರ್ಷಗಳಿಂದ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಈಶ ವಿದ್ಯಾಲಯ 2022-2023ನೇ ಸಾಲಿನ ದ್ವಿತೀಯ ಪಿ.ಯು.ಸಿ ಕಲಾ ವಿಭಾಗದಲ್ಲಿ ಶೇ.85, ವಾಣಿಜ್ಯ ವಿಭಾಗದಲ್ಲಿ ಶೇ.90 ಹಾಗೂ ವಿಜ್ಞಾನ ವಿಭಾಗದಲ್ಲಿ ಶೇ.100 ಫಲಿತಾಂಶ ಪಡೆದುಕೊಂಡಿದೆ.
ಕಲಾ ವಿಭಾಗ:
ದೈನಂದಿನ ತರಗತಿಗೆ ಹಾಜರಾದ ಕಲಾ ವಿಭಾಗದ 14 ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಗೀತಾ (473), ಧನ್ಯಾ(448), ಸಲ್ಮಾನ್ ಫಾರೀಸ್(435), ಅನ್ವಿತಾ(403), ವಿಜಿತ್(393), ಪೂಜಾಶ್ರೀ ಸಿ(393),
ಶೋಭಿತ್ ಎಂ.(365)ರವರು ಪ್ರಥಮ ಶ್ರೇಣ, ಶರತ್(308) ದ್ವಿತೀಯ ದರ್ಜೆ, ಧನುಶ್ ಬಿ.(275), ಕೌಶಿಕ್ ಕೆ.(268), ಪೂರ್ವಿಕಾ(260), ಮಧು ಕುಮಾರ್(256) ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ವಾಣಿಜ್ಯ ವಿಭಾಗ:
ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 20 ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ಶರಣ್ಯಾ ಕೆ.ಎಸ್(372) ಪ್ರಥಮ ದರ್ಜೆ, ಎಂ.ಹಫೀಝ್ ರೆಹಮಾನ್(344), ಉಮ್ಮರ್ ಮೆಹರೂಫ್(327)ರವರು ದ್ವಿತೀಯ ದರ್ಜೆ, ನಿಝಾಮುದ್ಧೀನ್(292), ಅಲ್ ಅಮೀನ್(284), ಸಪ್ರಾಜ್(276), ಮೊಹಮ್ಮದ್ ಬಿಲಾಲ್(269), ಪ್ರೀತಿ(267), ಮೊಹಮ್ಮದ್ ಯಾಸೀನ್(266), ಖಲಂದರ್ ಇರ್ಝಾನ್(256), ಮಹಮ್ಮದ್ ಆಸೀಫ್( 247), ಮೊಹಮ್ಮದ್ ನೌಷಾದ್(254), ಮೊಹಮ್ಮದ್ ಝಹೀರ್(253), ಮೊಹಮ್ಮದ್ ರಾಝ್(243), ಮೊಹಮ್ಮದ್ ಶಾಲಿ(221)ರವರು ತೃತೀಯ ದರ್ಜೆಯೊಂದಿಗೆ ಉತ್ತೀರ್ಣರಾಗಿದ್ದಾರೆ.ವಿಜ್ಞಾನ ವಿಭಾಗ: ವಿಶೇಷ ತರಬೇತಿಗೆ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 3 ವಿದ್ಯಾರ್ಥಿ-ವಿದ್ಯಾರ್ಥಿನಿಯರಲ್ಲಿ ರಕ್ಷಿತ್ ಸಿ.ಬಿ(486), ಸ್ವೀಡಲ್ ಮರೀಯ ಲೇವಿಸ್(450), ಯಶ್ಮೀತಾ ಬಿ.(386) ಅಂಕಗಳೊAದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
2023- 2024ನೇ ಸಾಲಿನಲ್ಲಿ ಖಾಸಗಿಯಾಗಿ ನೇರವಾಗಿ ಪಿ.ಯು.ಸಿ ಕಲಾ, ವಾಣಿಜ್ಯ ವಿಭಾಗಕ್ಕೆ ಹಾಗೂ ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ಖಾಸಗಿಯಾಗಿ ನೇರವಾಗಿ ಎಸ್.ಎಸ್.ಎಲ್.ಸಿ ವಿಭಾಗಕ್ಕೆ ದಾಖಲಾತಿ ಆರಂಭಗೊಂಡಿದೆ. ಆಸಕ್ತರು ಸಂಸ್ಥೆ ಅಥವಾ ಸಂಸ್ಥೆಯ ದೂರವಾಣಿ ಸಂಖ್ಯೆ 8722293944ನ್ನು ಸಂಪರ್ಕಿಸಬಹುದು ಎಂದು ಪ್ರಾಂಶುಪಾಲರಾದ ಎಂ.ಗೋಪಾಲಕೃಷ್ಣ ಈಶ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.